KN/Prabhupada 0091 - ನೀನು ಇಲ್ಲಿ ಬೆತ್ತಲೆಯಾಗಿ ನಿಲ್ಲು

Revision as of 01:46, 20 February 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0091 - in all Languages Category:KN-Quotes - 1975 Category:KN-Quotes - M...")
(diff) ← Older revision | Latest revision (diff) | Newer revision → (diff)


Morning Walk -- July 16, 1975, San Francisco

ಧರ್ಮಾಧ್ಯಕ್ಷ: ಇತ್ತೀಚಿನ ದಿನಗಳಲ್ಲಿ ಅವರು ನಿಜವಾಗಿಯೂ ತಮ್ಮ ದೋಷವನ್ನು ಅರಿತುಕೊಂಡಿದ್ದಾರೆ, ಮತ್ತು ಅವರು ಸಾವನ್ನು ಹೆಚ್ಚು ಅಧ್ಯಯನ ಮಾಡುತ್ತಿದ್ದಾರೆ, ಜನರನ್ನು ಸಾವಿಗೆ ಹೆಚ್ಚು ಸಿದ್ಧಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅದರ ಬಗ್ಗೆ ಹೇಳುವ ಏಕೈಕ ವಿಷಯವೆಂದರೆ, "ಅದನ್ನು ಸ್ವೀಕರಿಸಿ." ಅವರು ಮಾಡಬಹುದಾದ ಏಕೈಕ ವಿಷಯವೆಂದರೆ, "ನೀವು ಸಾಯುವಿರಿ. ಆದ್ದರಿಂದ ಅದನ್ನು ಖುಷಿಯಿಂದ ಸ್ವೀಕರಿಸಿ."

ಪ್ರಭುಪಾದ: ಆದರೆ ನಾನು ಸಾಯಲು ಬಯಸುವುದಿಲ್ಲ. ನನಗೇಕೆ ಖುಷಿಯಾಗಬೇಕು? “ನೀನು ಖೂಷಿಯಾಗಿರು", ಎಂದು ನೀನು ಹೇಳುತ್ತೀಯ, ಧೂರ್ತ. (ನಗು) "ಖುಷಿಯಾಗಿ ಗಲ್ಲಿಗೇರು." (ನಗು) ವಕೀಲನು ಹೇಳುತ್ತಾನೆ, "ಪರವಾಗಿಲ್ಲ. ನೀನು ಮೊಕದ್ದಮೆಯನ್ನು ಸೋತ್ತಿದ್ದೀಯ. ಈಗ ನೀನು ಖುಷಿಯಿಂದ ಗಲ್ಲಿಗೇರು". (ನಗು)

ಧರ್ಮಾಧ್ಯಕ್ಷ: ಇದುವೇ ನಿಜವಾಗಿಯು ಆಧುನಿಕ ಮನೋವಿಜ್ಞಾನದ ಮುಖ್ಯ ಗುರಿ, ಜನರು ಈ ಭೌತಿಕ ಜಗತ್ತಿನಲ್ಲಿ ಉಳಿಯಬೇಕು ಎಂಬ ಸತ್ಯಕ್ಕೆ ಹೊಂದಿಕೊಳ್ಳುವಂತೆ ಮಾಡುವುದು, ಮತ್ತು ಐಹಿಕ ಪ್ರಪಂಚವನ್ನು ತೊರೆಯಲು ಸ್ವಲ್ಪ ಆಸೆ ಇದ್ದರೂ, ಅವರು ನಿಮಗೆ ಹುಚ್ಚು ಎಂದು ಹೇಳುವರು. "ಇಲ್ಲ, ಇಲ್ಲ. ನೀವು ಭೌತಿಕ ಸ್ಥಿತಿಗೆ ಇನ್ನೂ ಹೆಚ್ಚು ಹೊಂದಿಕೊಳ್ಳಬೇಕು."

ಬಹುಲಾಶ್ವ: ಜೀವನದ ಹತಾಶೆಗಳನ್ನು ಸ್ವೀಕರಿಸಲು ಅವರು ನಿಮಗೆ ಕಲಿಸುತ್ತಾರೆ.

ಪ್ರಭುಪಾದ: ಏಕೆ ಹತಾಶೆ? ನೀವು ದೊಡ್ಡ, ದೊಡ್ಡ ವಿಜ್ಞಾನಿಗಳು. ನೀವು ಪರಿಹರಿಸಲು ಸಾಧ್ಯವಿಲ್ಲವೇ?

