KN/Prabhupada 0192 - ಕಗ್ಗತ್ತಲೆಯಿಂದ ಇಡೀ ಮಾನವ ಸಮಾಜವನ್ನು ಕಾಪಾಡಿರಿ

Revision as of 01:39, 13 February 2024 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0192 - in all Languages Category:KN-Quotes - 1975 Category:KN-Quotes - Lectures, Srimad-Bhagavatam Category:KN-Quotes - in India Category:KN-Quotes - in India, Vrndavana <!-- END CATEGORY LIST --> <!-- BEGIN NAVIGATION BAR -- DO NOT EDIT OR REMOVE --> {{1080 videos navigation - All Languages|English|Prabhupada 0191 - Control Krsna - That is Vrndavana Life|0191...")
(diff) ← Older revision | Latest revision (diff) | Newer revision → (diff)


Lecture on SB 6.1.62 -- Vrndavana, August 29, 1975

ಭಗವದ್ಗೀತೆಯಲ್ಲಿ ಹೀಗೆ ಹೇಳಲಾಗಿದೆ: ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್, ಪುರುಷಂ ಶಾಶ್ವತಮ್ ಅದ್ಯಮ್ (ಭ.ಗೀ 10.12). ಕೃಷ್ಣ ಭಗವಂತನನ್ನು ಪುರುಷ ಎಂದು, ಮತ್ತು ಜೀವಿಗಳನ್ನು ಪ್ರಕೃತಿ ಎಂದು ವಿವರಿಸಲಾಗಿದೆ. ಅಪರೇಯಂ ಇತಸ್ ತು ವಿದ್ಧಿ ಮೇ ಪ್ರಕೃತಿಂ ಪರಾ, ಜೀವ-ಭೂತೋ ಮಹಾ-ಬಾಹೋ ಯಯೇದಂ ಧಾರ್ಯತೇ ಜಗತ್ (ಭ.