KN/Prabhupada 0171 - ಲಕ್ಷಾಂತರ ವರ್ಷಗಳ ಕಾಲ ಉತ್ತಮ ಸರ್ಕಾರವನ್ನು ಮರೆತುಬಿಡಿ

Revision as of 23:39, 25 March 2023 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0171 - in all Languages Category:KN-Quotes - 1972 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on SB 1.2.28-29 -- Vrndavana, November 8, 1972

ಆದ್ದರಿಂದ, ಈ ವರ್ಣಾಶ್ರಮದ ಪ್ರಕಾರ ತರಬೇತಿ ನೀಡಬೇಕು. ಕೆಲವು ವರ್ಗದ ಜನರಿಗೆ ಒಳ್ಳೆಯ ಬ್ರಾಹ್ಮಣರಾಗಿ ತರಬೇತಿ ನೀಡಬೇಕು. ಕೆಲವು ಜನರಿಗೆ ಒಳ್ಳೆಯ ಕ್ಷತ್ರಿಯರಾಗಿ ತರಬೇತಿ ನೀಡಬೇಕು. ಕೆಲವು ಜನರಿಗೆ ಒಳ್ಳೆಯ ವೈಶ್ಯರಾಗಿ ತರಬೇತಿ ನೀಡಬೇಕು. ಮತ್ತು ಶೂದ್ರನಿಗೆ ಯಾವುದೂ ಅಗತ್ಯವಿಲ್ಲ ... ಎಲ್ಲರೂ ಶೂದ್ರರು. ‘ಜನ್ಮನಾ ಜಾಯತೇ ಶೂದ್ರಃ.’ ಹುಟ್ಟಿನಿಂದಲೇ ಎಲ್ಲರೂ ಶೂದ್ರರು. ‘ಸಂಸ್ಕಾರಾದ್ ಭವೇದ್ ದ್ವಿಜಃ.’ ತರಬೇತಿಯಿಂದ ಒಬ್ಬನು ವೈಶ್ಯನಾಗುತ್ತಾನೆ, ಒಬ್ಬನು ಕ್ಷತ್ರಿಯನಾಗುತ್ತಾನೆ, ಒಬ್ಬನು ಬ್ರಾಹ್ಮಣನಾಗುತ್ತಾನೆ. ಆ ತರಬೇತಿ ಎಲ್ಲಿದೆ? ಎಲ್ಲರೂ ಶೂದ್ರರು. ಹಾಗಿರುವಾಗ ನೀವು ಉತ್ತಮ ಸರ್ಕಾರವನ್ನು ಹೇಗೆ ನಿರೀಕ್ಷಿಸಬಹುದು, ಶೂದ್ರ ಸರ್ಕಾರ? ಎಲ್ಲಾ ಶೂದ್ರರು ವಂಚನೆಯಿಂದ ಮತ ಪಡೆಯುತ್ತಿದ್ದಾರೆ. ಮತ್ತು ಅವರು ಸರ್ಕಾರಿ ಹುದ್ದೆಯನ್ನು ವಶಪಡಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ, ಅವರ ಏಕೈಕ ಕೆಲಸವೆಂದರೆ... ಕಲಿ, ಈ ಯುಗದಲ್ಲಿ ವಿಶೇಷವಾಗಿ, ‘ಮ್ಲೇಚ್ಛಾ ರಾಜನ್ಯ-ರೂಪಿನಃ’, ತಿನ್ನುವುದು ಮತ್ತು ಕುಡಿಯುವುದು, ಮಾಂಸವನ್ನು ತಿನ್ನುವುದು, ವೈನ್ ಕುಡಿಯುವುದು. ಮ್ಲೇಚ್ಛರು, ಯವನರು, ಸರ್ಕಾರಿ ಹುದ್ದೆಯನ್ನು ಸ್ವೀಕರಿಸುತ್ತಿದ್ದಾರೆ. ನೀವು ಇವರಿಂದ ಉತ್ತಮ ಸರ್ಕಾರವನ್ನು ನಿರೀಕ್ಷಿಸಬಹುದೆ? ಮರೆತುಬಿಡಿ, ಈ ವರ್ಣಾಶ್ರಮ-ಧರ್ಮವನ್ನು ನೀವು ಸ್ಥಾಪಿಸದೆ ಹೊರತು ಲಕ್ಷಾಂತರ ವರ್ಷಗಳವರೆಗೆ ಉತ್ತಮ ಸರ್ಕಾರವನ್ನು ಮರೆತುಬಿಡಿ. ಉತ್ತಮ ಸರ್ಕಾರದ ಪ್ರಶ್ನೆಯೇ ಇಲ್ಲ. ಸರ್ಕಾರದ ಉಸ್ತುವಾರಿಯನ್ನು ವಹಿಸಿಕೊಳ್ಳಬಲ್ಲ ಉತ್ತಮ ಕ್ಷತ್ರಿಯರು ಇರಬೇಕು. ಪರೀಕ್ಷಿತ್ ಮಹಾರಾಜನಂತೆ. ಅವನು ತನ್ನ ಪ್ರವಾಸದಲ್ಲಿದ್ದನು. ಆಗ ಒಬ್ಬ ಕಪ್ಪು ಮನುಷ್ಯನು ಹಸುವನ್ನು ಕೊಲ್ಲಲು ಪ್ರಯತ್ನಿಸುತ್ತಿರುವುದನ್ನು ನೋಡಿದ ಕೂಡಲೇ ಅವನು ತನ್ನ ಖಡ್ಗವನ್ನು ತೆಗೆದುಕೊಂಡನು: “ಧೂರ್ತ, ಯಾರು ನೀನು?" ಎಂದನು. ಅದೇ ಕ್ಷತ್ರಿಯ. ಹಸುಗಳಿಗೆ ರಕ್ಷಣೆ ನೀಡಬಲ್ಲವನು, ಅವನೇ ವೈಶ್ಯ. ‘ಕೃಷಿ-ಗೋ-ರಕ್ಷ್ಯ-ವಾಣಿಜ್ಯಂ-ವೈಶ್ಯ-ಕರ್ಮ ಸ್ವಭಾವ-ಜಮ್ (ಭ.ಗೀ 18.44).’ ಎಲ್ಲವೂ ಸ್ಪಷ್ಟವಾಗಿದೆ. ಸಂಸ್ಕೃತಿ ಎಲ್ಲಿದೆ?

