KN/Prabhupada 0096 - ನಾವು ಭಾಗವತ ವ್ಯಕ್ತಿಯಿಂದ ಕಲಿಯಬೇಕು

Revision as of 03:46, 25 March 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0096 - in all Languages Category:KN-Quotes - 1975 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 13.4 -- Miami, February 27, 1975

ನಾನು ಯೋಚಿಸುತ್ತಿದ್ದೇನೆ, "ಅಮೇರಿಕನ್, ಇಂಡಿಯನ್, ಹಿಂದೂ, ಮುಸ್ಲಿಂ," ಇದು ನನ್ನ ಹೃದಯದಲ್ಲಿರುವ ಕೊಳಕು ವಿಷಯಗಳು. ನಿಮ್ಮ ಹೃದಯವನ್ನು ನೀವು ಶುದ್ಧೀಕರಿಸುತ್ತೀರಿ. ಹೃದೈ ಅತಃ-ಸ್ಥಃ ಅಭದ್ರಾಣಿ. ಕೊಳಕು ವಸ್ತುಗಳು ನಮ್ಮ ಹೃದಯದಲ್ಲಿವೆ, ಆದ್ದರಿಂದ ನಾವು ನಮ್ಮ ಹೃದಯವನ್ನು ಶುದ್ಧೀಕರಿಸಿದರೆ, ನಾವು ಈ ಉಪಾಧಿಳಿಂದ ಮುಕ್ತರಾಗುತ್ತೇವೆ. ನಷ್ಟ-ಪ್ರಾಯೇಷು ಅಭದ್ರೇಷು ನಿತ್ಯಂ ಭಾಗವತ ಸೇವಯಾ (ಶ್ರೀ.ಭಾ 1.2.18). ನಷ್ಟ-ಪ್ರಾಯೇಷು. ನಾವು ನಿಯಮಿತವಾಗಿ ಶ್ರೀಮದ್ ಭಾಗವತಂ ಅಥವಾ ಭಗವದ್ಗೀತೆಯನ್ನು ಕೇಳಿದರೆ ಈ ಕೊಳಕು ವಸ್ತುಗಳು ಶುದ್ಧವಾಗುತ್ತವೆ. ನಿತ್ಯ ಭಾಗವತ...

ಮತ್ತು ಭಾಗವತ ಎಂದರೆ ಭಾಗವತ ಪುಸ್ತಕ, ಮತ್ತು ಭಾಗವತ ವ್ಯಕ್ತಿ. ಭಾಗವತ ವ್ಯಕ್ತಿಯೇ ಆಧ್ಯಾತ್ಮಿಕ ಗುರು. ಅಥವಾ ಯಾವುದೇ ಶ್ರೇಷ್ಠ ಭಕ್ತ. ಅವನು ಭಾಗವತ, ಮಹಾ-ಭಾಗವತ, ಭಾಗವತ. ಆದ್ದರಿಂದ ಭಾಗವತ-ಸೇವಯಾ ಎಂದರೆ ಭಗವದ್ಗೀತೆ ಮತ್ತು ಭಾಗವತವನ್ನು ಓದುವುದು ಮಾತ್ರವಲ್ಲ, ನಾವು ಭಾಗವತ ವ್ಯಕ್ತಿಯಿಂದ ಕಲಿಯಬೇಕು. ಅದು ಅಗತ್ಯ.

ಚೈತನ್ಯ ಮಹಾಪ್ರಭು ಸಲಹೆ ನೀಡಿದರು, ಭಾಗವತ ಪರಾ ಗಿಯಾ ಭಾಗವತ-ಸ್ಥಾನೆ: "ನೀವು ಭಾಗವತವನ್ನು ಕಲಿಯಲು ಬಯಸಿದರೆ, ಆತ್ಮಜ್ಞಾನಿಯಾದ ಭಾಗವತ ವ್ಯಕ್ತಿಯ ಬಳಿಗೆ ಹೋಗಿ." ವೃತ್ತಿಪರನಲ್ಲ. ಅದು ನಿಮಗೆ ಸಹಾಯ ಮಾಡುವುದಿಲ್ಲ. ಅಧಿಕೃತ ವೃತ್ತಿಪರನು - ನಾನು ದೇವಸ್ಥಾನಕ್ಕೆ, ಚರ್ಚ್ಗೆ ಹೋಗುತ್ತೇನೆ ಮತ್ತು ಮತ್ತೆ ನರಕಯಾತನೆ ಸ್ಥಿತಿಗೆ ಹಿಂತಿರುಗಿ... ಇಲ್ಲ. ನೀವು ಆತ್ಮವನ್ನು ಅರಿತುಕೊಂಡ ಭಾಗವತ ವ್ಯಕ್ತಿಯೊಂದಿಗೆ ಸಹವಾಸ ಮಾಡುತ್ತೀರಿ, ಮತ್ತು ಅವನಿಂದ ಇದೇ ಪುಸ್ತಕ, ಇದೇ ಜ್ಞಾನವನ್ನು ಪಡೆಯುತ್ತಿರಿ. ಕೃಷ್ಣನ ಪ್ರತಿನಿಧಿ. ಕೃಷ್ಣ ಹೇಳುವಂತೆಯೇ, ತತ್ ಸಮಾಸೇನ ಮೇ ಶೃಣು. ಮೇ ಶೃಣು: "ನನ್ನಿಂದ ಅಥವಾ ನನ್ನ ಪ್ರತಿನಿಧಿಯಿಂದ ಕೇಳಿ. ಆಗ ನೀವು ಲಾಭ ಪಡೆಯುತ್ತೀರಿ."

