KN/Prabhupada 0102 - ಮನಸ್ಸಿನ ವೇಗ

Revision as of 14:53, 6 May 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0102 - in all Languages Category:KN-Quotes - 1973 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on SB 5.5.1-8 -- Stockholm, September 8, 1973

ನಿಮಗೆ ಈಗ ವಿಮಾನವಿದೆ. ಒಳ್ಳೆಯದು. ಆದರೆ ನೀವು ಭೌತಿಕ ಗ್ರಹಗಳನ್ನು ಸಹ ತಲುಪಲು ಸಾಧ್ಯವಿಲ್ಲ. ಆದ್ದರಿಂದ ನೀವು ಆಧ್ಯಾತ್ಮಿಕ ಗ್ರಹಕ್ಕೆ ಹೋಗಲು ಬಯಸಿದರೆ, ನೀವು ಮನಸ್ಸಿನ ವೇಗದ ವಿಮಾನವನ್ನು ತಯಾರಿಸಬೇಕು. ಅಥವಾ ವಾಯುವಿನ ವೇಗ. ಭೌತವಿಜ್ಞಾನಿಗಳಿಗೆ ವಾಯುವಿನ ವೇಗ ಏನು, ಬೆಳಕಿನ ವೇಗ ಏನು ಎಂದು ತಿಳಿದಿದೆ. ಆದ್ದರಿಂದ ಈ ವೇಗಕ್ಕಿಂತ, ಮನಸ್ಸಿನ ವೇಗ ಹೆಚ್ಚು. ಭೌತವಿಜ್ಞಾನಿಗಳಿಗೆ ವಾಯು ಮತ್ತು ಬೆಳಕು ಎಷ್ಟು ವೇಗವಾದವು ಎಂದು ತಿಳಿದಿದೆ. ಮನಸ್ಸು ಇನ್ನೂ ಹೆಚ್ಚು ವೇಗವಾಗಿರುತ್ತದೆ. ನಿಮಗೆ ಅನುಭವವಿದೆ. ಈಗ ನೀವು ಇಲ್ಲಿ ಕುಳಿತಿದ್ದೀರಿ. ತಕ್ಷಣ, ಒಂದು ಕ್ಷಣದೊಳಗೆ, ನೀವು ಅಮೇರಿಕ, ಯುಎಸ್ಎ, ಭಾರತಕ್ಕೆ ಹೋಗಬಹುದು. ನೀವು ನಿಮ್ಮ ಮನೆಗೆ ಹೋಗಬಹುದು. ನೀವು ವಿಷಯಗಳನ್ನು ನೋಡಬಹುದು - ಮನಸ್ಸಿನಿಂದ; ಮನಸ್ಸಿನ ವೇಗ. ಆದ್ದರಿಂದ ಬ್ರಹ್ಮ-ಸಂಹಿತಾ ಹೇಳುವಂತೆ ನೀವು ಮನಸ್ಸಿನ ವೇಗವನ್ನು ಹೊಂದಿರುವ ಒಂದು ವಿಮಾನವನ್ನು ತಯಾರಿಸಬಹುದಾದರೂ, ವಾಯುವಿನ ವೇಗವನ್ನು ಹೊಂದಿರುವ, ಪಂಥಾಸ್ ತು ಕೋಟಿ-ಶತ-ವತ್ಸರ-ಸಂಪ್ರಗಮ್ಯಃ – ಮತ್ತು ಆ ವೇಗದಿಂದ ಅನೇಕ ದಶಲಕ್ಷ ವರ್ಷಗಳು ನೀವು ಸಂಚರಿಸಿದರು ಗೋಲೋಕ ವೃಂದಾವನ ಎಲ್ಲಿದೆ ಎಂದು ನೀವು ಆಗಲೂ ಕಾಣುಲಾಗುವುದಿಲ್ಲ. ಆಗಲೂ ನೀವು ಕಾಣುಲಾಗುವುದಿಲ್ಲ. ಪಂಥಾಸ್ ತು ಕೋಟಿ-ಶತ-ವತ್ಸರ-ಸಂಪ್ರಗಮ್ಯೋ ವಾಯೋರ್ ಅಥಾಪಿ ಮನಸೊ ಮುನಿ-ಪುಂಗವಾನಾಮ್ (ಬ್ರ.