KN/Prabhupada 0101 - ನಮ್ಮ ಆರೋಗ್ಯಕರ ಜೀವನವು ಶಾಶ್ವತ ಜೀವನವನ್ನು ಆನಂದಿಸುವುದು: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0101 - in all Languages Category:KN-Quotes - 1974 Category:KN-Quotes - C...")
 
m (Text replacement - "(<!-- (BEGIN|END) NAVIGATION (.*?) -->\s*){2,15}" to "<!-- $2 NAVIGATION $3 -->")
 
Line 7: Line 7:
[[Category:KN-Quotes - in India]]
[[Category:KN-Quotes - in India]]
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- TO CHANGE TO YOUR OWN LANGUAGE BELOW SEE THE PARAMETERS OR VIDEO -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0100 - We are Eternally Related with Krsna|0100|Prabhupada 0102 - The Speed of the Mind|0102}}
{{1080 videos navigation - All Languages|Kannada|KN/Prabhupada 0100 - ನಾವು ಕೃಷ್ಣನೊಂದಿಗೆ ಶಾಶ್ವತವಾದ ಸಂಬಂಧ ಹೊಂದಿದ್ದೇವೆ|0100|KN/Prabhupada 0102 - ಮನಸ್ಸಿನ ವೇಗ|0102}}
<!-- END NAVIGATION BAR -->
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 17:51, 1 October 2020



Press Conference -- April 18, 1974, Hyderabad

ಅತಿಥಿ (2): ಈ ಕೃಷ್ಣ ಪ್ರಜ್ಞೆಯ ಅಂತಿಮ ಗುರಿ ಏನು?

ಪ್ರಭುಪಾದ: ಹೌದು, ಅಂತಿಮ ಗುರಿ ಎಂದರೆ… ಇಲ್ಲ, ನಾನು ಹೇಳುತ್ತೇನೆ. ಅಂತಿಮ ಗುರಿ ಎಂದರೆ… ಆತ್ಮ ಮತ್ತು ವಸ್ತು ಇದೆ. ಭೌತಿಕ ಜಗತ್ತು ಇರುವಂತೆಯೇ, ಆಧ್ಯಾತ್ಮಿಕ ಜಗತ್ತೂ ಇದೆ. ಪರಸ್ ತಸ್ಮಾತ್ ತು ಭಾವಃ ಅನ್ಯಃ ಅವ್ಯಕ್ತಃ ಅವ್ಯಕ್ತಾತ್ ಸನಾತನಃ (ಭ.ಗೀ 8.20). ಆಧ್ಯಾತ್ಮಿಕ ಜಗತ್ತು ಶಾಶ್ವತವಾಗಿದೆ. ಭೌತಿಕ ಜಗತ್ತು ತಾತ್ಕಾಲಿಕವಾಗಿದೆ. ನಾವು ಆತ್ಮ. ನಾವು ಶಾಶ್ವತ. ಆದ್ದರಿಂದ ನಮ್ಮ ವ್ಯವಹಾರವು ಆಧ್ಯಾತ್ಮಿಕ ಜಗತ್ತಿಗೆ ಹಿಂತಿರುಗುವುದು, ಭೌತಿಕ ಜಗತ್ತಿನಲ್ಲಿ ಉಳಿದು, ದೇಹವನ್ನು ಕೆಟ್ಟದ್ದರಿಂದ ಅತಿ ಕೆಟ್ಟದಕ್ಕೆ, ಅಥವಾ ಅತಿ ಕೆಟ್ಟದ್ದರಿಂದ ಒಳ್ಳೆಯದಕ್ಕೆ ಬದಲಾಯಿಸುವುದಲ್ಲ. ಅದು ನಮ್ಮ ವ್ಯವಹಾರವಲ್ಲ. ಅದು ಒಂದು ರೋಗ. ನಮ್ಮ ಆರೋಗ್ಯಕರ ಜೀವನವು ಶಾಶ್ವತ ಜೀವನವನ್ನು ಆನಂದಿಸುವುದು. ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಾಂ ಮಮ (ಭ.ಗೀ 15.6). ಆದ್ದರಿಂದ ನಮ್ಮ ಮಾನವ ಜನ್ಮವನ್ನು ಆ ಪರಿಪೂರ್ಣ ಹಂತವನ್ನು ಸಾಧಿಸಲು ಬಳಸಿಕೊಳ್ಳಬೇಕು – ನಾವು ಬದಲಾಯಿಸಬೇಕಾದ ಈ ಭೌತಿಕ ದೇಹವನ್ನು ಇನ್ನು ಮುಂದೆ ಪಡೆಯಬಾರದು. ಇದೇ ಜೀವನದ ಗುರಿ.

ಅತಿಥಿ (3): ಒಂದು ಜನ್ಮದಲ್ಲಿ ಆ ಪರಿಪೂರ್ಣತೆ ಸಾಧ್ಯವೇ?

ಪ್ರಭುಪಾದ: ಹೌದು, ಒಂದು ಕ್ಷಣದಲ್ಲಿ, ನೀವು ಒಪ್ಪಿದರೆ. ಕೃಷ್ಣ ಹೇಳುತ್ತಾನೆ:

ಸರ್ವ-ಧರ್ಮಾನ್ ಪರಿತ್ಯಜ್ಯ
ಮಾಮ್ ಏಕಂ ಶರಣಂ ವ್ರಜ
ಅಹಂ ತ್ವಾಂ ಸರ್ವ ಪಾಪೇಭ್ಯೋ
ಮೋಕ್ಷಯಿಷ್ಯಾಮಿ ಮಾ ಶುಚಃ
(ಭ.ಗೀ 18.66).

ಪಾಪ ಕಾರ್ಯಗಳ ಕಾರಣದಿಂದಾಗಿ ನಾವು ನಮ್ಮ ದೇಹವನ್ನು ಬದಲಾಯಿಸುತ್ತೇವೆ, ಆದರೆ ನಾವು ಕೃಷ್ಣನಿಗೆ ಶರಣಾಗಿ, ಮತ್ತು ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸಿದರೆ, ತಕ್ಷಣ ನೀವು ಆಧ್ಯಾತ್ಮಿಕ ವೇದಿಕೆಯಲ್ಲಿದ್ದೀರಿ.

ಮಾಂ ಚ ಯೋ ‘ವ್ಯಭಿಚಾರೇಣ
ಭಕ್ತಿ-ಯೋಗೇನ ಸೇವತೇ
ಸ ಗುಣಾನ್ ಸಮತೀತ್ಯೈತಾನ್
ಬ್ರಹ್ಮ-ಭೂಯಾಯ ಕಲ್ಪತೇ
(ಭ.ಗೀ 14.26)

ನೀವು ಕೃಷ್ಣನ ಪರಿಶುದ್ಧ ಭಕ್ತರಾದ ತಕ್ಷಣ, ನೀವು ತಕ್ಷಣ ಈ ಐಹಿಕ ವೇದಿಕೆಯನ್ನು ಮೀರುತ್ತೀರಿ. ಬ್ರಹ್ಮ-ಭೂಯಾಯ ಕಲ್ಪತೇ. ನೀವು ಆಧ್ಯಾತ್ಮಿಕ ವೇದಿಕೆಯಲ್ಲಿ ಉಳಿಯುತ್ತೀರಿ. ಮತ್ತು ನೀವು ಆಧ್ಯಾತ್ಮಿಕ ವೇದಿಕೆಯಲ್ಲಿ ಮೃತರಾದರೆ, ನೀವು ಆಧ್ಯಾತ್ಮಿಕ ಜಗತ್ತಿಗೆ ಹೋಗುತ್ತೀರಿ.