ಗೀ 7.5). ಕೃಷ್ಣ ವಿವರಿಸಿದ್ದಾನೆ. ಭೌತಿಕ ಮತ್ತು ಆಧ್ಯಾತ್ಮಿಕ ಶಕ್ತಗಳಿವೆ. ಆದ್ದರಿಂದ, ಜೀವ-ಭೂತ. ಜೀವ-ಭೂತ, ಜೀವಿಗಳು, ಅವುಗಳನ್ನು ಪ್ರಕೃತಿ ಎಂದು ವಿವರಿಸಲಾಗಿದೆ, ಮತ್ತು ಪ್ರಕೃತಿ ಎಂದರೆ ಹೆಣ್ಣು. ಮತ್ತು ಕೃಷ್ಣನನ್ನು ಪುರುಷ ಎಂದು ವಿವರಿಸಲಾಗಿದೆ. ಆದ್ದರಿಂದ, ಪುರುಷನು ಅನುಭವಿಸುವವನು, ಮತ್ತು ಪ್ರಕೃತಿಯು ಅನುಭವಿಸಲ್ಪಡುವುದು. “ಅನುಭವಿಸಲ್ಪಡುವ” ಎಂದರೆ ಕೇವಲ ಮೈಥುನ ಎಂದು ಭಾವಿಸಬೇಡಿ. ಇಲ್ಲ. “ಅನುಭವಿಸಲ್ಪಡುವ” ಎಂದರೆ ಅಧೀನ, ಪುರುಷನ ಆದೇಶವನ್ನು ಪಾಲಿಸುವುದು. ಇದು ಕೃಷ್ಣನ ಮತ್ತು ನಮ್ಮ ಸ್ಥಾನ. ಕೈ ಕಾಲುಗಳು ನನ್ನ ದೇಹದ ಭಾಗಾಂಶವಾಗಿರುವಂತೆಯೇ ನಾವು ಕೃಷ್ಣನ ಭಾಗಾಂಶವಾಗಿದ್ದೇವೆ. ಆದ್ದರಿಂದ, ನನ್ನ ಆದೇಶವನ್ನು ನಿರ್ವಹಿಸುವುದೆ ನನ್ನ ಕೈ ಮತ್ತು ಕಾಲುಗಳ ಕರ್ತವ್ಯ. ನಾನು ನನ್ನ ಕಾಲುಗಳಿಗೆ, "ನನ್ನನ್ನು ಅಲ್ಲಿಗೆ ಒಯ್ಯಿರಿ", ಎಂದರೆ ಅವು ತಕ್ಷಣವೇ ಮಾಡುತ್ತವೆ. ನನ್ನ ಕೈಯನ್ನು, “ಅದನ್ನು ತೆಗೆದುಕೊ”, ಎಂದರೆ ಅದನ್ನು ತೆಗೆದುಕೊಳ್ಳುತ್ತದೆ. ಇದುವೇ ಪ್ರಕೃತಿ ಮತ್ತು ಪುರುಷ. ಪುರುಷನು ಆದೇಶಿಸುತ್ತಾನೆ, ಮತ್ತು ಪ್ರಕೃತಿಯು ಕರ್ತವ್ಯವನ್ನು ನಿರ್ವಹಿಸುತ್ತದೆ. ಇದು ನಿಜ..., ಪ್ರಕೃತಿ ಮತ್ತು ಪುರುಷ ಎಂದ ತಕ್ಷಣ ಮೈಥುನ ಎಂದಲ್ಲ. ಇಲ್ಲ. ಪ್ರಕೃತಿ ಎಂದರೆ ವಿಧೇಯ, ಪುರುಷನಿಗೆ ವಿಧೇಯವಾಗಿರುವುದು ಎಂದರ್ಥ. ಇದು ಸಹಜ. ಪಾಶ್ಚಿಮಾತ್ಯ ದೇಶಗಳಲ್ಲಿ ಅವರು ಕೃತಕವಾಗಿ ಸಮಾನರಾಗಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅದು ಸ್ವಭಾವತಃ ಸಾಧ್ಯವಿಲ್ಲ. ಮತ್ತು ಕೀಳು-ಮೇಲು ಎನ್ನುವ ಪ್ರಶ್ನೆಯೇ ಇಲ್ಲ. ಅಂತಹ ಪ್ರಶ್ನೆಯೇ ಇಲ್ಲ. ಆದಿಕಾಲದಿಂದಲೂ, ಯತೋ ವಾ ಇಮನಿ ಭೂತಾನಿ ಜಯನ್ತೇ. ಜನ್ಮಾದಿ ಅಸ್ಯ ಯತಃ (ಶ್ರೀ.