KN/Prabhupada 0175 - ಧರ್ಮ ಎಂದರೆ ಕಾಗೆಗಳನ್ನು ಕ್ರಮೇಣ ಹಂಸಗಳಾಗಿ ಪರಿವರ್ತಿಸುವುದು

Revision as of 00:59, 7 May 2023 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0175 - in all Languages Category:KN-Quotes - 1973 Category:KN-Quotes - L...")
(diff) ← Older revision | Latest revision (diff) | Newer revision → (diff)


Lecture on SB 1.8.33 -- Los Angeles, April 25, 1972

ಭಗವದ್ ಜ್ಞಾನಕ್ಕೆ ಸಂಬಂಧವೇ ಇಲ್ಲದ ಸಾಹಿತ್ಯವು, — ತದ್ ತದ್ ವಾಯಸಂ ತೀರ್ಥಂ — ಅವು ಕಾಗೆಗಳು ಆನಂದಿಸುವ ಸ್ಥಳದಂತೆ. ಕಾಗೆಗಳು ಎಲ್ಲಿ ಆನಂದಿಸುತ್ತವೆ? ಹೊಲಸು ಸ್ಥಳದಲ್ಲಿ. ಮತ್ತು ಹಂಸಗಳು, ಬಿಳಿ ಹಂಸಗಳು, ಅವು ಸುಂದರವಾದ, ಸ್ಪಷ್ಟವಾದ ನೀರಿನಲ್ಲಿ ಆನಂದಿಸುತ್ತವೆ. ಉದ್ಯಾನವಿರುವ ಕಡೆ, ಆ ಪಕ್ಷಿಗಳೂ ಇರುತ್ತವೆ.

ಆದ್ದರಿಂದ, ಪ್ರಾಣಿಗಳಲ್ಲಿಯೂ ಸಹ ವಿಭಾಗಗಳಿವೆ. ಹಂಸ ವರ್ಗ ಮತ್ತು ಕಾಗೆ ವರ್ಗ. ನೈಸರ್ಗಿಕ ವಿಭಜನೆ. ಕಾಗೆ ಹಂಸದ ಬಳಿ ಹೋಗುವುದಿಲ್ಲ. ಹಂಸವು ಕಾಗೆಯ ಬಳಿ ಹೋಗುವುದಿಲ್ಲ. ಹಾಗೆಯೇ ಮಾನವ ಸಮಾಜದಲ್ಲಿ ಕಾಗೆ ವರ್ಗದ ಮನುಷ್ಯರು ಮತ್ತು ಹಂಸ ವರ್ಗದ ಮನುಷ್ಯರು ಇದ್ದಾರೆ. ಹಂಸ ವರ್ಗದ ಮನುಷ್ಯರು ಇಲ್ಲಿಗೆ ಬರುತ್ತಾರೆ ಏಕೆಂದರೆ ಇಲ್ಲಿ ಎಲ್ಲವೂ ಸ್ಪಷ್ಟವಾಗಿದೆ, ಉತ್ತಮವಾಗಿದೆ — ಉತ್ತಮ ತತ್ವಸಿದ್ಧಾಂತ, ಉತ್ತಮ ಆಹಾರ, ಉತ್ತಮ ಶಿಕ್ಷಣ, ಉತ್ತಮ ಉಡುಗೆ, ಒಳ್ಳೆಯ ಮನಸ್ಸು, ಎಲ್ಲವೂ ಒಳ್ಳೆಯದು. ಮತ್ತು ಕಾಗೆ ವರ್ಗದ ಮನುಷ್ಯರು ಕ್ಲಬ್‌ಗಳಿಗೆ, ಪಾರ್ಟಿಗಳಿಗೆ, ಬೆತ್ತಲೆ ನೃತ್ಯ ನೋಡಲು, ಇತ್ಯಾದಿ ಸ್ಥಳಗಳಿಗೆ ಹೋಗುತ್ತಾರೆ. ನೋಡಿ.

ಆದ್ದರಿಂದ, ಈ ಕೃಷ್ಣ ಪ್ರಜ್ಞೆ ಆಂದೋಲನವು ಹಂಸ ವರ್ಗದವರಿಗೆ ಮೀಸಲು. ಕಾಗೆ ವರ್ಗದವರಿಗಲ್ಲ. ಅಲ್ಲ. ಆದರೆ ನಾವು ಕಾಗೆಗಳನ್ನು ಹಂಸಗಳಾಗಿ ಪರಿವರ್ತಿಸಬಹುದು. ಅದು ನಮ್ಮ ತತ್ವಸಿದ್ಧಾಂತ. ಕಾಗೆಯಾಗಿದ್ದವನು ಈಗ ಹಂಸದಂತೆ ಈಜುತ್ತಿದ್ದಾನೆ. ಅದನ್ನು ನಾವು ಮಾಡಬಹುದು. ಅದುವೇ ಕೃಷ್ಣ ಪ್ರಜ್ಞೆಯ ಪ್ರಯೋಜನ. ಹಂಸಗಳು ಕಾಗೆಗಳಾದರೆ ಅದು ಭೌತಿಕ ಪ್ರಪಂಚ. ಕೃಷ್ಣ ಹೀಗೆ ಹೇಳುತ್ತಾನೆ: ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ ಭವತಿ (ಭ.ಗೀ 4.7). ಜೀವಿಯು ಈ ಭೌತಿಕ ದೇಹದಲ್ಲಿ ಸೆರೆಯಾಗಿದ್ದು, ಅವನು ಇಂದ್ರಿಯಗಳನ್ನು ತೃಪ್ತಿಪಡಿಸಲು ಪ್ರಯತ್ನಿಸುತ್ತಿದ್ದಾನೆ, ಒಂದರ ನಂತರ ಮತ್ತೊಂದು, ಅದರ ನಂತರ ಮತ್ತೊಂದು ದೇಹದ ಮುಖಾಂತರ. ಇದು ಅವರ ಪರಿಸ್ಥಿತಿ. ಧರ್ಮ ಎಂದರೆ ಕಾಗೆಗಳನ್ನು ಕ್ರಮೇಣ ಹಂಸಗಳಾಗಿ ಪರಿವರ್ತಿಸುವುದು. ಅದುವೇ ಧರ್ಮ.

