KN/Prabhupada 0110 - ಪೂರ್ವ ಆಚಾರ್ಯರ ಕೈಗೊಂಬೆಯಾಗಿ

Revision as of 01:58, 26 May 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0110 - in all Languages Category:KN-Quotes - 1973 Category:KN-Quotes - M...")
(diff) ← Older revision | Latest revision (diff) | Newer revision → (diff)


Morning Walk -- April 19, 1973, Los Angeles

ಸ್ವರೂಪ ದಾಮೋದರ: ಅವರು ಶ್ರೀಮದ್ ಭಾಗವತಂ ಅನ್ನು ಕೇಳಿದರೆ, ಅವರ ಮನ ಪರಿವರ್ತನೆಯಾಗುತ್ತದೆ.

ಪ್ರಭುಪಾದ: ಖಂಡಿತ. ನಿನ್ನೆ ಯಾರೋ ನಮ್ಮ ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ: "ಓಹ್, ನಮಗೆ ಭಾಗವತಂ ಅನ್ನು ನೀಡಿರುವ ನಿಮಗೆ ನಾವು ಚಿರ ಋಣಿ." ಅಲ್ಲವೇ? ಯಾರು ಹೇಳಿದ್ದರು?

ಭಕ್ತರು: ಹೌದು ಹೌದು. ತ್ರಿಪುರಾರಿ ಹೇಳಿದರು. ತ್ರಿಪುರಾರಿ.

ಪ್ರಭುಪಾದ: ಓ, ತ್ರಿಪುರಾರಿ, ಹೌದು. ಯಾರೋ ಹಾಗೆ ಹೇಳಿದರಲ್ಲವೇ?

ತ್ರಿಪುರಾರಿ: ಹೌದು, ಇಬ್ಬರು ಹುಡುಗರು ನಿನ್ನೆ ವಿಮಾನ ನಿಲ್ದಾಣದಲ್ಲಿ ಎರಡು ಜತೆ ಶ್ರೀಮದ್ ಭಾಗವತಂ ಖರೀದಿಸಿದರು.

ಜಯತೀರ್ಥ: ಪೂರ್ತಿ?

ತ್ರಿಪುರಾರಿ: ಆರು ಸಂಪುಟಗಳು. ಅವರು ಭಾಗವತಂಗಳನ್ನು ಹಿಡಿದು ಹೇಳಿದರು: "ತುಂಬಾ ಧನ್ಯವಾದಗಳು." ತದನಂತರ ಅವರು ಅದನ್ನು ತಮ್ಮ ಲಾಕರ್ಗಳಲ್ಲಿ ಇರಿಸಿದರು, ಮತ್ತು ಅವರು ತಮ್ಮ ವಿಮಾನಕ್ಕಾಗಿ ಕಾಯುತ್ತಿದ್ದರು, ಮತ್ತು ಅವರು ಮೊದಲ ಕಾಂಡವನ್ನು...

ಪ್ರಭುಪಾದ: ಹೌದು. ಯಾವುದೇ ಪ್ರಾಮಾಣಿಕ ಮನುಷ್ಯನಾಗಲಿ ನಮ್ಮ ಈ ಪ್ರಚಾರ ಚಳುವಳಿಗೆ ಋಣಿಯಾಗಿರುತ್ತಾನೆ. "ಈ ಪುಸ್ತಕಗಳನ್ನು ವಿತರಿಸುವ ಮೂಲಕ, ನೀವು ಕೃಷ್ಣನಿಗೆ ಉತ್ತಮ ಸೇವೆ ಮಾಡುತ್ತಿದ್ದೀರಿ.” ಅವನು ಎಲ್ಲರಿಗೂ ಹೇಳಲು ಬಯಸಿದನು: ಸರ್ವ-ಧರ್ಮಾನ್ ಪರಿತ್ಯಜ್ಯ, ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). ಆದ್ದರಿಂದ ಅವನು ಬರುತ್ತಾನೆ. ಆದ್ದರಿಂದ ಅದೇ ಸೇವೆಯನ್ನು ಮಾಡುವ ಯಾರಾದರೂ ಸರಿ, ಅದೇ, "ಕೃಷ್ಣನಿಗೆ ಶರಣಾಗು” ಎಂಬುವ ಸೇವೆ, ಅವನನ್ನು ಕೃಷ್ಣ ಬಹಳ ಮೆಚ್ಚುತ್ತಾನೆ. ಅದನ್ನು ಭಗವದ್ಗೀತೆಯಲ್ಲಿ ಹೇಳಲಾಗಿದೆ: ನ ಚ ತಸ್ಮಾನ್ ಮನುಷ್ಯೇಷು (ಭ.ಗೀ 18.69). ಮಾನವ ಸಮಾಜದಲ್ಲಿ, ಉಪದೇಶದ ಕೆಲಸಕ್ಕೆ ಸಹಾಯ ಮಾಡುವವನಿಗಿಂತ ಯಾರೂ ಹೆಚ್ಚು ಪ್ರೀತಿಯಿಲ್ಲ. ಹರೇ ಕೃಷ್ಣ.

