KN/Prabhupada 0140 - ಒಂದು ಮಾರ್ಗವು ಧಾರ್ಮಿಕವಾಗಿದೆ; ಒಂದು ಮಾರ್ಗವು ಅಧಾರ್ಮಿಕವಾಗಿದೆ - ಮೂರನೆಯ ಮಾರ್ಗವಿಲ್ಲ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0140 - in all Languages Category:KN-Quotes - 1975 Category:KN-Quotes - L...")
 
(Vanibot #0005: NavigationArranger - update old navigation bars (prev/next) to reflect new neighboring items)
 
Line 8: Line 8:
<!-- END CATEGORY LIST -->
<!-- END CATEGORY LIST -->
<!-- BEGIN NAVIGATION BAR -- DO NOT EDIT OR REMOVE -->
<!-- BEGIN NAVIGATION BAR -- DO NOT EDIT OR REMOVE -->
{{1080 videos navigation - All Languages|English|Prabhupada 0139 - This is Spiritual Relationship|0139|Prabhupada 0141 - Mother Supplies Milk, and You are Killing the Mother|0141}}
{{1080 videos navigation - All Languages|Kannada|KN/Prabhupada 0139 - ಇದು ಆಧ್ಯಾತ್ಮಿಕ ಸಂಬಂಧ|0139|KN/Prabhupada 0141 - ತಾಯಿ ಹಾಲನ್ನು ನೀಡುತ್ತಾಳೆ ಆದರೆ ನೀನು ತಾಯಿಯನ್ನು ಕೊಲ್ಲುತ್ತಿ|0141}}
<!-- END NAVIGATION BAR -->
<!-- END NAVIGATION BAR -->
<!-- BEGIN ORIGINAL VANIQUOTES PAGE LINK-->
<!-- BEGIN ORIGINAL VANIQUOTES PAGE LINK-->

Latest revision as of 07:11, 25 August 2021



Lecture on SB 6.1.45 -- Laguna Beach, July 26, 1975

