KN/Prabhupada 0135 - ವೇದದ ವಯಸ್ಸನ್ನು ನೀವು ಲೆಕ್ಕಹಾಕಲು ಸಾಧ್ಯವಿಲ್ಲ

Revision as of 07:10, 10 May 2021 by Vanibot (talk | contribs) (Vanibot #0005: NavigationArranger - update old navigation bars (prev/next) to reflect new neighboring items)
(diff) ← Older revision | Latest revision (diff) | Newer revision → (diff)


Morning Walk -- October 5, 1975, Mauritius

ಭಾರತೀಯ ವ್ಯಕ್ತಿ: ಸ್ವಾಮೀಜೀ, ಬೈಬಲ್ನಲ್ಲಿ, ಆಡಮ್ ಬಗ್ಗೆ... ಆಡಮ್ ಬ್ರಹ್ಮ ಎಂದು ನೀವು ಭಾವಿಸುತ್ತೀರಾ? ಅದನ್ನು ಬೇರೆ ಹೆಸರಿನಲ್ಲಿ ಇರಿಸಲು ಭಾರತೀಯ ತತ್ವಶಾಸ್ತ್ರದಿಂದ ನಕಲಿಸಲಾಗಿದೆಯೇ?

ಪ್ರಭುಪಾದ: ಐತಿಹಾಸಿಕ ದೃಷ್ಟಿಕೋನದಿಂದ ಇದನ್ನು ನಕಲಿಸಲಾಗಿದೆ, ಏಕೆಂದರೆ ವೇದಗಳನ್ನು ಬ್ರಹ್ಮನು ಬಹಳ ಹಿಂದೆ, ಹಲವು ದಶಲಕ್ಷ ವರ್ಷಗಳ ಹಿಂದೆ ಶೃಷ್ಟಿಸಿದನು, ಮತ್ತು ಬೈಬಲ್ ಕೇವಲ ಎರಡು ಸಾವಿರ ವರ್ಷಗಳ ಹಿಂದೆ ರಚಿಸಲಾಗಿದೆ. ಆದ್ದರಿಂದ, ನಾವು ಮೂಲವನ್ನು ಪರಿಗಣಿಸಬೇಕು. ಪ್ರಪಂಚದ ಎಲ್ಲಾ ಧರ್ಮಗಳನ್ನು ವೇದಗಳ ವಿವಿಧ ಭಾಗಗಳಿಂದ ತೆಗೆದುಕೊಳ್ಳಲಾಗಿದೆ. ಆದ್ದರಿಂದ ಅವು ಅಪೂರ್ಣ. ಬೈಬಲ್ನ ವಯಸ್ಸು ಎರಡು ಸಾವಿರ ವರ್ಷಗಳಿಗಿಂತ ಹೆಚ್ಚಿಲ್ಲ. ವೇದದ ವಯಸ್ಸನ್ನು ನೀವು ಲೆಕ್ಕಹಾಕಲು ಸಾಧ್ಯವಿಲ್ಲ, ಅವು ದಶಲಕ್ಷಾಂತರ ವರ್ಷಗಳು ಹಳೆಯದು.