KN/Prabhupada 0119 - ಆತ್ಮವು ನಿತ್ಯನೂತನ

Revision as of 02:37, 28 July 2020 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0119 - in all Languages Category:KN-Quotes - 1968 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 2.1-10 and Talk -- Los Angeles, November 25, 1968

ಪ್ರಭುಪಾದ: ಹೌದು.

ಶ್ರೀಮತೀ: ಯಾವ ವಯಸ್ಸಿನಲ್ಲಿ, ಆತ್ಮವು ದೇಹವನ್ನು ತೊರೆಯುತ್ತಿರುವಾಗ, ವಯಸು ಹೆಚ್ಚಿತು ಎನ್ನಬಹುದು?

ಪ್ರಭುಪಾದ: ಇಲ್ಲ, ಆತ್ಮಕ್ಕೆ ವಯಸ್ಸಾಗುತ್ತಿಲ್ಲ. ದೇಹವು ಬದಲಾಗುತ್ತಿದೆ, ಅದೇ ಪ್ರಕ್ರಿಯೆ. ಅದನ್ನು ವಿವರಿಸಲಾಗುವುದು,

ದೇಹಿನೋ 'ಸ್ಮಿನ್ ಯಥಾ ದೇಹೇ
ಕೌಮಾರಂ ಯೌವನಂ ಜರಾ
ತಥಾ ದೇಹಾತರಂ-ಪ್ರಾಪ್ತಿರ್
ಧೀರಸ್ ತತ್ರ ನ ಮುಹ್ಯತಿ
(ಭ.ಗೀ 2.13)

ಆತ್ಮವು ನಿತ್ಯನೂತನವಾದದು. ದೇಹ ಬದಲಾಗುತ್ತಿದೆ. ಅದನ್ನು ಅರ್ಥಮಾಡಿಕೊಳ್ಳಬೇಕು. ದೇಹ ಬದಲಾಗುತ್ತಿದೆ. ಅದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬಹುದು. ನಿಮ್ಮ ಬಾಲ್ಯದಲ್ಲಿ ನಿಮ್ಮ ದೇಹವೂ… ಈ ಮಗುವಿನಂತೆಯೇ, ವಿಭಿನ್ನ ದೇಹ. ಮತ್ತು ಈ ಮಗು ಯುವತಿಯಾಗಿದ್ದಾಗ, ಅದು ವಿಭಿನ್ನ ದೇಹವಾಗಿರುತ್ತದೆ. ಆದರೆ ಆತ್ಮ ಈ ದೇಹದಲೂ ಇದೆ, ಮತ್ತು ಆ ದೇಹದಲೂ ಇದೆ. ಆದ್ದರಿಂದ ಆತ್ಮವು ಬದಲಾಗುವುದಿಲ್ಲ, ದೇಹವು ಬದಲಾಗುತ್ತದೆ ಎಂಬುದಕ್ಕೆ ಇದೇ ಪುರಾವೆ. ಇದೇ ಪುರಾವೆ. ನಾನು ನನ್ನ ಬಾಲ್ಯದ ಬಗ್ಗೆ ಯೋಚಿಸುತ್ತಿದ್ದೇನೆ. ಅಂದರೆ ನನ್ನ ಬಾಲ್ಯದಲ್ಲಿ ಅಸ್ತಿತ್ವದಲ್ಲಿದ್ದ ಅದೇ "ನಾನು", ಮತ್ತು ನನ್ನ ಬಾಲ್ಯದಲ್ಲಿ ನಾನು ಇದನ್ನು ಮಾಡುತ್ತಿದ್ದೆ, ಅದನ್ನು ಮಾಡುತ್ತಿದೆ ಎಂದು ನೆನಪಿದೆ. ಆದರೆ ಆ ಬಾಲ್ಯದ ದೇಹವು ಈಗ ಇಲ್ಲ. ಅದು ಇನ್ನಿಲ್ಲ. ಆದ್ದರಿಂದ ನನ್ನ ದೇಹವು ಬದಲಾಗಿದೆ, ಆದರೆ ನಾನು ಬದಲಾಗಿಲ್ಲ ಎಂದರ್ಥ. ಅಲ್ಲವೇ? ಇದು ಸರಳ ಸತ್ಯ. ಆದ್ದರಿಂದ ಈ ದೇಹವು ಬದಲಾಗುತ್ತದೆ, ಆದರೆ ನಾನು ನಾನಾಗೆ ಉಳಿಯುತ್ತೇನೆ. ನಾನು ಇನ್ನೊಂದು ದೇಹಕ್ಕೆ ಪ್ರವೇಶಿಸಬಹುದು, ಅದು ಮುಖ್ಯವಲ್ಲ, ಆದರೆ ನಾನು ನಾನಾಗೆ ಉಳಿಯುತ್ತೇನೆ. ತಥಾ ದೇಹಾತರಂ-ಪ್ರಾಪ್ತಿರ್ ಧೀರಸ್ ತತ್ರ ನ ಮುಹ್ಯತಿ (ಭ.ಗೀ 2.13). ಪ್ರಸ್ತುತ ಪರಿಸ್ಥಿತಿಗಳಲ್ಲಿಯೂ ನಾನು ನನ್ನ ದೇಹವನ್ನು ಬದಲಾಯಿಸುತಿರುವಂತೆ, ಅದೇ ರೀತಿ, ಅಂತಿಮ ಬದಲಾವಣೆಯು ನಾನು ಸತ್ತಿದ್ದೇನೆ ಎಂದಲ್ಲ. ನಾನು ಇನ್ನೊಂದಕ್ಕೆ ಪ್ರವೇಶಿಸುತ್ತೇನೆ... ಅದನ್ನೂ ವಿವರಿಸಿದ್ದೇನೆ, ವಾಸಾಂಸಿ ಜೀರ್ಣಾನಿ ಯಥಾ (ಭ.ಗೀ 2.22), ನಾನು ಬದಲಾಯಿಸುತ್ತೇನೆ ಎಂದು. ನಾನು ಸನ್ಯಾಸಿ ಆಗುವ ಮುನ್ನ, ಯಾವುದೇ ಸಂಭಾವಿತ ವ್ಯಕ್ತಿಯಂತೆ ಉಡುಪು ಧರಿಸುತ್ತಿದ್ದೆ. ಈಗ ನಾನು ನನ್ನ ಉಡುಪನ್ನು ಬದಲಾಯಿಸಿದ್ದೇನೆ. ನಾನು ಸತ್ತಿದ್ದೇನೆ ಎಂದು ಇದರ ಅರ್ಥವಲ್ಲ. ಇಲ್ಲ. ನಾನು ನನ್ನ ದೇಹವನ್ನು ಬದಲಾಯಿಸಿದ್ದೇನೆ, ಅಷ್ಟೆ. ನಾನು ನನ್ನ ಉಡುಪನ್ನು ಬದಲಾಯಿಸಿದ್ದೇನೆ.