ಆದ್ದರಿಂದ ಬಳಲುತ್ತಿರುವ ಜನರಿಗೆ ಅವಕಾಶ ನೀಡಲು ಈ ಕೇಂದ್ರಗಳನ್ನು ತೆರೆಯಲಾಗುತ್ತಿದೆ, ಈ ಜೀವನದಲ್ಲಿ ಮಾತ್ರವಲ್ಲ, ಜನ್ಮಜನ್ಮಾಂತರಗಳವರೆಗೆ.

ಐ ರೂಪೇ ಬಹ್ಮಾಂಡ ಭ್ರಮಿತೇ ಕೋನ ಭಾಗ್ಯವಾನ್ ಜೀವ
ಗುರು-ಕೃಷ್ಣ-ಕೃಪಾಯ ಪಾಯ ಭಕ್ತಿ-ಲತಾ-ಬೀಜ
(ಚ.ಚ ಮಧ್ಯ 19.151)

ಆದ್ದರಿಂದ ಇದು ನಮ್ಮ ಕರ್ತವ್ಯ. ಕೃಷ್ಣನ ಪರವಾಗಿ ನಾವು ಈ ಕರ್ತವ್ಯವನ್ನು ಸ್ವೀಕರಿಸಿದ್ದೇವೆ. ಕೃಷ್ಣನು ವೈಯಕ್ತಿಕವಾಗಿ ಕಲಿಸಲು ಬರುತ್ತಾನೆ. ಅವನು ತನ್ನ ಶ್ರೀಮದ್ ಭಾಗವತವನ್ನು ನಮಗಾಗಿ ಬಿಟ್ಟು ಹೋದಂತಯೇ. ನಂತರ ಇದನ್ನು ಜನರಿಗೆ ಸಾಮಾನ್ಯವಾಗಿ ವಿವರಿಸಲು ಅವನು ತನ್ನ ಭಕ್ತರಿಗೆ ಒಪ್ಪಿಸುತ್ತಾನೆ. ನಾವು ಅದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ನಾವು ಏನನ್ನೂ ತಯಾರಿಸಿಲ್ಲ, ನಮ್ಮದು ಎನ್ನುವ ಯಾವುದೂ ಇಲ್ಲ. ಆಸ್ತಿ ಮತ್ತು ಸಂಪತ್ತು ಇದೆ. ನಾವು ಸೇವಕನಾಗಿ ಸಮ್ಮನೆ ವಿತರಿಸುತ್ತಿದ್ದೇವೆ. ಅಷ್ಟೇ. ಮತ್ತು ನಮಗೆ ಯಾವುದೇ ತೊಂದರೆ ಇಲ್ಲ. ನಾವು ಕೇವಲ ಭಗವದ್ಗೀತೆ, ಕೃಷ್ಣನ ಬೋಧನೆಯನ್ನು, ಪ್ರಸ್ತುತಪಡಿಸಿದರೆ ನಮ್ಮ ಕರ್ತವ್ಯವು ಮುಗಿದಿದೆ. ನಾವು ಏನನ್ನೂ ತಯಾರಿಸಬೇಕಾಗಿಲ್ಲ; ಯಾವುದನ್ನೂ ತಯಾರಿಸಲು ನಮಗೆ ಅಧಿಕಾರವಿಲ್ಲ. ಇನ್ನು ಅನೇಕರಿದ್ದಾರೆ. ಅವರು ಹೊಸ ರೀತಿಯ ಆಲೋಚನೆಗಳನ್ನು, ಹೊಸ ರೀತಿಯ ಸಿದ್ಧಾಂತಗಳನ್ನು ತಯಾರಿಸುತ್ತಾರೆ..., ಎಲ್ಲಾ ಅಸಂಬದ್ಧವಾದವು. ಅದು ಸಹಾಯ ಮಾಡುವುದಿಲ್ಲ. ನಿಜವಾದ ಜ್ಞಾನವನ್ನು ಸ್ವೀಕರಿಸಿ.