ಭಾ 1.1.1. ಈ ಪುರುಷ ಮತ್ತು ಪ್ರಕೃತಿ ಸಂಬಂಧ ಎಲ್ಲಿಂದ ಪ್ರಾರಂಭವಾಯಿತು? ಜನ್ಮಾದಿ ಅಸ್ಯ ಯತಃ. ಇದು ಪರಾತ್ಪರ ಸತ್ಯದಿಂದ ಪ್ರಾರಂಭವಾಗಿದೆ. ಪರಾತ್ಪರ ಸತ್ಯ ಎಂದರೆ ರಾಧಾ-ಕೃಷ್ಣ, ಅದೇ ಪುರುಷ ಮತ್ತು ಪ್ರಕೃತಿ. ಆದರೆ ರಾಧಾರಾಣಿಯು ಸೇವಕಿ, ಅವಳು ಸೇವೆ ಮಾಡುತ್ತಾಳೆ. ರಾಧಾರಾಣಿಯು ಎಷ್ಟು ಪರಿಣತಿಯನ್ನು ಹೊಂದಿದ್ದಾಳೆಂದರೆ ತನ್ನ ಸೇವೆಯಿಂದ ಯಾವಾಗಲೂ ಕೃಷ್ಣನನ್ನು ಆಕರ್ಷಿಸುತ್ತಾಳೆ. ಇದೇ ರಾಧಾರಾಣಿಯ ಸ್ಥಾನ. ಕೃಷ್ಣನನ್ನು ಮದನ-ಮೋಹನ ಎಂದು ಕರೆಯಲಾಗುತ್ತದೆ. ಇಲ್ಲಿ ವೃಂದಾವನದಲ್ಲಿ ಕೃಷ್ಣನನ್ನು ಮದನ-ಮೋಹನ, ಮತ್ತು ರಾಧಾರಿಣಿಯನ್ನು ಮದನ-ಮೋಹನ-ಮೋಹಿನಿ ಎಂದು ಕರೆಯಲಾಗುತ್ತದೆ. ಕೃಷ್ಣನು ಎಷ್ಟು ಆಕರ್ಷಕನೆಂದರೆ ನಾವು ಮನ್ಮಥನಿಂದ ಆಕರ್ಷಿತರಾಗುತ್ತೇವೆ, ಆದರೆ ಕೃಷ್ಣನು ಮನ್ಮಥನನ್ನು ಆಕರ್ಷಿಸುತ್ತಾನೆ. ಆದ್ದರಿಂದ, ಅವನ ಹೆಸರು ಮದನ-ಮೋಹನ. ಮತ್ತು ರಾಧಾರಾಣಿಯು ಎಷ್ಟು ಶ್ರೇಷ್ಠಳೆಂದರೆ ಅವಳು ಕೃಷ್ಣನನ್ನು ಆಕರ್ಷಿಸುತ್ತಾಳೆ. ಆದ್ದರಿಂದ, ಅವಳು ಪರಮ ಶ್ರೇಷ್ಠಳು. ಆದ್ದರಿಂದ, ವೃಂದಾವನದಲ್ಲಿ, ಜನರು ಕೃಷ್ಣನ ನಾಮಕ್ಕಿಂತ ರಾಧಾರಿಣಿಯ ನಾಮವನ್ನು ಜಪಿಸಲು ಒಗ್ಗಿಕೊಂಡಿದ್ದಾರೆ – “ಜಯ ರಾಧೆ.” ಹೌದು. ನೀವು ಕೃಷ್ಣನ ಅನುಗ್ರಹವನ್ನು ಬಯಸಿದರೆ, ನೀವು ಕೇವಲ ರಾಧಾರಾಣಿಯನ್ನು ಮೆಚ್ಚಿಸಲು ಪ್ರಯತ್ನಿಸಿ. ಇದುವೇ ಮಾರ್ಗ.

