KN/Prabhupada 0100 - ನಾವು ಕೃಷ್ಣನೊಂದಿಗೆ ಶಾಶ್ವತವಾದ ಸಂಬಂಧ ಹೊಂದಿದ್ದೇವೆ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0100 - in all Languages Category:KN-Quotes - 1971 Category:KN-Quotes - L...")
 
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
 
Line 7: Line 7:
[[Category:KN-Quotes - in USA]]
[[Category:KN-Quotes - in USA]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0099 - How to Become Recognized by Krsna|0099|Prabhupada 0101 - Our Healthy Life is to Enjoy Eternal Life|0101}}
{{1080 videos navigation - All Languages|Kannada|KN/Prabhupada 0099 - ಕೃಷ್ಣನಿಂದ ಹೇಗೆ ಮಾನ್ಯತೆ ಪಡೆಯುವುದು|0099|KN/Prabhupada 0101 - ನಮ್ಮ ಆರೋಗ್ಯಕರ ಜೀವನವು ಶಾಶ್ವತ ಜೀವನವನ್ನು ಆನಂದಿಸುವುದು|0101}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 17:51, 1 October 2020



Lecture on SB 6.1.8 -- New York, July 22, 1971

ನಾವು ಕೃಷ್ಣನೊಂದಿಗೆ ಶಾಶ್ವತವಾದ ಸಂಬಂಧ ಹೊಂದಿದ್ದೇವೆ. ಪ್ರಸ್ತುತ ಕ್ಷಣದಲ್ಲಿ ಅದನ್ನು ಸರಳವಾಗಿ ಮರೆತುಬಿಡಲಾಗಿದೆ, ನಿಗ್ರಹಿಸಲಾಗಿದೆ. ಆದ್ದರಿಂದ ನಾವು ಕೃಷ್ಣನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಯೋಚಿಸುತ್ತಿದ್ದೇವೆ. ಆದರೆ ಅದು ಸತ್ಯವಲ್ಲ. ನಾವು ಕೃಷ್ಣನ ಭಾಗಾಂಶವಾಗಿರುವ ಕಾರಣ, ಸಂಬಂಧವು ಶಾಶ್ವತವಾಗಿದೆ. ನಾವು ಕೇವಲ ಅದನ್ನು ಪುನಶ್ಚೇತನಗೊಳಿಸಬೇಕು. ಅದೇ ಕೃಷ್ಣ ಪ್ರಜ್ಞೆ. ಕೃಷ್ಣ ಪ್ರಜ್ಞೆ ಎಂದರೆ... ನಾವು ಈಗ ವಿಭಿನ್ನ ಪ್ರಜ್ಞೆಯಲ್ಲಿದ್ದೇವೆ. ನಾನು ಭಾರತೀಯನೆಂದು ಯೋಚಿಸುತ್ತಿದ್ದೇನೆ. "ನಾನು ಅಮೇರಿಕನ್” ಎಂದು ಯಾರೋ ಯೋಚಿಸುತ್ತಿದ್ದಾರೆ. "ನಾನು ಇದು, ನಾನು ಅದು" ಎಂದು ಯೋಚಿಸುತ್ತಿದ್ದಾರೆ. ಆದರೆ ನಿಜವಾದ ಆಲೋಚನೆ, "ನಾನು ಕೃಷ್ಣನವನು" ಆಗಿರಬೇಕು. ಅದೇ ಕೃಷ್ಣ ಪ್ರಜ್ಞೆ. "ನಾನು ಕೃಷ್ಣನವನು." ಮತ್ತು ಕೃಷ್ಣ ಪ್ರಜ್ಞೆಯ ಸಂಬಂಧದಲ್ಲಿ, ಕೃಷ್ಣ ಎಲ್ಲರಿಗೋಸ್ಕರ, ಆದ್ದರಿಂದ ನಾನೂ ಕೂಡ ಎಲ್ಲರಿಗೋಸ್ಕರ. ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಭಾರತದಲ್ಲಿ, ವ್ಯವಸ್ಥೆಯು ಏನೆಂದರೆ ಹುಡುಗಿ ಹುಡುಗನೊಂದಿಗೆ ಮದುವೆಯಾದಾಗ, ಆದ್ದರಿಂದ ನಿಮ್ಮ ದೇಶದಲ್ಲಿ, ಎಲ್ಲೆಡೆ, ಅದೇ ವ್ಯವಸ್ಥೆ… ಹುಡುಗನ ಸೋದರಳಿಯ ಹುಡುಗಿಯನ್ನು "ಅತ್ತೆ" ಎಂದು ಕರೆಯುವಂತೆಯೇ. ಈಗ, ಅವಳು ಹೇಗೆ ಅತ್ತೆ ಆಗುತ್ತಾಳೆ? ಏಕೆಂದರೆ, ತನ್ನ ಗಂಡನೊಂದಿಗಿನ ಸಂಬಂಧದಲ್ಲಿ. ಮದುವೆಗೆ ಮುಂಚೆ, ಅವಳು ಅತ್ತೆ ಅಲ್ಲ, ಆದರೆ ಅವಳು ತನ್ನ ಗಂಡನೊಂದಿಗೆ ಸಂಬಂಧ ಹೊಂದಿದ ತಕ್ಷಣ ಗಂಡನ ಸೋದರಳಿಯನು ಅವಳ ಸೋದರಳಿಯನಾಗುತ್ತಾನೆ. ಉದಾಹರಣೆಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅದೇ ರೀತಿ, ನಾವು ನಮ್ಮ ಸಂಬಂಧವನ್ನು ಪುನಃ ಸ್ಥಾಪಿಸಿದರೆ, ಅಥವಾ ಕೃಷ್ಣನೊಂದಿಗೆ ನಮ್ಮ ಮೂಲ ಸಂಬಂಧವನ್ನು, ಮತ್ತು ಕೃಷ್ಣ ಎಲ್ಲರಿಗೋಸ್ಕರ, ಆದ್ದರಿಂದ ನಾನೂ ಎಲ್ಲರಿಗೂಸ್ಕರವಾಗುತ್ತೇನೆ. ಅದುವೇ ನಿಜವಾದ ವಿಶ್ವವ್ಯಾಪಿ ಪ್ರೇಮ. ಕೇಂದ್ರ ಬಿಂದುವಿನೊಂದಿಗೆ ನಿಮ್ಮ ಸಂಬಂಧವನ್ನು ನೀವು ಸ್ಥಾಪಿಸದ ಹೊರತು ಕೃತಕ, ನಾಮಮಾತ್ರದ ವಿಶ್ವವ್ಯಾಪಿ ಪ್ರೀತಿ ಸ್ಥಾಪಿಸಲು ಸಾಧ್ಯವಿಲ್ಲ. ನೀವು ಅಮೆರಿಕನ್ನರಂತೆ. ಏಕೆ? ಯಾಕೆಂದರೆ ನೀವು ಈ ಭೂಮಿಯಲ್ಲಿ ಹುಟ್ಟಿದ್ದೀರಿ. ಆದ್ದರಿಂದ ಇನ್ನೊಬ್ಬ ಅಮೇರಿಕನ್ ನಿಮ್ಮ ದೇಶದ ಸದಸ್ಯ, ಆದರೆ ನೀವು ಬೇರೆ ಏನಾದರೂ ಆಗಿದ್ದರೆ, ನಿಮಗೆ ಇನ್ನೊಬ್ಬ ಅಮೆರಿಕನ್ನರೊಂದಿಗೆ ಯಾವುದೇ ಸಂಬಂಧವಿಲ್ಲ. ಆದ್ದರಿಂದ ನಾವು ಕೃಷ್ಣನೊಂದಿಗೆ ನಮ್ಮ ಸಂಬಂಧವನ್ನು ಪುನಃ ಸ್ಥಾಪಿಸಬೇಕು. ಆಗ ಸಾರ್ವತ್ರಿಕ ಭ್ರಾತೃತ್ವ, ನ್ಯಾಯ, ಶಾಂತಿ, ಸಮೃದ್ಧಿಯ ಪ್ರಶ್ನೆ ಬರುತ್ತದೆ. ಇಲ್ಲದಿದ್ದರೆ, ಯಾವುದೇ ಸಾಧ್ಯತೆಯಿಲ್ಲ. ಕೇಂದ್ರ ಬಿಂದು ಕಾಣೆಯಾಗಿದೆ. ನ್ಯಾಯ ಮತ್ತು ಶಾಂತಿ ಹೇಗೆ ಇರಲು ಸಾಧ್ಯ? ಅದು ಸಾಧ್ಯವಿಲ್ಲ.