ಧರ್ಮಾಧ್ಯಕ್ಷ: ಅವರೂ ಅದೇ ರೀತಿಯ ಸಮಸ್ಯೆಗಳನ್ನು ಹೊಂದಿರುವುದರಿಂದ ಅವುಗಳನ್ನು ಪರಿಹರಿಸಲು ಸಾಧ್ಯವಿಲ್ಲ.

ಪ್ರಭುಪಾದ: ಅದೇ ತರ್ಕ, "ಖುಷಿದಿಂದ ಗಲ್ಲಿಗೇರು." ಅಷ್ಟೇ. ಕೆಲವು ಕಷ್ಟಕರವಾದ ವಿಷಯ ಬಂದ ಕೂಡಲೇ ಅವರು ಅದನ್ನು ಬಿಟ್ಟುಬಿಡುತ್ತಾರೆ. ಮತ್ತು ಅವರು ಕೆಲವು ಅಸಂಬದ್ಧ ವಿಷಯವನ್ನು ಊಹಿಸುತ್ತಾರೆ. ಅಷ್ಟೇ. ಇದು ಅವರ ಶಿಕ್ಷಣ. ಶಿಕ್ಷಣ ಎಂದರೆ ಅತ್ಯಂತಿಕ-ದುಖ-ನಿವೃತ್ತಿ, ಎಲ್ಲ ಅಸಂತೋಷದ ಅಂತಿಮ ಪರಿಹಾರ. ಅದು ಶಿಕ್ಷಣ, ಸ್ವಲ್ಪ ಮಟ್ಟಿಗೆ ತಿಳಿದ ನಂತರ, "ಇಲ್ಲ, ನೀವು ಸಂತೋಷದಿಂದ ಸಾಯಬಹುದು", ಎಂಬುದಲ್ಲ. ಮತ್ತು ದುಃಖ ಎಂದರೇನು? ಅದನ್ನು ಕೃಷ್ಣ ವಿವರಿಸಿದ್ದಾನೆ: ಜನ್ಮ, ಮೃತ್ಯು, ಜರಾ, ವ್ಯಾಧಿ ದುಃಖ ದೋಷಾನು… (ಭ.ಗೀ 13.9). ಇವು ನಿಮ್ಮ ಅಸಂತೋಷಗಳು. ಅವನ್ನು ಪರಿಹರಿಸಲು ಪ್ರಯತ್ನಿಸಿ. ಆದರೆ ಅವರು ಇವನ್ನು ಎಚ್ಚರಿಕೆಯಿಂದ ತಪ್ಪಿಸುತ್ತಿದ್ದಾರೆ. ಅವರು ಮೃತ್ಯು, ಅಥವ ಜನ್ಮ, ಜರಾ, ವ್ಯಾಧಿಗಳನ್ನು ತಡೆಯಲು ಸಾಧ್ಯವಿಲ್ಲ. ಮತ್ತು ಜೀವನ, ಜನನ, ಮತ್ತು ಮರಣದ ಅಲ್ಪಾವಧಿಯಲ್ಲಿ, ಅವನು ದೊಡ್ಡ, ದೊಡ್ಡದಾದ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾನೆ, ಮತ್ತು ಮುಂದಿನ ಬಾರಿ ಅವನು ಕಟ್ಟಡದೊಳಗೆ ಒಂದು ಇಲಿಯಾಗುತ್ತಾನೆ. (ನಗು) ಪ್ರಕೃತಿ. ನೀನು ಪ್ರಕೃತಿಯ ನಿಯಮವನ್ನು ತಪ್ಪಿಸಲು ಸಾಧ್ಯವಿಲ್ಲ. ನೀನು ಸಾವನ್ನು ತಪ್ಪಿಸಲು ಸಾಧ್ಯವಿಲ್ಲ, ಪ್ರಕೃತಿಯು ನಿನಗೆ ಮತ್ತೊಂದು ದೇಹವನ್ನು ನೀಡುತ್ತದೆ. ಈ ವಿಶ್ವವಿದ್ಯಾಲಯದಲ್ಲಿ ಮರವಾಗು. ಐದು ಸಾವಿರ ವರ್ಷಗಳ ಕಾಲ ನಿಲ್ಲು. ನೀನು ಬೆತ್ತಲೆಯಾಗಿರಲು ಬಯಸಿದೆ. ಈಗ ಯಾರೂ ಆಕ್ಷೇಪಿಸುವುದಿಲ್ಲ. ನೀನು ಇಲ್ಲಿ ಬೆತ್ತಲೆಯಾಗಿ ನಿಲ್ಲು.