KN/Prabhupada 0193 - ನಮ್ಮ ಇಡೀ ಸಮಾಜವು ಈ ಪುಸ್ತಕಗಳಿಂದ ಕೇಳುತ್ತಿವೆ

Revision as of 00:27, 4 March 2024 by Sudhir (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Prabhupada 0193 - in all Languages Category:KN-Quotes - 1974 Category:KN-Quotes - Conversations Category:KN-Quotes - in Germany <!-- END CATEGORY LIST --> <!-- BEGIN NAVIGATION BAR -- DO NOT EDIT OR REMOVE --> {{1080 videos navigation - All Languages|English|Prabhupada 0192 - Get the Whole Human Society from the Pitch of Darkness|0192|Prabhupada 0194 - Here are Ideal Men|019...")
(diff) ← Older revision | Latest revision (diff) | Newer revision → (diff)


Room Conversation with Professor Durckheim German Spiritual Writer -- June 19, 1974, Germany

ಡಾ. ಸಾಹೇರ್: ದಯೆ ಮಾಡಿ ಭಗವಂತನ ನಾಮವನ್ನು ಜಪಿಸುವ ನಿಮ್ಮ ವಿಧಾನವನ್ನು ಇನ್ನಷ್ಟು ಸ್ಪಷ್ಟಪಡಿಸುವಿರಾ.... ಕೆಲವು ನಿರ್ದಿಷ್ಟ ರೀತಿಯಲ್ಲಿ ಏನಾಗುತ್ತದೆ (ಜರ್ಮನ್), ಮತ್ತು ಜಪಕ್ಕೆ ಸಂಬಂಧಿತವಾಗಿ ಏನು ಮಾಡಬೇಕು ಎಂಬುದನ್ನು ವಿವರಿಸುವಿರಾ? ಮತ್ತು ಒಟ್ಟಾರೆಯಾಗಿ, ನಿಮ್ಮ ಪೂಜ್ಯ ಬೋಧನೆಗಳ ಸಂಪೂರ್ಣ ವ್ಯವಸ್ಥೆಯಲ್ಲಿ, ಜಪ ಹೇಗೆ ರೂಪಿಸಲ್ಪಟ್ಟಿದೆ ಎಂದು ವಿವರಿಸುವಿರಾ?

ಪ್ರಭುಪಾದ: ಸರಿ. ಇದು ಭಕ್ತಿ-ಮಾರ್ಗ, ಅಂದರೆ, ಮೊದಲನೆಯದು ‘ಶ್ರವಣಂ’, ಆಲಿಸುವುದು. ಜನರಿಗೆ ಕೇಳಲು ಅವಕಾಶ ನೀಡಲು ಈ ಪುಸ್ತಕಗಳನ್ನು ಬರೆಯಲಾಗಿದೆ. ಅದೇ ಮೊದಲ ಕಾರ್ಯ. ನಾವು ದೇವರ ಬಗ್ಗೆ ಕೇಳದಿದ್ದರೆ ಏನೇನೋ ಕಲ್ಪಿಸಿಕೊಳ್ಳುತ್ತೇವೆ. ಇಲ್ಲ. ನಾವು ಭಗವಂತನ ಬಗ್ಗೆ ಕೇಳಲೇಬೇಕು. ನಾವು ಭಗವಂತನ ಬಗ್ಗೆ ಕೇಳಲು ಇಂತಹ ಎಂಬತ್ತು ಪುಸ್ತಕಗಳನ್ನು ಪ್ರಕಟಿಸುತ್ತಿದ್ದೇವೆ. ನೀವು ಪರಿಪೂರ್ಣವಾಗಿ ಕೇಳಿದ ನಂತರ ಇತರರಿಗೆ ವಿವರಿಸಬಹುದು. ಅದನ್ನು ‘ಕೀರ್ತನಂ’ ಎನ್ನುತ್ತಾರೆ. ಶ್ರವಣಂ, ಕೀರ್ತನಂ. ಹೀಗೆ, ಕೇಳುವ ಮತ್ತು ಜಪಿಸುವ, ಅಥವಾ ವಿವರಿಸುವ, ಪ್ರಕ್ರಿಯೆಯು ಮುಂದುವರಿಯುತ್ತಿದೆ. ಕೀರ್ತನಂ ಎಂದರೆ ವಿವರಿಸುವುದು ಎಂದರ್ಥ. ನಮ್ಮ ಈ ಇಡೀ ಸಮಾಜವು ಈ ಪುಸ್ತಕಗಳಿಂದ ಕೇಳುತ್ತಿದೆ ಮತ್ತು ಇತರರಿಗೆ ವಿವರಿಸಲು ಹೊರಟಿದೆ. ಇದನ್ನು ಕೀರ್ತನ ಎನ್ನುತ್ತಾರೆ. ಶ್ರವಣ ಮತ್ತು ಜಪ, ಈ ಎರಡು ಪ್ರಕ್ರಿಯೆಗಳ ಮೂಲಕ ನೀವು ಭಗವಂತನನ್ನು ಸ್ಮರಿಸಿಕೊಳ್ಳುತ್ತೀರಿ, ಅದುವೇ ‘ಸ್ಮರಣಂ.’ ಅಂದರೆ ನೆನಪಿಸಿಕೊಳ್ಳುವುದು. ಸದಾ ಭಗವಂತನೊಂದಿಗೆ ನೀವು ಒಡನಾಡುತ್ತೀರಿ.