ಆದ್ದರಿಂದ ಭಗವದ್ಗೀತೆಯಲ್ಲಿ ಶಾಂತಿ ಸೂತ್ರವನ್ನು ನೀಡಲಾಗಿದೆ. ಶಾಂತಿ ಸೂತ್ರವೆಂದರೆ, ಕೇವಲ ಕೃಷ್ಣನು ಮಾತ್ರ ಆನುಭವಿಸುವವನು ಎಂದು ಅರ್ಥಮಾಡಿಕೊಳ್ಳಬೇಕು. ಈ ದೇವಾಲಯದಂತೆಯೇ, ನಮ್ಮ ಕೇಂದ್ರ ಬಿಂದುವು ಕೃಷ್ಣ. ನಾವು ಅಡುಗೆ ಮಾಡುತ್ತಿದ್ದರೆ, ಅದು ಕೃಷ್ಣನಿಗಾಗಿರುತ್ತದೆ, ನಮಗೋಸ್ಕರ ಅಡುಗೆ ಮಾಡುತ್ತಿಲ್ಲ. ಅಂತಿಮವಾಗಿ, ನಾವು ಪ್ರಸಾದವನ್ನು ತಿನ್ನುತ್ತೇವೆ, ಆದರೆ ನಾವು ಅಡುಗೆ ಮಾಡುವಾಗ, ನಾವು ನಮಗಾಗಿ ಅಡುಗೆ ಮಾಡುತ್ತಿದ್ದೇವೆ ಎಂದು ನಾವು ಭಾವಿಸುವುದಿಲ್ಲ. ನಾವು ಕೃಷ್ಣನಿಗಾಗಿ ಅಡುಗೆ ಮಾಡುತ್ತಿದ್ದೇವೆ. ಹಣ ಸಂಗ್ರಹಿಸಲು ನೀವು ಹೊರಗೆ ಹೋದಾಗ, ಕೀರ್ತನ ತಂಡದಲ್ಲಿರುವ ವ್ಯಕ್ತಿಗಳು, ಅವರಿಗೆ ಯಾವುದೇ ವೈಯಕ್ತಿಕ ಆಸಕ್ತಿ ಇಲ್ಲ. ಇಲ್ಲ. ಅವರು ಸಂಗ್ರಹಿಸುತ್ತಿದ್ದಾರೆ, ಅಥವಾ ಸಾಹಿತ್ಯವನ್ನು ವಿತರಿಸುತ್ತಿದ್ದಾರೆ, ಕೃಷ್ಣನ ಸಲುವಾಗಿ, ಜನರನ್ನು ಕೃಷ್ಣ ಪ್ರಜ್ಞಾಪೂರ್ವಕವಾಗಿ ಮಾಡುವ ಕಾರಣಕ್ಕಾಗಿ. ಮತ್ತು ಎಷ್ಟು ನಿಧಿ ಇದೆಯೋ, ಅದನ್ನು ಕೃಷ್ಣನಿಗಾಗಿ ಖರ್ಚು ಮಾಡಲಾಗುತ್ತಿದೆ. ಆದ್ದರಿಂದ ಈ ರೀತಿಯಾಗಿ, ನಾವು ಈ ಜೀವನ ವ್ಯವಸ್ಥೆಯನ್ನು ಅಭ್ಯಾಸ ಮಾಡಿದಾಗ, ಕೃಷ್ಣನಿಗಾಗಿ ಎಲ್ಲವೂ, ಅದೇ ಕೃಷ್ಣ ಪ್ರಜ್ಞೆ. ಅದೇ ವಿಷಯ, ನಾವು ಏನು ಮಾಡುತ್ತಿದ್ದೇವೆ, ಅದನ್ನೆ ಮಾಡಬೇಕು. ನಾವು ಕೇವಲ, "ನಾನು ಕೃಷ್ಣನಿಗಾಗಿ ಮಾಡುತ್ತಿದ್ದೇನೆ, ಸ್ವಾರ್ಥಕ್ಕಲ್ಲ", ಎಂದು ಪ್ರಜ್ಞೆಯನ್ನು ಬದಲಾಯಿಸಬೇಕಾಗಿದೆ. ಈ ರೀತಿಯಾಗಿ, ನಾವು ಕೃಷ್ಣ ಪ್ರಜ್ಞೆಯನ್ನು ಬೆಳೆಸಿಕೊಂಡರೆ, ನಾವು ನಮ್ಮ ಮೂಲ ಪ್ರಜ್ಞೆಗೆ ಬರುತ್ತೇವೆ. ಆಗ ನಮಗೆ ಸಂತೋಷವಾಗುತ್ತದೆ.

