KN/Prabhupada 0176 - ನೀವು ಕೃಷ್ಣನನ್ನು ಪ್ರೀತಿಸಿದರೆ ಕೃಷ್ಣನು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತಾನೆ: Difference between revisions

(Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0176 - in all Languages Category:KN-Quotes - 1973 Category:KN-Quotes - L...")
 
(No difference)

Latest revision as of 03:12, 17 May 2023



Lecture on SB 1.8.45 -- Los Angeles, May 7, 1973

ಆದ್ದರಿಂದ, ನಾವು ಈ ನಿಗೂಢ ಶಕ್ತಿಯನ್ನು ಪಡೆದಿದ್ದೇವೆ, ಆದರೆ ಅದು ನಮಗೆ ಗೊತ್ತಿಲ್ಲ. ಉದಾಹರಣೆಯನ್ನು ಆ ರೀತಿ ಕೊಡಲಾಗಿದೆ. ನಾಭಿಯಲ್ಲಿ ಸುಗಂಧಿತ ಕಸ್ತೂರಿ ಪರಿಮಳವನ್ನು ಹೊಂದಿರುವ ಜಿಂಕೆ, ಖುಷಿಯಿಂದ ಇಲ್ಲಿ ಅಲ್ಲಿ ಜಿಗಿಯುತ್ತಿದೆ. ಈ ಪರಿಮಳ ಎಲ್ಲಿಂದ ಬರುತ್ತಿದೆ? ಅದರ ಹೊಕ್ಕುಳಿನಲ್ಲಿ ಪರಿಮಳವಿದೆ ಎಂದು ಅದಕ್ಕೆ ತಿಳಿದಿಲ್ಲ. ನೋಡಿ. ಪರಿಮಳವು ಅದರಲ್ಲಿದೆ, ಆದರೆ "ಅದು ಎಲ್ಲಿದೆ? ಅದು ಎಲ್ಲಿದೆ?" ಎಂದು ಹುಡುಕ್ಕುತ್ತಿದೆ. ಹಾಗೆಯೇ ನಮ್ಮೊಳಗೆ ಎಷ್ಟೋ ಸುಪ್ತ ಅತೀಂದ್ರಿಯ ಶಕ್ತಿಗಳು ಅಡಗಿವೆ. ನಮಗೆ ಅರಿವಿಲ್ಲ. ಆದರೆ ನೀವು ಅತೀಂದ್ರಿಯ ಯೋಗ ಕ್ರಿಯೆಯನ್ನು ಅಭ್ಯಾಸ ಮಾಡಿದರೆ, ಕೆಲವು ಶಕ್ತಿಗಳು ನಿಮ್ಮಲ್ಲಿ ಚೆನ್ನಾಗಿ ವಿಕಸನಗೊಳ್ಳಬಹುದು. ಪಕ್ಷಿಗಳು ಹಾರುತ್ತವೆ, ಆದರೆ ನಾವು ಹಾರಲು ಸಾಧ್ಯವಿಲ್ಲ. ಕೆಲವೊಮ್ಮೆ ನಾವು ಬಯಸುತ್ತೇವೆ, "ನಾನು ಪಾರಿವಾಳದ ರೆಕ್ಕೆಗಳನ್ನು ಹೊಂದಿದ್ದರೆ..." ಕವನಗಳಿವೆ: "ನಾನು ತಕ್ಷಣ ಹಾರಬಹುದು." ಆದರೆ ಆ ನಿಗೂಢ ಶಕ್ತಿಯು ನಿಮ್ಮೊಳಗೇ ಇದೆ. ನೀವು ಯೋಗಾಭ್ಯಾಸದಿಂದ ನಿಮ್ಮ ಶಕ್ತಿಯನ್ನು ಹೆಚ್ಚಿಸಿಕೊಂಡರೆ, ನೀವು ಕೂಡ ಗಾಳಿಯಲ್ಲಿ ಹಾರಬಹುದು. ಅದು ಸಾಧ್ಯ. ಸಿದ್ಧಲೋಕ ಎಂಬ ಒಂದು ಗ್ರಹವಿದೆ. ಸಿದ್ಧಲೋಕ ನಿವಾಸಿಗಳನ್ನು ಹೀಗೆ ಕರೆಯಲಾಗುತ್ತದೆ... ಸಿದ್ಧಲೋಕ ಎಂದರೆ ಅದರ ನಿವಾಸಿಗಳು ಅನೇಕ ಅತೀಂದ್ರಿಯ ಶಕ್ತಿಗಳನ್ನು ಪಡೆದಿದ್ದಾರೆ ಎಂದರ್ಥ. ನಾವು ಅನೇಕ ಯಂತ್ರಗಳ ಮೂಲಕ ಚಂದ್ರ ಗ್ರಹಕ್ಕೆ ಹೋಗಲು ಪ್ರಯತ್ನಿಸುತ್ತಿದ್ದೇವೆ. ಆದರೆ ಸಿದ್ಧರು ಹಾರಬಲ್ಲರು. ಅವರು ಬಯಸಿದ ತಕ್ಷಣ, ಹಾರಬಲ್ಲರು.