ಈಗ ಇಲ್ಲಿ ಹೇಳಲಾಗಿದೆ, ಮನ ಮದನ-ವೇಪಿತಂ: “ಮನಸ್ಸು ಕ್ಷೋಭೆಗೊಂಡಿತು.” ಆದ್ದರಿಂದ, ಮದನ-ಮೋಹನದಿಂದ ಆಕರ್ಷಿತರಾಗದ ಹೊರತು ಈ ಮನದ ತಳಮಳ ಮುಂದುವರಿಯುತ್ತದೆ. ನಾವು ಮದನ-ಮೋಹನನಿಂದ ಆಕರ್ಷಿತರಾಗದಿದ್ದರೆ, ಮದನನ ಮೋಹಕ್ಕೆ ಆಕರ್ಷಿತರಾಗುತ್ತೇವೆ, ಮದನ-ವೇಪಿತಂ. ಇದು ಪ್ರಕ್ರಿಯೆ. ಮತ್ತು ನೀವು ನಿಮ್ಮ ಮನಸ್ಸನ್ನು ನಿಯಂತ್ರಿಸದಿದ್ದರೆ, ಮದನನಿಂದ ವಿಚಲಿತರಾಗದಂತೆ ನಿಮ್ಮ ಮನಸ್ಸನ್ನು ನಿಯಂತ್ರಿಸಲು ನಿಮಗೆ ಸಾಧ್ಯವಾಗದಿದ್ದರೆ, ಮುಕ್ತಿ ಅಥವಾ ಮೋಕ್ಷದ ಪ್ರಶ್ನೆಯೇ ಇಲ್ಲ. ಜನನ, ಮರಣ, ಮತ್ತು ತ್ರಿವಿಧ ಕ್ಲೇಶಗಳಾದ ಈ ಭೌತಿಕ ವ್ಯವಹಾರಗಳಿಂದ ಮುಕ್ತರಾಗುವುದೇ ಈ ಜೀವನದ ಅಂತಿಮ ಗುರಿಯಾಗಿದೆ. ಅದುವೇ ಪರಿಪೂರ್ಣತೆ. ಜೀವನದ ಗುರಿ ಏನು, ಜೀವನದ ಪರಿಪೂರ್ಣತೆ ಏನು ಎಂಬುದು ಈ ಇಡೀ ಜಗತ್ತಿಗೇ ಅರಿವಿಲ್ಲ. ಅದರಲ್ಲು, ಈ ಯುಗದಲ್ಲಿ ಎಷ್ಟು ಅದಃಪತನಕ್ಕೆ ಒಳಗಾಗಿದ್ದಾರೆ ಎಂದರೆ ಜೀವನದ ಗುರಿಯೇನೆಂದು ತಿಳಿಯದಂತಾಗಿದ್ದಾರೆ. ಈ ಎಲ್ಲ ದೊಡ್ಡ, ದೊಡ್ಡ ರಾಜಕೀಯ ಪಕ್ಷಗಳು, ತತ್ವಜ್ಞಾನಿಗಳು, ವಿಜ್ಞಾನಿಗಳು, ಅವರಿಗೆ ಜ್ಞಾನವಿಲ್ಲ. ಅವರು ಅಂಧಕಾರದಲ್ಲಿದ್ದಾರೆ. ಆದ್ದರಿಂದ, ಇದನ್ನು ಭ್ರಮೆ, ಅಂಧಕಾರದಲ್ಲಿರುವುದು, ಎನ್ನಲಾಗುತ್ತದೆ. ಆದರೆ ನಾವು ‘ಕೃಷ್ಣ ಸೂರ್ಯ ಸಮ’ “ಕೃಷ್ಣನು ಸೂರ್ಯನಂತೆ”, ಎಂದು ಅರಿತುಕೊಂಡಿದ್ದೇವೆ. ಕೃಷ್ಣ ಸೂರ್ಯ-ಸಮ; ಮಾಯಾ ಅಂಧಕಾರ: “ಮತ್ತು ಈ ಕತ್ತಲೆ ಎಂದರೆ ಮಾಯೆ.”

ಕೃಷ್ಣ ಸೂರ್ಯ-ಸಮ; ಮಾಯಾ ಅಂಧಕಾರ
ಯಾಹಾನ್ ಕೃಷ್ಣ, ತಾಹಾನ್ ನಾಹಿ ಮಾಯಾರ ಅಧಿಕಾರ
(ಚೈ.ಚ ಮಧ್ಯ 22.31)

ಮಾಮ್ ಏವ ಯೇ ಪ್ರಪದ್ಯಂತೇ ಮಾಯಾಂ ಏತಾಂ ತರಂತಿ ತೇ (ಭ.ಗೀ 7.14). ಇದೇ ಪ್ರಕ್ರಿಯೆ.

ಆದ್ದರಿಂದ, ಇದು ಒಂದು ಮಹಾನ್ ವಿಜ್ಞಾನ. ಕೃಷ್ಣ ಪ್ರಜ್ಞೆಯ ಆಂದೋಲನವು ಇಡೀ ಮಾನವ ಸಮಾಜವನ್ನು ಗಾಢ ಅಂಧಕಾರದಿಂದ ಹೊರತರುವ ಅತ್ಯಂತ ವೈಜ್ಞಾನಿಕ ಚಳುವಳಿಯಾಗಿದೆ.