ಡಾ. ಪಿ.ಜೆ. ಸಾಹೇರ್: ಅಂದರೆ ಎಲ್ಲಾ ಸಮಯದಲ್ಲೂ, “ನನ್ನನ್ನು ಸ್ಮರಿಸಿ.”

ಪ್ರಭುಪಾದ: ಹೌದು. ಹೌದು. ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದ-ಸೇವನಂ (ಶ್ರೀ.ಭಾ 7.5.23). ನಂತರ ದೇವರನ್ನು ಪೂಜಿಸುವುದು, ಭಗವಂತನ ಪಾದಕಮಲಗಳಿಗೆ ಹೂವುಗಳನ್ನು ಅರ್ಪಿಸುವುದು, ಮಾಲೆ, ಉಡುಗೆ ತೊಡಿಸುವುದು, ‘ಪಾದ-ಸೇವನಂ’, ‘ಅರ್ಚನಂ ವಂದನಂ’, ಪ್ರಾರ್ಥನೆ, ‘ದಾಸ್ಯಂ’, ಸೇವೆ. ಈ ರೀತಿಯಾಗಿ, ಒಂಬತ್ತು ವಿಭಿನ್ನ ಪ್ರಕ್ರಿಯೆಗಳಿವೆ.

ಡಾ. ಪಿ.ಜೆ. ಸಾಹೇರ್ (ಜರ್ಮನ್ನಲ್ಲಿ): ನಮ್ಮ ಕ್ರಿಶ್ಚಿಯನ್ ಸುಮದಾದಲ್ಲಿ ಇದೇ ರೀತಿಯ ವಿಷಯವವಿದೆ.

