KN/Prabhupada 0163 - ಧರ್ಮ ಎಂದರೆ ಭಗವಂತ ಕೊಟ್ಟಿರುವ ನೀತಿ ನಿಯಮಗಳು

Revision as of 00:37, 10 March 2023 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0163 - in all Languages Category:KN-Quotes - 1974 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on BG 4.3 -- Bombay, March 23, 1974

ಜೀವನದ ಗುರಿಯು ಮನೆಗೆ ಹಿಂತಿರುಗುವುದು, ಮರಳಿ ಭಗವದ್ಧಾಮಕ್ಕೆ. ಅದೇ ಜೀವನದ ಗುರಿ. ನಾವು ಈ ಭೌತಿಕ ಬದ್ದ ಜೀವನದಲ್ಲಿ ಸಿಲುಕಿದ್ದೇವೆ. ನಾವು ನರಳುತಿದ್ದೇವೆ. ಆದರೆ ನಮಗೆ ಅದು ಗೊತ್ತಿಲ್ಲ. ನಾವು ದೊಡ್ಡ ಮೂರ್ಖರು. ಪಶುಗಳಂತೆ. ಜೀವನದ ಗುರಿಯ ಬಗ್ಗೆ ನಮಗೆ ಅರಿವಿಲ್ಲ. ಜೀವನದ ಗುರಿ, ಅದನ್ನು ಕೂಡ ಭಗವದ್ಗೀತೆಯಲ್ಲಿ ವಿವರಿಸಲಾಗಿದೆ: ಜನ್ಮ-ಮೃತ್ಯು-ಜರಾ-ವ್ಯಾಧಿ-ದುಃಖ-ದೋಶಾನುದರ್ಶನಂ (ಭ.ಗೀ 13.9). "ಹುಟ್ಟು, ಸಾವು, ವೃದ್ಧಾಪ್ಯ, ಮತ್ತು ರೋಗಗಳ ಪುನರಾವರ್ತನೆಯ ಈ ಪ್ರಕ್ರಿಯೆಯನ್ನು ನಾನು ಬಯಸುವುದಿಲ್ಲ", ಎಂದು ನಾವು ಅರ್ಥಮಾಡಿಕೊಂಡಾಗ... ಯಾರೂ ಸಾಯಲು ಬಯಸುವುದಿಲ್ಲ, ಆದರೆ ಸಾವು ಅವನ ಮೇಲೆ ಬಲವಂತವಾಗಿ ಹೇರಲ್ಪಡುತ್ತದೆ. "ಇದೇ ನನ್ನ ಸಮಸ್ಯೆ. ನಾನು ಸಾಯಲು ಬಯಸುವುದಿಲ್ಲ, ಆದರೆ ಸಾವು ಖಚಿತವಾಗಿದೆ", ಎಂದು ಅವನು ಆಲೋಚಿಸುವುದಿಲ್ಲ. ಆದ್ದರಿಂದ, ಇದೇ ಸಮಸ್ಯೆಯಾಗಿದೆ. ಈ ಸಮಸ್ಯೆಯನ್ನು ಹೇಗೆ ಪರಿಹರಿಸಬೇಕೆಂದು ಯಾರೂ ಜಾಗರೂಕರಾಗಿಲ್ಲ. ಅವರು ಕೇವಲ ತಾತ್ಕಾಲಿಕ ಸಮಸ್ಯೆಗಳಲ್ಲಿ ತೊಡಗಿದ್ದಾರೆ. ತಾತ್ಕಾಲಿಕ ಸಮಸ್ಯೆಗಳು ಸಮಸ್ಯೆಗಳಲ್ಲ. ನಿಜವಾದ ಸಮಸ್ಯೆಯೆಂದರೆ ಸಾವನ್ನು ಹೇಗೆ ನಿಲ್ಲಿಸುವುದು, ಜನನವನ್ನು ಹೇಗೆ ನಿಲ್ಲಿಸುವುದು, ವೃದ್ಧಾಪ್ಯವನ್ನು ಹೇಗೆ ನಿಲ್ಲಿಸುವುದು, ಮತ್ತು ರೋಗವನ್ನು ಹೇಗೆ ನಿಲ್ಲಿಸುವುದು. ಇದು ನಿಜವಾದ ಸಮಸ್ಯೆ. ನೀವು ಈ ಭೌತಿಕ ಪ್ರಪಂಚದಿಂದ ಮುಕ್ತರಾದಾಗ ಅದನ್ನು ಮಾಡಬಹುದು. ಇದು ನಮ್ಮ ಸಮಸ್ಯೆ.

ಆದ್ದರಿಂದ, ಕೃಷ್ಣನು ಮತ್ತೆ ಇಲ್ಲಿಗೆ ಬರುತ್ತಾನೆ... ಯಾದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ ಭಾರತ (ಭ.ಗೀ 4.7). ಧರ್ಮಸ್ಯ ಗ್ಲಾನಿಃ. ‘ಗ್ಲಾನಿಃ’ ಎಂದರೆ ಧರ್ಮವನ್ನು ವಿರೂಪಗೊಳಿಸುವುದು. ಅಂದರೆ ಜನರು ಕೃತಕವಾಗಿ ತಥಾಕಥಿತ ಧರ್ಮಗಳನ್ನು ತಯಾರಿಸುತ್ತಿದ್ದಾರೆ. "ಇದು ನಮ್ಮ ಧರ್ಮ. ಇದು... ಇದು ಹಿಂದೂ ಧರ್ಮ. ಇದು ಮುಸ್ಲಿಂ ಧರ್ಮ. ಇದು ಕ್ರಿಶ್ಚಿಯನ್ ಧರ್ಮ." ಅಥವಾ "ಇದು ಬುದ್ಧ ಧರ್ಮ". ಮತ್ತು "ಇದು ಸಿಖ್ ಧರ್ಮ." "ಇದು ಆ ಧರ್ಮ, ಆ ಧರ್ಮ..." ಅವರು ಅನೇಕ ಧರ್ಮಗಳನ್ನು ತಯಾರಿಸಿದ್ದಾರೆ. ಆದರೆ ನಿಜವಾದ ಧರ್ಮವೆಂದರೆ 'ಧರ್ಮಂ ತು ಸಾಕ್ಷಾದ್ ಭಗವತ್-ಪ್ರಣೀತಂ' (ಶ್ರೀ.ಭಾ 6.3.19). ಧರ್ಮ ಎಂದರೆ ಭಗವಂತ ಕೊಟ್ಟಿರುವ ನೀತಿ ನಿಯಮಗಳು. ಅದೇ ಧರ್ಮ. ಧರ್ಮದ ಸರಳ ವ್ಯಾಖ್ಯಾನವೆಂದರೆ: ಧರ್ಮಂ ತು ಸಾಕ್ಷಾದ್ ಭಗವತ್-ಪ್ರಣೀತಂ (ಶ್ರೀ.ಭಾ 6.3.19). ರಾಜ್ಯ, ಸರ್ಕಾರ ಕಾನೂನನ್ನು ನೀಡುವಂತೆ. ನೀವು ಕಾನೂನನ್ನು ತಯಾರಿಸಲು ಸಾಧ್ಯವಿಲ್ಲ. ನಾನು ಪದೇ ಪದೇ ಹೇಳಿದ್ದೇನೆ. ಕಾನೂನನ್ನು ಸರ್ಕಾರ ಮಾಡುತ್ತದೆ. ಅಂತೆಯೇ, ಧರ್ಮವನ್ನು ಭಗವಂತ ರಚಿಸುತ್ತಾನೆ. ನೀವು ದೇವರ ಧರ್ಮವನ್ನು ಒಪ್ಪಿಕೊಂಡರೆ, ಅದುವೇ ಧರ್ಮ. ಮತ್ತು ದೇವರ ಧರ್ಮ ಯಾವುದು? (ಪಕ್ಕಕ್ಕೆ:) ನೀವು ನಿಲ್ಲುವುದ್ದಾದರೆ, ಇಲ್ಲಿ ನಿಂತುಕೊಳ್ಳಿ. ಇತರ ಜನರು ನೋಡುತ್ತಿದ್ದಾರೆ. ಭಗವಂತನ ಧರ್ಮವೆಂದರೆ... ಭಗವದ್ಗೀತೆಯಲ್ಲಿ ನೀವು ಕಾಣಬಹುದು: ಸರ್ವ-ಧರ್ಮಾನ್ ಪರಿತ್ಯಜ್ಯ, ಮಾಮ್ ಏಕಂ ಶರಣಂ ವ್ರಜ (ಭ.ಗೀ 18.66). ಇದೇ ದೇವರ ಧರ್ಮ. “ನೀನು ಈ ಎಲ್ಲಾ ಅಸಂಬದ್ಧ ಧರ್ಮಗಳನ್ನು ತ್ಯಜಿಸು. ನೀನು ನನ್ನ ಭಕ್ತನಾಗು, ನನಗೆ ಶರಣಾಗತನಾದ ಆತ್ಮನಾಗು." ಅದೇ ಧರ್ಮ.