KN/Prabhupada 0850 - ನೀನು ಸ್ವಲ್ಪ ಹಣ ಪಡೆದರೆ, ಪುಸ್ತಕಗಳನ್ನು ಮುದ್ರಿಸು

Revision as of 06:39, 26 September 2016 by Modestas (talk | contribs) (Created page with "<!-- BEGIN CATEGORY LIST --> Category:1080 Kannada Pages with Videos Category:Kannada Pages - 207 Live Videos Category:Prabhupada 0850 - in all Languages Categor...")
(diff) ← Older revision | Latest revision (diff) | Newer revision → (diff)


Invalid source, must be from amazon or causelessmery.com

750620d - Lecture Arrival - Los Angeles

ನಮಗೆ ಯಾವ ಹೊಸ ಆವಿಷ್ಕಾರವಿಲ್ಲ. (ನಗು) ನಾವು ತಯಾರಿಸುವುದಿಲ್ಲ. ಇದು ನಮ್ಮ ವಿಧಾನ. ನಾವು ಸುಮ್ಮನೆ ಪೂರ್ವಜರ ಬೋಧನೆ ಪಾಲಿಸುತ್ತೇವೆ, ಅಷ್ಟೆ. ನಮ್ಮ ಆಂದೋಲನ ಬಹಳ ಸುಲಭ ಏಕೆಂದೆರೆ ನಾವೇನು ತಯಾರಿಸುವಂತಿಲ್ಲ ನಮ್ಮ ಪೂರ್ವಜರು ಕೊಟ್ಟಿರುವ ಪದಗಳನ್ನು ಮತ್ತು ಉಪದೇಶವನ್ನು ನಾವು ಸುಮ್ಮನೆ ಪುನರುಚ್ಚರಿಸುತ್ತೇವೆ ಕೃಷ್ಣ ಬ್ರಹ್ಮನಿಗೆ ಉಪದೇಶಿಸಿದನು, ಬ್ರಹ್ಮನಾರದನಿಗೆ ಉಪದೇಶಿಸಿದನು, ನಾರದ ವ್ಯಾಸದೇವರಿಗೆ ಉಪದೇಶಿಸಿದನು ವ್ಯಾಸದೇವ ಮಧ್ವಾಚಾರ್ಯರಿಗೆ ಉಪದೇಶಿಸಿದರು, ಮತ್ತು ಇದೇ ರೀತಿ, ನಂತರ ಮಾಧವೇಂದ್ರ ಪುರೀ, ಈಷ್ವರ ಪುರೀ, ಶ್ರೀ ಚೈತನ್ಯ ಮಹಾಪ್ರಭು, ನಂತರ ಆರು ಗೋಸ್ವಾಮಿಯರು, ನಂತರ ಶ್ರೀನಿವಾಸ ಆಚಾರ್ಯ, ಕವಿರಾಜ ಗೋಸ್ವಾಮಿ, ನರೋತ್ತಮ ದಾಸ ಠಾಕುರ, ವಿಷ್ವನಾಥ ಚಕ್ರವರ್ತೀ, ಜಗನ್ನಾಥ ದಾಸ ಭಾಭಾಜಿ, ಭಕ್ತಿವಿನೋದ ಠಾಕುರ, ಗೌರಕಿಶೋರ ದಾಸ ಭಾಭಾಜಿ, ಭಕ್ತಿಸಿದ್ದಾಂತ ಸರಸ್ವತೀ, ಮತ್ತು ನಂತರ ನಾವು ಅದನ್ನೇ ಮಾಡುತ್ತಿದ್ದೇವೆ. ಏನು ವ್ಯತ್ಯಾಸವಿಲ್ಲ. ಅದೇ ಕೃಷ್ಣ ಪ್ರಜ್ನೆಯ ಆಂದೋಲನದ ನಿಗದಿತ ಕ್ರಮ ನೀವು ನಿತ್ಯ ಹಾಡುತ್ತೀದ್ದೀರಿ, ಗುರು-ಮುಖ-ಪದ್ಮ-ವಾಖ್ಯ, ಚಿತ್ತೇತೆ ಕೊರಿಯಾ ಐಕ್ಯ, ಆರ ನಾ ಕೋರಿಹೊ ಮನೆ ಆಶಾ. ಬಹಳ ಸರಳವಾದದ್ದು. ನಾವು ದಿವ್ಯ ಜ್ನಾನವನ್ನು ಗುರು-ಪರಂಪರೆಯ ಮೂಲಕ ಸ್ವೀಕರಿಸುತ್ತಿದ್ದೇವೆ. ಆದ್ದರಿಂದ ನಾವು ಸರಳವಾಗಿ ಗುರುಗಳ ಉಪದೇಶವನ್ನುಪಡಯಬೇಕು ಮತ್ತು ನಮ್ಮ ಹೃದಯ ಮತ್ತು ಆತ್ಮಕ್ಕೆ ಒಪ್ಪುವ ರೀತಿಯಲ್ಲಿ ನಾವು ಪರಿಪಾಲಿಸಿದರೆ, ಅದು ನಮ್ಮ ಯಶಸ್ಸು. ಅದು ಕಾರ್ಯರೂಪ.