ಪ್ರಭುಪಾದ: ಹೌದು. ಕ್ರಿಶ್ಚಿಯನ್ಸ್ ಪ್ರಾರ್ಥಿಸುವ ವಿಧಾನ. ಅದು ಭಕ್ತಿ, ಅದು ಭಕ್ತಿ. (ಜರ್ಮನ್ನಲ್ಲಿ) (ವಿರಾಮ) ಕಲಿಯುಗ ಎಂದರೆ ಹೋರಾಟ. ಸತ್ಯವನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಆಸಕ್ತಿಯಿಲ್ಲ ಆದರೆ ಅವರು ಸುಮ್ಮನೆ ಜಗಳವಾಡುತ್ತಾರೆ. ನಾನು ಹೇಳುತ್ತೇನೆ, "ನನ್ನ ಅಭಿಪ್ರಾಯ ಇದು." ನೀವು, "ಅದು ಅವನ ಅಭಿಪ್ರಾಯ", ಎಂದು ಹೇಳುತ್ತೀರಿ. ಅನೇಕ ಮೂರ್ಖ ಅಭಿಪ್ರಾಯಗಳು; ತಮ್ಮೊಳಗೆ ಜಗಳ. ಹೀಗಿದೆ ಈ ಕಾಲ. ಪ್ರಮಾಣಿತ ಅಭಿಪ್ರಾಯವಿಲ್ಲ. ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿದ್ದಾರೆ. ಆದ್ದರಿಂದ, ಜಗಳವಾಗುವುದು ಸಹಜ. ಪ್ರತಿಯೊಬ್ಬರೂ, “ನಾನು ಹೀಗೆ ಯೋಚಿಸುತ್ತೇನೆ”, ಎಂದು ಹೇಳುತ್ತಾರೆ. ಆದರೆ, ಹಾಗೆ ಯೋಚಿಸಲು ನಿನ್ನ ಯೋಗ್ಯತೆ ಏನು? ಇದೇ ಕಲಿಯುಗ ಎಂದರೆ. ನಿಮಗೆ ಪ್ರಮಾಣಿತ ಜ್ಞಾನವಿಲ್ಲ. ಒಬ್ಬ ಮಗು ತನ್ನ ತಂದೆಗೆ, "ನನ್ನ ಅಭಿಪ್ರಾಯದಲ್ಲಿ ನೀವು ಹೀಗೆ ಮಾಡಬೇಕು”, ಎನ್ನುತ್ತಾನೆ. ಈಗ ಆ ಅಭಿಪ್ರಾಯವನ್ನು ಸ್ವೀಕರಿಸಬೇಕೇ? ಅವನಿಗೆ ವಿಷಯದ ಅರಿವಿಲ್ಲದಿದ್ದರೆ, ಅವನು ಹೇಗೆ ತನ್ನ ಅಭಿಪ್ರಾಯವನ್ನು ನೀಡುತ್ತಾನೆ? ಆದರೆ ಇಲ್ಲಿ, ಈ ಯುಗದಲ್ಲಿ, ಪ್ರತಿಯೊಬ್ಬರೂ ತಮ್ಮದೇ ಆದ ಅಭಿಪ್ರಾಯದೊಂದಿಗೆ ಸಿದ್ಧರಾಗಿದ್ದಾರೆ. ಆದ್ದರಿಂದ, ಎಲ್ಲೆಡೆ ಹೋರಾಟ, ಜಗಳ. ಉದಾಹರಣೆಗೆ, ಎಲ್ಲಾ ದೊಡ್ಡ ವ್ಯಕ್ತಿಗಳು ಒಂದಾಗಲು ವಿಶ್ವಸಂಸ್ಥೆಗೆ ಹೋಗುತ್ತಾರೆ, ಆದರೆ ಅವರ ಧ್ವಜಗಳು ಹೆಚ್ಚಾಗುತ್ತಿವೆ. ಅಷ್ಟೇ. ಹೋರಾಟ, ಅದೊಂದು ಹೋರಾಟದ ಸಂಸ್ಥೆಯಾಗಿದೆ. ಪಾಕಿಸ್ತಾನ, ಹಿಂದೂಸ್ತಾನ, ಅಮೇರಿಕ, ವಿಯೆಟ್ನಾಂ. ಇದು ಏಕತೆಗಾಗಿ ಉದ್ದೇಶಿಸಲಾಗಿತ್ತು ಆದರೆ ಅದು ಈಗ ಹೋರಾಟದ ಸಂಘವಾಗಿ ಮಾರ್ಪಾಡಾಗಿದೆ. ಅಷ್ಟೇ. ಪ್ರತಿಯೊಬ್ಬರೂ ಅಪರಿಪೂರ್ಣರಾಗಿರುವುದರಿಂದ, ಯಾರೋ ಒಬ್ಬರು ತಮ್ಮ ಪರಿಪೂರ್ಣ ಜ್ಞಾನವನ್ನು ನೀಡಬೇಕು.

ಜರ್ಮನ್ ಮಹಿಳೆ: ಕಲಿಯುಗವು ಸಾರ್ವಕಾಲಿಕವಾಗಿ ಅಸ್ತಿತ್ವದಲ್ಲಿದೆ ಎಂದರ್ಥವೇ?

