KN/Prabhupada 0111 - ಆದೇಶವನ್ನು ಅನುಸರಿಸಿ, ಆಗ ನೀವು ಎಲ್ಲಿದ್ದರೂ ಸುರಕ್ಷಿತ

Revision as of 01:39, 29 May 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0111 - in all Languages Category:KN-Quotes - 1975 Category:KN-Quotes - M...")
(diff) ← Older revision | Latest revision (diff) | Newer revision → (diff)


Morning Walk -- February 3, 1975, Hawaii

ಭಕ್ತ (1): ಶ್ರೀಲ ಪ್ರಭುಪಾದ, ಯಾರಾದರೂ ತನ್ನ ಅಧಿಕಾರವನ್ನು ಎಲ್ಲಿಂದ ಪಡೆಯುತ್ತಾನೆ?

ಪ್ರಭುಪಾದ: ಗುರುವೇ ಅಧಿಕಾರಿ.

ಭಕ್ತ (1): ಇಲ್ಲ, ನನಗೆ ಗೊತ್ತು, ಆದರೆ ಕೇವಲ ನಾಲ್ಕು ನಿಯಂತ್ರಕ ತತ್ವಗಳನ್ನು ಅನುಸರಿಸುವುದು, ಮತ್ತು ಹದಿನಾರು ಸುತ್ತುಗಳನ್ನು ಜಪಿಸುವುದನ್ನು ಹೊರತುಪಡಿಸಿ ಅವನ ಬೇರೆ ಕಾರ್ಯಗಳಿಗಾಗಿ. ಅವನು ಹಗಲಿನಲ್ಲಿ ಇನ್ನೂ ಅನೇಕ ಕೆಲಸಗಳನ್ನು ಮಾಡುತ್ತಾನೆ. ದೇವಾಲಯದಲ್ಲಿ ವಾಸಿಸದಿದ್ದರೆ, ಅವನು ತನ್ನ ಅಧಿಕಾರವನ್ನು ಎಲ್ಲಿಂದ ಪಡೆಯುತ್ತಾನೆ?

ಪ್ರಭುಪಾದ: ನನಗೆ ಅರ್ಥವಾಗುತ್ತಿಲ್ಲ. ಗುರುವೇ ಅಧಿಕಾರಿ. ನೀವು ಸ್ವೀಕರಿಸುವಿರಿ.

ಬಲಿ ಮರ್ದನ: ಎಲ್ಲದಕ್ಕೂ.

ಜಯತೀರ್ಥ: ನನಗೆ ಹೊರಗೆ ಎಲ್ಲೋ ಕೆಲಸವಿದೆ, ವಾಸವೂ ಇದೆ, ಆದರೆ ನನ್ನ ಆದಾಯದ 50% ಅನ್ನು ನಾನು ನೀಡುತ್ತಿಲ್ಲ ಎಂದು ಭಾವಿಸೋಣ. ಹಾಗಾದರೆ ನಾನು ಮಾಡುತ್ತಿರುವ ಆ ಕೆಲಸ, ಅದು ನಿಜವಾಗಿ ಗುರುವಿನ ಅಧಿಕಾರಕ್ಕೆ ಒಳಪಟ್ಟಿದೆಯೇ?

ಪ್ರಭುಪಾದ: ಆಗ ನೀನು ಗುರುವಿನ ಆದೇಶವನ್ನು ಅನುಸರಿಸುತ್ತಿಲ್ಲ. ಅದು ಸರಳ ಸತ್ಯ. ಜಯತೀರ್ಥ: ಆದ್ದರಿಂದ ಇದರರ್ಥ ಹಗಲಿನಲ್ಲಿ ಇಡೀ ಚಟುವಟಿಕೆ, ಕೆಲಸ, ಅಂದರೆ ನಾನು ಗುರುವಿನ ಆದೇಶವನ್ನು ಅನುಸರಿಸುತ್ತಿಲ್ಲ. ಅದು ಅನಧಿಕೃತ ಚಟುವಟಿಕೆ. ಪ್ರಭುಪಾದ: ಹೌದು. ನೀವು ಗುರುವಿನ ಆದೇಶವನ್ನು ಅನುಸರಿಸದಿದ್ದರೆ, ತಕ್ಷಣ ನಿಮ್ಮ ಪತನವಾಗುತ್ತದೆ. ಅದು ಹಾಗೆಯೇ. ಇಲ್ಲದಿದ್ದರೆ ನೀವು ಯಾಕೆ ಹಾಡುತ್ತೀರಿ: ಯಸ್ಯ ಪ್ರಸಾದಾದ್ ಭಗವತ್-ಪ್ರಸಾದೋ? ಗುರುವನ್ನು ತೃಪ್ತಿಪಡಿಸುವುದೇ ನನ್ನ ಕರ್ತವ್ಯ. ಇಲ್ಲದಿದ್ದರೆ ನನಗೆ ನೆಲೆ ಇಲ್ಲ. ಆದ್ದರಿಂದ, ನೀವು ನೆಲೆ ಕಾಣಲು ಬಯಸದಿದ್ದರೆ, ನಿಮ್ಮ ಇಷ್ಟದಂತೆ ಅವಿಧೇಯರಾಗಿರಿ. ಆದರೆ ನಿಮ್ಮ ಸ್ಥಾನದಲ್ಲಿ ಸ್ಥಿರವಾಗಿರಲು ನೀವು ಬಯಸಿದರೆ, ನೀವು ಗುರುವಿನ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಭಕ್ತ (1): ನಿಮ್ಮ ಪುಸ್ತಕಗಳನ್ನು ಓದುವ ಮೂಲಕ ನಿಮ್ಮ ಎಲ್ಲಾ ಆದೇಶಗಳನ್ನು ನಾವು ಅರ್ಥಮಾಡಿಕೊಳ್ಳಬಹುದು.