ಬ್ರಹ್ಮಾನಂದ: ನಾವು ಸುಮ್ಮನೆ ನಿಮ್ಮ ಕೈಗೊಂಬೆಗಳು, ಶ್ರೀಲ ಪ್ರಭುಪಾದ. ನೀವು ನಮಗೆ ಪುಸ್ತಕಗಳನ್ನು ನೀಡುತ್ತಿದ್ದೀರಿ.

ಪ್ರಭುಪಾದ: ಇಲ್ಲ. ನಾವೆಲ್ಲರೂ ಕೃಷ್ಣನ ಕೈಗೊಂಬೆಗಳಾಗಿದ್ದೇವೆ. ನಾನು ಸಹ ಕೈಗೊಂಬೆ. ಬೊಂಬೆ. ಇದೇ ಗುರು-ಪರಂಪರೆ. ನಾವು ಕೈಗೊಂಬೆಯಾಗಬೇಕು. ಅಷ್ಟೇ. ನಾನು ನನ್ನ ಗುರು ಮಹಾರಾಜನ ಕೈಗೊಂಬೆಯಾಗಿರುವ ಹಾಗೆ ನೀವು ನನ್ನ ಕೈಗೊಂಬೆಯಾದರೆ, ಅದೇ ಯಶಸ್ಸು. ನಾವು ಪೂರ್ವ ಆಚಾರ್ಯರ ಕೈಗೊಂಬೆಯಾಗುವುದೇ ನಮಗೆ ಯಶಸ್ಸು. ತಾಂದೆರ ಚರಣ ಸೇವಿ ಭಕ್ತ ಸನೆ ವಾಸ. ಭಕ್ತರ ಸಮಾಜದಲ್ಲಿ ಬಾಳುವುದು, ಮತ್ತು ಪೂರ್ವ ಆಚಾರ್ಯರ ಕೈಗೊಂಬೆಯಾಗುವುದು. ಇದೇ ಯಶಸ್ಸು. ಆದ್ದರಿಂದ ನಾವು ಅದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ಕೃಷ್ಣ ಪ್ರಜ್ಞೆ ಸಮಾಜ, ಮತ್ತು ಪೂರ್ವ ಆಚಾರ್ಯರ ಸೇವೆ. ಅಷ್ಟೇ. ಹರೇರ್ ನಾಮ ಹರೇರ್ ನಾಮ... (ಚೈ.ಚ ಆದಿ 17.21). ಜನರು ಬರುತ್ತಾರೆ. ನಮ್ಮ ಪ್ರಚಾರವನ್ನು ಜನರು ಮೆಚ್ಚುತ್ತಾರೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.

ಸ್ವರೂಪ ದಾಮೋದರ: ಹಿಂದಿನ ಕೆಲವು ವರ್ಷಗಳಿಗಿಂತ ಈಗ ಹೆಚ್ಚು ಮೆಚ್ಚುತ್ತಿದ್ದಾರೆ.

ಪ್ರಭುಪಾದ: ಹೌದು, ಹೌದು.

ಸ್ವರೂಪ ದಾಮೋದರ: ಅವರು ನಿಜವಾದ ತತ್ವಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತಿದ್ದಾರೆ.