ಆದ್ದರಿಂದ, ಪ್ರತಿಯೊಬ್ಬರಲ್ಲೂ ಅತೀಂದ್ರಿಯ ಶಕ್ತಿಗಳಿವೆ. ಅದನ್ನು ಹೆಚ್ಚಿಸಿಕೊಳ್ಳಬೇಕು. ಪರಸ್ಯ ಶಕ್ತಿರ್ ವಿವಿಧೈವ ಶ್ರುಯತೆ (ಚೈ.ಚ ಮಧ್ಯ 13.65, ಭಾವಾರ್ಥ). ನಮ್ಮಲ್ಲಿ ಅನೇಕ ಸುಪ್ತ ಶಕ್ತಿಗಳಿವೆ. ಅದನ್ನು ಬೆಳೆಸಬೇಕು. ಕೃಷ್ಣನ ಹಾಗೆ. ನಾಲ್ಕು ಅಥವಾ ಐದು ವರ್ಷಗಳ ಹಿಂದೆ, ನಿಮಗೆ ಕೃಷ್ಣ ಯಾರು ಎಂದು ತಿಳಿದಿರಲಿಲ್ಲ. ಭಗವಂತ ಯಾರು, ನಮ್ಮ ಸಂಬಂಧವೇನು ಎಂದು ಅಭ್ಯಾಸದ ಮೂಲಕ ನೀವು ಕೃಷ್ಣನನ್ನು ತಿಳಿದುಕೊಳ್ಳುತ್ತಿದ್ದೀರಿ. ಆದ್ದರಿಂದ, ಮಾನವ ಜೀವನವು ಅಂತಹ ಕೃಷಿಗಾಗಿಯೇ ಹೊರತು ಆಹಾರ ಎಲ್ಲಿದೆ, ಆಶ್ರಯ ಎಲ್ಲಿದೆ, ಮೈಥುನ ಎಲ್ಲಿದೆ ಎಂದು ಹುಡುಕಲು ಅಲ್ಲ. ಇವುಗಳು ಈಗಾಗಲೇ ಇವೆ. ತಸ್ಯೈವ ಹೆತೋಹ್ ಪ್ರಯತೇತ ಕೋವಿದೋ ನಾ ಲ್ಯಭ್ಯತೇ... (ಶ್ರೀ.ಭಾ 1.5.18). ಈ ವಿಷಯಗಳು ನಮ್ಮ ವಿಚಾರಣೆಯ ವಿಷಯವಲ್ಲ. ಇವುಗಳು ಈಗಾಗಲೇ ಇವೆ. ಪಕ್ಷಿಗಳು ಮತ್ತು ಪ್ರಾಣಿಗಳಿಗೂ ಸಹ ಸಾಕಷ್ಟು ಲಭ್ಯವಿದೆ ಇನ್ನು ಮನುಷ್ಯನ ಬಗ್ಗೆ ಏನು ಹೇಳುವುದು? ಆದರೆ ಮನುಷ್ಯರು ಅತ್ಯಂತ ಧೂರ್ತರು. ಆಹಾರ ಎಲ್ಲಿದೆ, ಆಶ್ರಯ ಎಲ್ಲಿದೆ, ಮೈಥುನ ಎಲ್ಲಿದೆ, ರಕ್ಷಣೆ ಎಲ್ಲಿದೆ ಎಂಬ ಆಲೋಚನೆಯಲ್ಲಿ ಅವರು ಲೀನರಾಗಿದ್ದಾರೆ. ಇದು ದಾರಿತಪ್ಪಿದ ನಾಗರಿಕತೆ, ದಾರಿತಪ್ಪಿದೆ. ಈ ವಿಷಯಗಳ ಪ್ರಶ್ನೆಯೇ ಇಲ್ಲ... ಯಾವುದೇ ಸಮಸ್ಯೆ ಇಲ್ಲ. ಪ್ರಾಣಿಗೆ ಯಾವುದೇ ಸಮಸ್ಯೆ ಇಲ್ಲ, ಪಕ್ಷಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ಗಮನಿಸುವುದಿಲ್ಲ. ಆದರೆ ಮಾನವ ಸಮಾಜದಲ್ಲಿ ಅಂತಹ ಸಮಸ್ಯೆ ಇದಯೆ? ಅದು ಸಮಸ್ಯೆಯೇ ಅಲ್ಲ. ಜನನ, ಸಾವು, ವೃದ್ಧಾಪ್ಯ, ಮತ್ತು ರೋಗಗಳ ಪುನರಾವರ್ತನೆಯನ್ನು ಹೇಗೆ ನಿಲ್ಲಿಸುವುದು ಎಂಬುದು ನಿಜವಾದ ಸಮಸ್ಯೆ. ಇದು ನಿಜವಾದ ಸಮಸ್ಯೆ. ಆ ಸಮಸ್ಯೆಯನ್ನು ಕೃಷ್ಣ ಪ್ರಜ್ಞೆ ಆಂದೋಲನವು ಪರಿಹರಿಸುತ್ತಿದೆ. ನೀವು ಕೇವಲ ಕೃಷ್ಣ ಯಾರೆಂದು ಅರ್ಥಮಾಡಿಕೊಂಡರೆ ಸಾಕು, ತ್ಯಕ್ತ್ವಾ ದೇಹಮ್ ಪುನರ್ ಜನ್ಮ ನೈತಿ (ಭ.ಗೀ 4.9), ಇನ್ನು ನಿಮಗೆ ಭೌತಿಕ ಜನ್ಮವಿಲ್ಲ.