ಸಂ 5.34). ಹಿಂದಿನ ಆಚಾರ್ಯರು ಮತ್ತು ಇತರರಿಗರ ತಿಳಿದಿರಲಿಲ್ಲ ಎಂದು ಅಲ್ಲ… ವಿಮಾನ ಎಂದರೇನು, ಎಷ್ಟು ವೇಗ , ಹೇಗೆ ಚಲಾಯಿಬೇಕು ಎಂದು. ಮೂರ್ಖರಂತೆ ಯೋಚಿಸಬೇಡಿ, ಇವರೇ (ಭೌತವಿಜ್ಞಾನಿಗಳು) ಏನೋ ತಯಾರಿಸಿದಂತೆ. ಇವು ಏನೂ ಇಲ್ಲ, ಕನಿಷ್ಠ ಗುಣಮಟ್ಟ ಕೂಡ ಇಲ್ಲ. ಮೊದಲು ತುಂಬಾ ಸುಂದರವಾದ ವಿಮಾನಗಳು ಇದ್ದವು. ಮನಸ್ಸಿನ ವೇಗದಲ್ಲಿ ಚಲಿಸಬಲ್ಲ ವಿಮಾನವನ್ನು ನೀವು ತಯಾರಿಸಬಹುದು ಎಂಬ ಸಲಹೆ ಇಲ್ಲಿದೆ. ಈಗ ಇಲ್ಲಿ ಒಂದು ಸಲಹೆ ಇದೆ - ಅದನ್ನು ಮಾಡಿ. ವಾಯು ವೇಗದಲ್ಲಿ ಚಲಿಸಬಲ್ಲ ವಿಮಾನವನ್ನು ನೀವು ತಯಾರಿಸಬಹುದು. ಅವರು ಯೋಚಿಸುತ್ತಿರುವುದು ಏನೆಂದರೆ, ಬೆಳಕಿನ ವೇಗದಲ್ಲಿ ಚಲಿಸಬಲ್ಲ ಒಂದು ವಿಮಾನವನ್ನು ತಯಾರಿಸಿದರೂ ಉನ್ನತ ಗ್ರಹವನ್ನು ತಲುಪಲು ನಲವತ್ತು ಸಾವಿರ ವರ್ಷಗಳು ಬೇಕಾಗುತ್ತದೆ ಎಂದು. ಅದು ಸಾಧ್ಯವೇ ಎಂದು ಅವರು ಯೋಚಿಸುತ್ತಿದ್ದಾರೆ.

ಆದರೆ ನಾವು ಕಂಡಿರುವವರೆಗು, ‘ಬೋಲ್ಟ್ ಮತ್ತು ನಟ್’ಗಳ ಜೊತೆ ನಿರತರಾಗಿರುವವರು, ಈ ಮಂದ ಮೆದುಳು, ಅವರು ಅಂತಹ ವಸ್ತುಗಳನ್ನು ತಯಾರಿಸಬಹುದೆ? ಅದು ಸಾಧ್ಯವಿಲ್ಲ. ಇದಕ್ಕೆ ಮತ್ತೊಂದು ಮೆದುಳು ಬೇಕು. ಯೋಗಿಗಳು ಹೋಗಬಹುದು, ಯೋಗಿಗಳು ಹೋಗಬಹುದು. ದುರ್ವಾಸಾ ಮುನಿಯಂತೆಯೇ. ಅವರು ವೈಕುಂಠ-ಲೋಕಕ್ಕೆ ಹೋದರು, ಮತ್ತು ಅವರು ವೈಕುಂಠ ಲೋಕದಲ್ಲಿ ಭಗವಾನ್ ವಿಷ್ಣುವನ್ನು ವೈಯಕ್ತಿಕವಾಗಿ ದರ್ಶಿಸಿದರು, ಕ್ಷಮೆ ಯಾಚಿಸಲು, ಏಕೆಂದರೆ ಭಗವಂತನ ಚಕ್ರ ಅವರನ್ನು ಕೊಲ್ಲಲು ಹಿಂಬಾಲಿಸುತ್ತಿತ್ತು. ಅವರು ಒಬ್ಬ ವೈಷ್ಣವನನ್ನು ಅವಮಾನಿಸಿದರು. ಅದು ಮತ್ತೊಂದು ಕಥೆ. ಈ ರೀತಿಯಾಗಿ, ಮಾನವ ಜೀವನವು ಈ ಉದ್ದೇಶಕ್ಕಾಗಿಯೇ ಇರುವುದು… ದೇವರನ್ನು ಮತ್ತು ಅವನ ಶಕ್ತಿಗಳನ್ನು ಅರ್ಥಮಾಡಿಕೊಳ್ಳಲು, ಮತ್ತು ಆತನೊಂದಿಗಿನ ನಮ್ಮ ಹಳೆಯ ಸಂಬಂಧವನ್ನು ಪುನರುಜ್ಜೀವನಗೊಳಿಸುವುದಕ್ಕಾಗಿ. ಅದೇ ಮುಖ್ಯ ವ್ಯವಹಾರ. ಆದರೆ ದುರದೃಷ್ಟವಶಾತ್, ಅವರನ್ನು