ಒಬ್ಬ ಮನುಷ್ಯ ಅತ್ಯಂತ ಅನಕ್ಷರಸ್ಥ, ಅಸಭ್ಯನಾದವನಾಗಿದ್ದರೂ ಅವನನ್ನು ವಿದ್ಯಾವಂತ, ಸುಸಂಸ್ಕೃತ ವ್ಯಕ್ತಿಯಾಗಿ ಪರಿವರ್ತಿಸಬಹುದು. ಶಿಕ್ಷಣದಿಂದ, ತರಬೇತಿಯಿಂದ. ಆದ್ದರಿಂದ, ಇದು ಮಾನವ ಜನ್ಮದಲ್ಲಿ ಸಾಧ್ಯ. ಒಂದು ನಾಯಿ ಭಕ್ತನಾಗುವಂತೆ ತರಬೇತಿ ನೀಡಲು ನನಗೆ ಸಾಧ್ಯವಿಲ್ಲ. ಅದು ಕಷ್ಟ. ಅದು ಸಾಧ್ಯ, ಆದರೆ ನಾನು ಅಷ್ಟು ಶಕ್ತಿವಂತನಲ್ಲದಿರಬಹುದು. ಚೈತನ್ಯ ಮಹಾಪ್ರಭು ಮಾಡಿದರು. ಅವರು ಜರಿಖಂಡ ಕಾಡಿನಲ್ಲಿ ಹೋಗುವಾಗ ಹುಲಿಗಳು, ಹಾವುಗಳು, ಜಿಂಕೆಗಳು, ಎಲ್ಲಾ ಪ್ರಾಣಿಗಳು ಅವರ ಭಕ್ತರಾದವು. ಅವು ಭಕ್ತರಾದವು. ಆದ್ದರಿಂದ, ಚೈತನ್ಯ ಮಹಾಪ್ರಭುವಿಗೆ ಏನು ಸಾಧ್ಯವಾಯಿತೋ... ಏಕೆಂದರೆ ಅವರು ದೇವರು. ಅವರು ಏನು ಬೇಕಾದರೂ ಮಾಡಬಹುದು. ನಾವು ಅದನ್ನು ಮಾಡಲು ಸಾಧ್ಯವಿಲ್ಲ. ಆದರೆ ನಾವು ಮಾನವ ಸಮಾಜದಲ್ಲಿ ಕೆಲಸ ಮಾಡಬಹುದು. ಮನುಷ್ಯ ಎಂತಹ ಪಾಪಿಯಾಗಿದ್ದರೂ ಪರವಾಗಿಲ್ಲ. ಅವನು ನಮ್ಮ ಆದೇಶವನ್ನು ಅನುಸರಿಸಿದರೆ ಅವನು ಬದಲಾಗಬಹುದು.

ಅದನ್ನೇ ಧರ್ಮ ಎನ್ನುತ್ತಾರೆ. ಧರ್ಮ ಎಂದರೆ ಒಬ್ಬನನ್ನು ಅವನ ಸಹಜ ಸ್ಥಾನಕ್ಕೆ ಮರಳಿ ತರುವುದು. ಅದು ಧರ್ಮ. ವರ್ಗಗಳು ಇರಬಹುದು. ಆದರೆ ನಮ್ಮ ಸಹಜ ಸ್ಥಾನವೆಂದರೆ ನಾವು ಭಗವಂತನ ಭಾಗಾಂಶ, ಮತ್ತು ನಾವು ಭಗವಂತನ ಭಾಗಾಂಶ ಎಂದು ನಾವು ಅರ್ಥಮಾಡಿಕೊಂಡಾಗ, ಅದು ನಮ್ಮ ಜೀವನದ ವಾಸ್ತವ ಸ್ಥಾನವಾಗುತ್ತದೆ. ಅವನು ತನ್ನ ಬ್ರಹ್ಮನ್ ಸಾಕ್ಷಾತ್ಕಾರವನ್ನು ಅರ್ಥಮಾಡಿಕೊಳ್ಳುವುದನ್ನು ಮತ್ತು ಗುರುತಿಸುವುದನ್ನು ಬ್ರಹ್ಮ-ಭೂತ (ಶ್ರೀ.ಭಾ 4.30.20) ಹಂತ ಎಂದು ಕರೆಯಲಾಗುತ್ತದೆ.