ಪ್ರಭುಪಾದ: ಹೌದು. ಹೇಗಾದರೂ ಸರಿ, ಆದೇಶವನ್ನು ಅನುಸರಿಸಿ. ಅದು ಅಗತ್ಯ. ಆದೇಶವನ್ನು ಅನುಸರಿಸಿ. ನೀವು ಎಲ್ಲಿಯೇ ಇದ್ದರೂ, ಅದು ಮುಖ್ಯವಲ್ಲ. ನೀವು ಸುರಕ್ಷಿತ. ಆದೇಶವನ್ನು ಅನುಸರಿಸಿ. ಆಗ ನೀವು ಎಲ್ಲಿದ್ದರೂ ಸುರಕ್ಷಿತವಾಗಿರುತ್ತೀರಿ. ಚಿಂತೆಯಿಲ್ಲ. ನಿಮಗೆ ನಾನು ಹೇಳಿದ್ದೆ, ನನ್ನ ಗುರು ಮಹಾರಾಜನನ್ನು ನನ್ನ ಜೀವನದಲ್ಲಿ ಹತ್ತು ದಿನಗಳಿಗಿಂತ ಹೆಚ್ಚು ನೋಡಲಿಲ್ಲ, ಆದರೆ ನಾನು ಅವರ ಆದೇಶನ್ನು ಅನುಸರಿಸಿದೆ. ನಾನು ಗಹಸ್ಥನಾಗಿದ್ದೆ, ನಾನು ಎಂದಿಗೂ ಮಠದಲ್ಲಿ, ದೇವಾಲಯದಲ್ಲಿ ವಾಸಿಸುತ್ತಿರಲಿಲ್ಲ. ಅದು ವ್ಯವಹಾರ್ಯ. "ಅವನು ಈ ಬಾಂಬೆ ದೇವಸ್ಥಾನದ ಉಸ್ತುವಾರಿ ವಹಿಸಬೇಕು, ಇದು, ಅದು, ಅದು...", ಎಂದು ಅನೇಕ ಆಧ್ಯಾತ್ಮಿಕ ಸಹೋದರರು ಶಿಫಾರಸು ಮಾಡಿದರು. ಗುರು ಮಹಾರಾಜರು ಹೇಳಿದರು, "ಹೌದು, ಅವನು ಹೊರಗೆ ವಾಸಿಸುವುದೆ ಉತ್ತಮ. ಅದು ಒಳ್ಳೆಯದು, ಮತ್ತು ಸಮಯ ಬಂದಾಗ ಅವನು ಅಗತ್ಯವಿರುವುದನ್ನು ಮಾಡುತ್ತಾನೆ."

ಭಕ್ತರು: ಜಯ! ಹರಿಬೋಲ್!

ಪ್ರಭುಪಾದ: ಅವರು ಹಾಗೆ ಹೇಳಿದರು. ಆ ಸಮಯದಲ್ಲಿ ಅವರ ಅಪೇಕ್ಷೇ ಏನು ಎಂದು ನನಗೆ ಅರ್ಥವಾಗಲಿಲ್ಲ. ನನಗೆ ತಿಳಿದಿತ್ತು, ನಾನು ಬೋಧಿಸಬೇಕು ಎಂಬುದೆ ಅವರ ಬಯಕೆ ಎಂದು.

ಯಶೋದಾನಂದನ: ನೀವು ಇದನ್ನು ಭವ್ಯ ಶೈಲಿಯಲ್ಲಿ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ.

ಭಕ್ತರು: ಜಯ, ಪ್ರಭುಪಾದ! ಹರಿಬೋಲ್! ಪ್ರಭುಪಾದ: ಹೌದು, ಭವ್ಯವಾದ ಶೈಲಿಯನ್ನು ಮಾಡಿದ್ದೇನೆ, ಏಕೆಂದರೆ ನನ್ನ ಗುರು ಮಹಾರಾಜರ ಆದೇಶವನ್ನು ನಾನು ಕಟ್ಟುನಿಟ್ಟಾಗಿ ಅನುಸರಿಸುತ್ತೇನೆ, ಅಷ್ಟೆ. ಇಲ್ಲದಿದ್ದರೆ ನನಗೆ ಶಕ್ತಿ ಇಲ್ಲ. ನಾನು ಯಾವುದೇ ಮಾಯಾಮಾಟ ಮಾಡಲಿಲ್ಲ. ನಾನು ಮಾಡಿದ್ದೇನೆಯೇ? ಚಿನ್ನದ ಸೃಷ್ಟಿ? (ನಗು). ಆದರು, ಚಿನ್ನ ಹುಟ್ಟಿಸುವ ಗುರುಗಳಿಗಿಂತ ಉತ್ತಮ ಶಿಷ್ಯರನ್ನು ನಾನು ಪಡೆದಿದ್ದೇನೆ.