ಕಾರ್ಖಾನೆಗಳಲ್ಲಿ, ಇತರ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಹಂದಿ ಮತ್ತು ನಾಯಿಗಳಂತೆ ಕೆಲಸ ಮಾಡಲು, ಮತ್ತು ಅವರ ಸಂಪೂರ್ಣ ಶಕ್ತಿಯು ಹಾಳಾಗುತ್ತಿದೆ. ಹಾಳಾಗುವುದು ಮಾತ್ರವಲ್ಲ, ಅವರ ಗುಣಗಳು, ಅವರು ತುಂಬಾ ಶ್ರಮಿಸುತ್ತಿದ್ದಾರೆ, ಆದ್ದರಿಂದ ತುಂಬಾ ಶ್ರಮವಹಿಸಿದ ನಂತರ ಅವರು ಮದ್ಯ ಸೇವಿಸಬೇಕು. ಕುಡಿದ ನಂತರ ಅವರು ಮಾಂಸವನ್ನು ತಿನ್ನಬೇಕು. ಈ ಸಂಯೋಜನೆಯ ನಂತರ, ಅವರಿಗೆ ಮೈಥುನ ಬೇಕು. ಆದ್ದರಿಂದ ಈ ರೀತಿಯಾಗಿ, ಅವರನ್ನು ಕತ್ತಲೆಯಲ್ಲಿ ಇರಿಸಲಾಗಿದೆ. ಮತ್ತು ಇಲ್ಲಿ, ರೃಷಭದೇವನ ಈ ವಚನಗಳು… ಅವರು ಎಚ್ಚರಿಕೆ ಕೊಡುತ್ತಾರೆ. ಅವರು ಎಚ್ಚರಿಕೆ ನೀಡುತ್ತಿದ್ದಾರೆ, ಅವರು ತನ್ನ ಪುತ್ರರೊಂದಿಗೆ ಮಾತನಾಡುತ್ತಿದ್ದಾರೆ, ಆದರೆ ನಾವೂ ಕೂಡ ಪಾಠವನ್ನು ಕಲಿಯಬಹುದು. ಅವರು ಹೇಳುವುದು: ನಾಯಾಂ ದೇಹೋ ದೇಹ-ಭಾಜಾಂ ನೃಲೋಕೇ ಕಷ್ಟಾನ್ ಕಾಮಾನ್ ಅರ್ಹತೇ ವಿದ್-ಭುಜಾಂ ಯೇ (ಶ್ರೀ.ಭಾ 5.5.1). ಕಾಮಾನ್ ಎಂದರೆ ಜೀವನದ ಅವಶ್ಯಕತೆಗಳು. ನಿಮ್ಮ ಜೀವನದ ಅವಶ್ಯಕತೆಗಳನ್ನು ನೀವು ಸುಲಭವಾಗಿ ಪಡೆಯಬಹುದು. ಬೇಸಾಯ ಮಾಡಿ, ನೀವು ಧಾನ್ಯಗಳನ್ನು ಪಡೆಯುತ್ತೀರಿ. ಮತ್ತು ಹಸು ಇದ್ದರೆ ನಿಮಗೆ ಹಾಲು ಸಿಗುತ್ತದೆ. ಅಷ್ಟೇ. ಅದು ಸಾಕು. ಆದರೆ ನಾಯಕರು ಯೋಜಿಸುತ್ತಿದ್ದಾರೆ – ಇವರು ತೃಪ್ತಿ ಹೊಂದಿದ್ದರೆ? ತಮ್ಮ ವ್ಯವಸಾಯದಲ್ಲಿ, ಸ್ವಲ್ಪ ಧಾನ್ಯಗಳು ಮತ್ತು ಹಾಲನ್ನು ಪಡೆದು, ಆಗ ಕಾರ್ಖಾನೆಯಲ್ಲಿ ಯಾರು ಕೆಲಸ ಮಾಡುತ್ತಾರೆ? ನೀವು ಸರಳ ಜೀವನವನ್ನು ಸಹ ನಡೆಸಲು ಸಾಧ್ಯವಾಗದಂತೆ ಅವರು ತೆರಿಗೆ ವಿಧಿಸುತ್ತಿದ್ದಾರೆ. ಇದು ನಿಮ್ಮ ಸ್ಥಿತಿ. ನೀವು ಬಯಸಿದರೂ ಸಹ, ಈಗಿನ ನಾಯಕರು ನಿಮಗೆ ಅನುಮತಿಸುವುದಿಲ್ಲ. ನಾಯಿಗಳು, ಮತ್ತು ಹಂದಿಗಳು, ಮತ್ತು ಕತ್ತೆಗಳಂತೆ ಕೆಲಸ ಮಾಡಲು ಅವರು ನಿಮ್ಮನ್ನು ಒತ್ತಾಯಿಸುತ್ತಾರೆ. ಇದು ಸ್ಥಿತಿ.