ನಾವು ಮೂಲ ಪ್ರಜ್ಞೆಗೆ ಬರದಿದ್ದರೆ, ನಾವು ವಿಭಿನ್ನ ಪ್ರಮಾಣಗಳಲ್ಲಿ ಹುಚ್ಚರಾಗಿದ್ದೇವೆ. ಕೃಷ್ಣ ಪ್ರಜ್ಞೆಯಲ್ಲಿಲ್ಲದ ಪ್ರತಿಯೊಬ್ಬರೂ, ಅವನು ಹುಚ್ಚನಾಗಿರಬೇಕು ಏಕೆಂದರೆ ಅವನು ತಾತ್ಕಾಲಿಕ, ಅಸ್ಥಿರವಾದ ಮಟ್ಟದಿಂದ ಮಾತನಾಡುತ್ತಿದ್ದಾನೆ. ಅದು ಮುಗಿಯುತ್ತದೆ. ಆದರೆ ನಾವು, ಜೀವಾತ್ಮಗಳಾದ ನಾವು, ಶಾಶ್ವತರು. ಆದ್ದರಿಂದ ತಾತ್ಕಾಲಿಕ ವ್ಯವಹಾರ ನಮ್ಮ ವ್ಯವಹಾರವಲ್ಲ. ನಾವು ಶಾಶ್ವತವಾದ ಕಾರಣ ನಮ್ಮ ವ್ಯವಹಾರವೂ ಶಾಶ್ವತವಾಗಬೇಕು. ಮತ್ತು ಆ ಶಾಶ್ವತ ವ್ಯವಹಾರವೆಂದರೆ ಕೃಷ್ಣನಿಗೆ ಸೇವೆ ಸಲ್ಲಿಸುವುದು. ಈ ಬೆರಳು ನನ್ನ ದೇಹದ ಭಾಗಾಂಶವಾಗಿದೆ, ಆದರೆ ಈ ದೇಹಕ್ಕೆ ಸೇವೆ ಮಾಡುವುದೇ ಬೆರಳಿನ ಶಾಶ್ವತ ಕಾರ್ಯವು. ಅಷ್ಟೇ. ಇದಕ್ಕೆ ಬೇರೆ ಕಾರ್ಯವಿಲ್ಲ. ಮತ್ತು ಅದು ಬೆರಳಿನ ಆರೋಗ್ಯಕರ ಸ್ಥಿತಿ. ಅದು ಇಡೀ ದೇಹಕ್ಕೆ ಸೇವೆ ಸಲ್ಲಿಸಲಾಗದಿದ್ದರೆ, ಅದು ರೋಗಪೀಡಿತ ಸ್ಥಿತಿ. ಅಂತೆಯೇ, ಕೃಷ್ಣ ಶಾಶ್ವತ; ನಾವೂ ಶಾಶ್ವತರು. ನಿತ್ಯೋ ನಿತ್ಯಾನಾಂ ಚೇತನಶ್ ಚೇತನಾನಾಮ್ (ಕಠ ಉಪನಿಷದ್ 2.2.13). ಇವು ವೈದಿಕ ಆದೇಶಗಳು. ಆದಿ ಅನಂತನಾದವನು ಶ್ರೀ ಕೃಷ್ಣ, ಮತ್ತು ನಾವು ಸಹ ಅನಂತರು. ನಾವು ಸರ್ವೋಚ್ಚರಲ್ಲ; ನಾವು ಅಧೀನರು. ನಿತ್ಯೋ ನಿತ್ಯಾನಾಂ ಚೇತನಶ್ ಚೇತನಾನಾಮ್. ಅವನು ಪರಮ ಜೀವಾತ್ಮ, ಮತ್ತು ನಾವು ಅಧೀನ ಜೀವಾತ್ಮಗಳು. ಏಕೋ ಬಹುನಾಂ ಯೋ ವಿದಧಾತಿ ಕಾಮಾನ್. ಆ ಒಬ್ಬ ಪರಮ ಜೀವಾತ್ಮ, ಒಬ್ಬ ಅನಂತನು, ಅವನು ಬಹುಸಂಖ್ಯಾ ಅನಂತರಿಗೆ ಜೀವನದ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಿದ್ದಾನೆ. ಏಕೋ ಬಹುನಾಮ್, ಅನಿಯಮಿತ ಸಂಖ್ಯೆಯ ಜೀವಾತ್ಮಗಳು. ನೀವು ಎಣಿಸಲು ಸಾಧ್ಯವಿಲ್ಲ. ಬಹುನಾಮ್. ಇದು ನಮ್ಮ ಸಂಬಂಧ. ಭಾಗಾಂಶಗಳಾಗಿರುವುದರಿಂದ ನಾವು ಕೃಷ್ಣನಿಗೆ ಸೇವೆ ಸಲ್ಲಿಸಬೇಕು, ಮತ್ತು ಅಧೀನರಾಗಿರಬೇಕು. ಅವನು ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾನೆ. ಆತನೇ ಪರಮ ಪಿತ. ಈ ಜೀವನವು ಸಾಮಾನ್ಯ ಜೀವನ, ಮತ್ತು ವಿಮುಕ್ತ ಜೀವನ. ಕೃಷ್ಣ ಪ್ರಜ್ಞೆಯ ಈ ಪರಿಕಲ್ಪನೆಯನ್ನು ಮೀರಿ ಬೇರೆ ಯಾವುದೇ ಜೀವನವಾಗಲಿ, ಅದು ಪಾಪ ಜೀವನ.