ಇದು ಕೃಷ್ಣ ಪ್ರಜ್ಞೆ ಚಳುವಳಿ. ನೀವು ಜನ್ಮಜನ್ಮಾಂತರಗಳಿಂದ ನರಳುತ್ತಿದ್ದೀರಿ ಎಂದು ನಾವು ಜನರಿಗೆ ಕಲಿಸುತ್ತಿದ್ದೇವೆ. ಈಗ ಮಾನವ ಸಮಾಜವು ಎಂತಹ ಸ್ಥಿತಿಗೆ ಬಂದಿದೆ ಎಂದರೆ, ಪನರ್ಜನ್ಮವಿದೆ ಎಂದು ಅವರಿಗೆ ಅರಿವೇ ಇಲ್ಲ. ಅವರು ತುಂಬಾ ಮುಂದುವರೆದಿದ್ದಾರೆ. ಬೆಕ್ಕುಗಳು ಮತ್ತು ನಾಯಿಗಳಂತೆ, ಪುನರ್ಜನ್ಮವಿದೆ ಎಂದು ಅವರಿಗೆ ತಿಳಿದೆ ಇಲ್ಲ. ಅದನ್ನು ಇಲ್ಲಿ ಹೇಳಲಾಗಿದೆ: ಯೇನ ಯಾವಾನ್ ಯಥಾಧರ್ಮೋ ಧರ್ಮೋ ವೇಹಾ ಸಮೀಹಿತಃ. ಇಹ, ಇಹ ಎಂದರೆ "ಈ ಜನ್ಮದಲ್ಲಿ". ಸ ಏವ ತತ್-ಫಲಂ ಭುಂಕ್ತೇ ತಥಾ ತಾವತ್ ಅಮುತ್ರ ವೈ (ಶ್ರೀ.ಭಾ 6.1.45). ಅಮುತ್ರ ಎಂದರೆ "ಮುಂದಿನ ಜನ್ಮ." ಆದ್ದರಿಂದ ನಾವು ನಮ್ಮ ಮುಂದಿನ ಜನ್ಮವನ್ನು ಈಗಲೇ ಸಿದ್ಧಪಡಿಸುತ್ತಿದ್ದೇವೆ... ಯಥ ಅಧರ್ಮಃ, ಯಥಾ ಧರ್ಮಃ. ಎರಡು ವಿಷಯಗಳಿವೆ: ನೀವು ಧಾರ್ಮಿಕವಾಗಿ ಅಥವಾ ಅಧಾರ್ಮಿಕವಾಗಿ ವರ್ತಿಸಬಹುದು. ಮೂರನೆಯ ಮಾರ್ಗವಿಲ್ಲ. ಒಂದು ಮಾರ್ಗವು ಧಾರ್ಮಿಕವಾಗಿದೆ; ಒಂದು ಮಾರ್ಗವು ಅಧಾರ್ಮಿಕವಾಗಿದೆ. ಆದ್ದರಿಂದ, ಇಲ್ಲಿ ಎರಡನ್ನೂ ಉಲ್ಲೇಖಿಸಲಾಗಿದೆ. ಯೇನ ಯಾವಾನ್ ಯಥಾಧರ್ಮಃ, ಧರ್ಮಃ. ಧರ್ಮ ಎಂದರೆ ಸಹಜ. ಕೆಲವು ಇಂಗ್ಲಿಷ್ ನಿಘಂಟಿನಲ್ಲಿ ಹೇಳಿರುವಂತೆ, "ಒಂದು ರೀತಿಯ ನಂಬಿಕೆ" ಎಂಬುದು ಧರ್ಮದ ಅರ್ಥವಲ್ಲ. ನಂಬಿಕೆ ಕುರುಡಾಗಿರಬಹುದು. ಅದು ಧರ್ಮವಲ್ಲ. ಧರ್ಮ ಎಂದರೆ ಮೂಲ, ಸಹಜಸ್ವರೂಪ. ಅದೇ ಧರ್ಮ. ನಾನು ಹಲವಾರು ಬಾರಿ ಹೇಳಿದ್ದೇನೆ... ನೀರಿನಂತೆ. ನೀರು ದ್ರವ. ಅದೇ ಅದರ ಧರ್ಮ. ನೀರು, ಸಾಂದರ್ಭಿಕವಾಗಿ ಅದು ಘನ, ಮಂಜುಗಡ್ಡೆಯಾದರೂ, ಅದು ಮತ್ತೆ ದ್ರವವಾಗಲು ಪ್ರಯತ್ನಿಸುತ್ತದೆ, ಏಕೆಂದರೆ ಅದುವೇ ಅದರ ಧರ್ಮ. ನೀವು ಮಂಜುಗಡ್ಡೆ ಹೊರಗಿಟ್ಟರೆ ಅದು ಕ್ರಮೇಣ ದ್ರವವಾಗುತ್ತದೆ. ಅಂದರೆ ನೀರಿನ ಈ ಘನ ಸ್ಥಿತಿ ಕೃತಕವಾದದ್ದು. ಕೆಲವು ರಾಸಾಯನಿಕ ಸಂಯೋಜನೆಯಿಂದ ನೀರು ಗಟ್ಟಿಯಾಗಿದೆ, ಆದರೆ ಸಹಜ ಸ್ಥಿತಿಯಲ್ಲಿ ದ್ರವವಾಗುತ್ತದೆ.