ಆದ್ದರಿಂದ, ಈ ಕೃಷ್ಣ ಪ್ರಜ್ಞೆ ಆಂದೋಲನವು ಬಹಳ ಮುಖ್ಯವಾಗಿದೆ. ಸಮಾಜದ ನಾಯಕರು ಈ ಪ್ರಪಂಚದ ಸಾಮಾಜಿಕ ಸ್ಥಿತಿಯನ್ನು ಹೇಗೆ ಸುಧಾರಿಸಬಹುದು ಎಂಬುದರ ಬಗ್ಗೆ ಬಹಳ ಗಂಭೀರವಾಗಿ ಗಮನ ಹರಿಸಬೇಕು. ಇಲ್ಲಿ ಮಾತ್ರವಲ್ಲ, ಎಲ್ಲೆಡೆ. ಕೇವಲ ಅಜ್ಞಾನದಿಂದ ಮತ್ತು ಭ್ರಮೆಯಲ್ಲಿ ಎಲ್ಲವು ನಡೆಯುತ್ತಿದೆ. ಅಸ್ಪಷ್ಟ. ಸ್ಪಷ್ಟ ಅರಿವಿಲ್ಲ. ಸ್ಪಷ್ಟ ಅರಿವು ಇಲ್ಲಿದೆ: ‘ವಾಸುದೇವ-ಪರಾ ವೇದಾಃ (ಶ್ರೀ.ಭಾ 1.2.28-29).’ ವೇದ, ಜ್ಞಾನ, ನೀವು ಜನರಿಗೆ ಶಿಕ್ಷಣ ನೀಡುತ್ತಿದ್ದೀರಿ, ಆದರೆ ವಾಸುದೇವನ ಬಗ್ಗೆ, ಕೃಷ್ಣನ ಬಗ್ಗೆ ಜನರಿಗೆ ಕಲಿಸಲು ನಿಮ್ಮಲ್ಲಿ ಶಿಕ್ಷಣ ಎಲ್ಲಿದೆ? ಭಗವದ್ಗೀತೆಯನ್ನು ನಿಷೇಧಿಸಲಾಗಿದೆ. ವಾಸುದೇವನು ತನ್ನ ಬಗ್ಗೆ ಮಾತನಾಡುತ್ತಿರುವುದು, ಆದರೆ ಅದನ್ನು ನಿಷೇಧಿಸಲಾಗಿದೆ. ಮತ್ತು ಯಾರಾದರು ಓದಿದರೂ ಸಹ, ಯಾರೋ ಧೂರ್ತ ಓದಿದರೆ, ಅವನು ವಾಸುದೇವನನ್ನು ಕಡೆಗಣಿಸುತ್ತಿದ್ದಾನೆ. ಅಷ್ಟೇ. ಕೃಷ್ಣನು ಇಲ್ಲದ ಭಗವದ್ಗೀತೆ! ಇದು ನಡೆಯುತ್ತಿದೆ. ಅತ್ಯಂತ ಅಸಂಬದ್ಧವಾದ ವಿಷಯ. ಅಸಂಬದ್ಧ ಸಮಾಜದಲ್ಲಿ ಮಾನವ ನಾಗರಿಕತೆಯನ್ನು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಮಾನವ ಜೀವನದ ನಿಜವಾದ ಉದ್ದೇಶವು ಇದು: ವಾಸುದೇವ-ಪಾರಾ ವೇದಾಃ ವಾಸುದೇವ-ಪರಾ ಮಖಾಃ ವಾಸುದೇವ-ಪರಾ ಯೋಗಾಃ (ಶ್ರೀ.ಭಾ 1.2.28-29). ಅನೇಕ ಯೋಗಿಗಳಿದ್ದಾರೆ. ವಾಸುದೇವನಿಲ್ಲದೆ ಕೇವಲ ಮೂಗನ್ನು ಒತ್ತುವ ಯೋಗ ಅದು ಯೋಗವಲ್ಲ ಎಂದು ನಾನು ಸ್ಪಷ್ಟವಾಗಿ ಹೇಳಬಲ್ಲೆ. ಅಷ್ಟೇ.