ಪ್ರಭುಪಾದ: ಇಲ್ಲ. ಈ ಕಾಲದಲ್ಲಿ ಮೂರ್ಖ ಮನುಷ್ಯರು (ಬ್ರೇಕ್)... ಪರಿಹರಿಸುವ ಬದಲು ಹೋರಾಟವನ್ನು ಹೆಚ್ಚಿಸುತ್ತಿದ್ದಾರೆ. ಏಕೆಂದರೆ ಅವರಿಗೆ ಯಾವುದೇ ಪ್ರಮಾಣಿತ ಜ್ಞಾನವಿಲ್ಲ. ಆದ್ದರಿಂದ, ಈ ಬ್ರಹ್ಮಸೂತ್ರವು ನೀವು ಪರಿಪೂರ್ಣ ಸತ್ಯವನ್ನು ವಿಚಾರಿಸಲು ಉತ್ಸುಕನಾಗಿರಬೇಕು ಎಂದು ಹೇಳುತ್ತದೆ. ಅಥಾತೋ ಬ್ರಹ್ಮ ಜಿಜ್ಞಾಸಾ. ಯಾವುದರಿಂದ, ಅಥವಾ ಯಾರಿಂದ, ಎಲ್ಲವೂ ಬಂದಿದೆಯೋ ಅದುವೇ ಬ್ರಹ್ಮನ್, ಅಥವಾ ಪರಿಪೂರ್ಣ ಸತ್ಯವು, ಎಂದು ಮುಂದಿನ ಉಲ್ಲೇಖದ ಮುಖಾಂತರ ಉತ್ತರ ನೀಡಲಾಗಿದೆ. ಅಥಾತೋ ಬ್ರಹ್ಮ ಜಿಜ್ಞಾಸಾ, ಜನ್ಮಾದಿ ಅಸ್ಯ ಯತಃ (ಶ್ರೀ.ಭಾ 1.1.1). ಅದು ಎಲ್ಲಿದೆ ಎಂದು ಈಗ ನೀವು ಕಂಡುಕೊಳ್ಳಿರಿ... ಪ್ರತಿಯೊಬ್ಬರೂ ಮೂಲ ಕಾರಣವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಅದುವೇ ನಮ್ಮ ಗುರಿಯಾಗಿರಬೇಕು. ನೀವು ಈ ತಾತ್ವಿಕ ಉಲ್ಲೇಖಗಳನ್ನು ಅನುಸರಿಸಿದರೆ ನಿಮ್ಮ ಹೋರಾಟವು ನಿಲ್ಲುತ್ತದೆ. ನೀವು ಸಮಚಿತ್ತದಿಂದಿರುವಿರಿ. ಈ ಪದ್ಯವೂ ಕೂಡ - ‘ತತ್ವ ಜಿಜ್ಞಾಸಾ.’ ತತ್ವ ಜಿಜ್ಞಾಸ ಎಂದರೆ ಪರಿಪೂರ್ಣ ಸತ್ಯದ ಬಗ್ಗೆ ವಿಚಾರಿಸುವುದು. ಒಟ್ಟಿಗೆ ಕುಳಿತ್ತುಕೊಳ್ಳಿ, ಏಕೆಂದರೆ ಸಮಾಜದಲ್ಲಿ ಪರಿಪೂರ್ಣ ಸತ್ಯದ ಬಗ್ಗೆ ಚರ್ಚಿಸುವ ಒಂದು ವರ್ಗದ ಪುರುಷರು, ಬಹಳ ಬುದ್ಧಿವಂತ ವರ್ಗದ ಪುರುಷರು ಇರಬೇಕು, ಮತ್ತು ಅವರು ಇತರರಿಗೆ ತಿಳಿಸುತ್ತಾರೆ, "ಇದು ಪರಿಪೂರ್ಣ ಸತ್ಯ, ನನ್ನ ಪ್ರಿಯ ಸ್ನೇಹಿತರೇ, ನನ್ನ ಪ್ರಿಯರೇ..." ನೀವು ಈ ರೀತಿ ಮಾಡಿ. ಅದರ ಅಗತ್ಯವಿದೆ. ಆದರೆ ಇಲ್ಲಿ ಎಲ್ಲರೂ ಪರಿಪೂರ್ಣ ಸತ್ಯರೇ. ಆದ್ದರಿಂದಲೆ ಹೋರಾಟ.