ಆದ್ದರಿಂದ, ನಮ್ಮ ಪ್ರಸ್ತುತ ಸ್ಥಾನವು ಘನದಂತೆ ಆಗಿದೆ: "ದೇವರ ಬಗ್ಗೆ ಏನನ್ನೂ ಕೇಳಬೇಡಿ." ಆದರೆ ಸಹಜ ಸ್ಥಿತಿಯೆಂದರೆ ನಾವು ದೇವರ ಸೇವಕರು. ಏಕೆಂದರೆ ನಾವು ಪ್ರಭುವನ್ನು ಹುಡುಕುತ್ತಿದ್ದೇವೆ... ಪರಮ ಪ್ರಭುವು ಕೃಷ್ಣ. ಭೋಕ್ತಾರಂ ಯಜ್ಞ-ತಪಸಾಂ ಸರ್ವ-ಲೋಕ ಮಹೇಶ್ವರಂ (ಭ.ಗೀ 5.29). ಕೃಷ್ಣ ಹೇಳುತ್ತಾನೆ, "ನಾನು ಇಡೀ ಸೃಷ್ಟಿಯ ಪ್ರಭುವು. ನಾನು ಅನುಭವಿಸುವವನು." ಅವನು ಯಜಮಾನ. ಚೈತನ್ಯ-ಚರಿತಾಮೃತ ಕೂಡ ಹೇಳಿತ್ತದೆ, "ಏಕಲ ಈಶ್ವರ ಕೃಷ್ಣ (ಚೈ.ಚ ಆದಿ 5.142)." ಈಶ್ವರ ಎಂದರೆ ನಿಯಂತ್ರಕ ಅಥವಾ ಯಜಮಾನ. ಏಕಲ ಈಶ್ವರ ಕೃಷ್ಣ ಆರ ಸಬ ಭೃತ್ಯ (ಚೈ.ಚ ಆದಿ 5.142): "ಕೃಷ್ಣನನ್ನು ಹೊರತುಪಡಿಸಿ, ಎಲ್ಲಾ ದೊಡ್ಡ ಅಥವಾ ಸಣ್ಣ ಜೀವಿಯು ಸೇವಕರೆ." ಆದ್ದರಿಂದ, ಕೃಷ್ಣ ಯಾರಿಗೂ ಸೇವೆ ಸಲ್ಲಿಸುತ್ತಿಲ್ಲ. ಅವನು ಕೇವಲ ಆನಂದಿಸುತ್ತಿರುವುದನ್ನು ನೀವು ನೋಡುವಿರಿ. ಭೋಕ್ತಾರಂ ಯಜ್ಞ-ತಪಸಾಂ ಸರ್ವ-ಲೋಕ... ನಮ್ಮಂತಹ ಇತರರು, ಅವರು ಮೊದಲು ಬಹಳ ಶ್ರಮಿಸಿ, ನಂತರ ಆನಂದಿಸುತ್ತಾರೆ. ಕೃಷ್ಣನು ಎಂದಿಗೂ ಕೆಲಸ ಮಾಡುವುದಿಲ್ಲ. ನ ತಸ್ಯ ಕಾರ್ಯಂ ಕಾರಣಂ ಚ ವಿದ್ಯತೇ. ಆದರೂ, ಅವನು ಆನಂದಿಸುತ್ತಾನೆ. ಅವನೇ ಕೃಷ್ಣ. ನ ತಸ್ಯ... ಇದು ವೈದಿಕ ಮಾಹಿತಿ. ನ ತಸ್ಯ ಕಾರ್ಯಂ ಕಾರಣಂ ಚ ವಿದ್ಯತೇ: “ಭಗವಂತ ಕೃಷ್ಣ, ಅವನಿಗೆ ಏನೂ ಕೆಲಸಗಳಿಲ್ಲ.” ಆದ್ದರಿಂದ, ಕೃಷ್ಣ ಯಾವಾಗಲು ಗೋಪಿಯರೊಂದಿಗೆ ನೃತ್ಯ ಮಾಡುವುದನ್ನು ಮತ್ತು ಗೋಪಾಲ ಬಾಲರೊಂದಿಗೆ ಆಟವಾಡುತ್ತಿರುವುದನ್ನು ನೀವು ನೋಡಬಹುದು. ಮತ್ತು ಅವನು ಆಯಾಸದಿಂದ ಯಮುನಾ ತೀರದಲ್ಲಿ ಮಲಗುತ್ತಾನೆ, ಮತ್ತು ತಕ್ಷಣ ಅವನ ಸ್ನೇಹಿತರು ಬರುತ್ತಾರೆ. ಒಬ್ಬನು ಅವನಿಗೆ ಗಾಳಿ ಬೀಸುತ್ತಾನೆ; ಒಬ್ಬ ಮಾಲೀಷು ಮಾಡುತ್ತಾನೆ. ಆದ್ದರಿಂದ ಅವನು ಯಜಮಾನ. ಅವನು ಎಲ್ಲಿಗೆ ಹೋದರೂ ಅವನು ಯಜಮಾನ. ಏಕಲ ಈಶ್ವರ ಕೃಷ್ಣ. ಈಶ್ವರಃ ಪರಮಃ ಕೃಷ್ಣಃ (ಬ್ರಹ್ಮ. ಸಂ 5.1). ಕೃಷ್ಣ ಸರ್ವೋಚ್ಚ ನಿಯಂತ್ರಕ. "ಹಾಗಾದರೆ ಅವನ ನಿಯಂತ್ರಕ ಯಾರು?" ಇಲ್ಲ, ಅವನನ್ನು ನಿಯಂತ್ರಿಸುವವನು ಇಲ್ಲ. ಅದೇ ಕೃಷ್ಣ. ಇಲ್ಲಿ ನಾವು ಯುನೈಟೆಡ್ ಸ್ಟೇಟ್ಸ್ನ ರಾಷ್ಟ್ರಪತಿ, ನಿರ್ದೇಶಕ, ಇತ್ಯಾದಿ, ಆದರೆ ನಾವು ಸರ್ವೋಚ್ಚ ನಿಯಂತ್ರಕರಲ್ಲ. ಸಾರ್ವಜನಿಕರು ಬಯಸಿದ ತಕ್ಷಣ ನನ್ನನ್ನು ಕೆಳಕ್ಕೆ ಎಳೆಯುತ್ತಾರೆ. ನಮಗೆ ಅರ್ಥವಾಗುತ್ತಿಲ್ಲ, ನಾವು ನಮ್ಮನ್ನು ಪರಮ ನಿಯಂತ್ರಕ ಎಂದು ತೋರಿಸಿಕೊಳ್ಳುತ್ತಿದ್ದೇವೆ, ಆದರೆ ನನ್ನನ್ನು ಬೇರೊಬ್ಬರು ನಿಯಂತ್ರಿಸುತ್ತಾರೆ. ಆದ್ದರಿಂದ ಅವನು ನಿಯಂತ್ರಕನಲ್ಲ. ಇಲ್ಲಿ ನಾವು ಸ್ವಲ್ಪ ಮಟ್ಟಿಗೆ ನಿಯಂತ್ರಕನಾಗಿರುವವನನ್ನು ಕಾಣುತ್ತೇವೆ, ಆದರೆ ಅವನನ್ನು ಮತ್ತೊಂದು ನಿಯಂತ್ರಕ ನಿಯಂತ್ರಿಸುತ್ತಾನೆ. ಆದ್ದರಿಂದ, ಕೃಷ್ಣ ಎಂದರೆ ಅವನು ನಿಯಂತ್ರಕ, ಆದರೆ ಅವನನ್ನು ನಿಯಂತ್ರಿಸುವವರು ಯಾರೂ ಇಲ್ಲ. ಅವನೇ ಕೃಷ್ಣ; ಅವನೇ ಭಗವಂತ. ಇದು ತಿಳುವಳಿಕೆಯ ವಿಜ್ಞಾನ. ಭಗವಂತ ಎಂದರೆ ಅವನು ಎಲ್ಲವನ್ನು ನಿಯಂತ್ರಿಸುವವನು, ಆದರೆ ಅವನನ್ನು ನಿಯಂತ್ರಿಸುವವನಿಲ್ಲ.