ಆದ್ದರಿಂದ, ಕೃಷ್ಣ ಪ್ರಜ್ಞೆಯ ಆಂದೋಲನ ಎಷ್ಟು ಚೆನ್ನಾಗಿದೆಯೆಂದರೆ ನೀವು ಕೃಷ್ಣನೊಂದಿಗೆ ಸ್ನೇಹ ಬೆಳೆಸಿದರೆ ನೀವು ಕೃಷ್ಣನೊಂದಿಗೆ ಮಾತನಾಡಬಹುದು. ಯುಧಿಷ್ಠಿರ ಮಹಾರಾಜರು ವಿನಂತಿಸಿದಂತೆ: "ಕೃಷ್ಣ, ದಯವಿಟ್ಟು ಇನ್ನೂ ಕೆಲವು ದಿನಗಳು ಇರಿ." ಆದ್ದರಿಂದ, ನೀವು ಕೃಷ್ಣನನ್ನು ಪ್ರೀತಿಸಿದರೆ ಕೃಷ್ಣನು ಇನ್ನೂ ಕೆಲವು ದಿನಗಳಲ್ಲ, ಕೃಷ್ಣನು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತಾನೆ.

ತುಂಬಾ ಧನ್ಯವಾದಗಳು. (ಅಂತ್ಯ)