ನನಗೆ ಯಾವ ವಯಕ್ತಿಕ ಯೋಗ್ಯತೆ ಇಲ್ಲ, ಆದರೆ ನಾನು ಸರಳವಾಗಿ ನನ್ನ ಗುರುಗಳನ್ನು ತ್ರುಪ್ತಿಪದಿಸಲು ಪ್ರಯತ್ನಿಸಿದೆ, ಅಷ್ಟೇ. ನನ್ನ ಗುರು ಮಹಾರಾಜ ನನ್ನನ್ನು ಕೇಳಿದರು, "ನಿನಗೆ ಸ್ವಲ್ಪ ಹಣ ದೊರತರೆ, ನೀನು ಪುಸ್ತಕಗಳನ್ನು ಮುದ್ರಿಸು." ಅದೊಂದು ಏಕಾಂತ ಸಭೆ, ಮಾತುಕತೆ ಆಗಿತ್ತು ನನ್ನ ಕೆಲವು ಪ್ರಮುಖ ಭಗವತ್ ಸೋದರರು ಇದ್ದರು. ರಾಧಾ-ಕುಂಡ ದಲ್ಲಿ. ಹಾಗೆ ಗುರು ಮಹಾರಾಜ ನನಗೆ ಹೇಳುತ್ತಿದ್ದರು ಅದು"ನಮಗೆ ಈ ಭಾಗ್ಭಝಾರ್ ಅಮೃತ ಶಿಲೆಯ ದೇವಾಲಯ ದೊರತಾಗಿನಿಂದಲು, ಬಹಳ ಮನಸ್ತಾಪಗಳಾಗಿವೆ, ಮತ್ತು ಎಲ್ಲರು ಈ ಕೊಠಡಿ ಯಾರಿಗೆ, ಆ ಕೊಠಡಿ ಯಾರಿಗೆ ಎಂದು ಯೋಚಿಸುತ್ತಿದ್ದಾರೆ ಆದ್ದರಿಂದ, ನಾನು, ಈ ದೇವಾಲಯವನ್ನು ಮತ್ತು ಅಮೃತ ಶಿಲೆಯನ್ನು ಮಾರಟಮಾಡಿ ಯಾವುದಾದರು ಪುಸ್ತಕವನ್ನು ಮುದ್ರಿಸಲು ಬಯಸುವುವೆನು." ಹೌದು. ಆದ್ದರಿಂದ ನಾನು ಅವರ ಬಾಯಿಂದ ಸ್ವೀಕರಿಸಿದೆ, ಅವರು ಪುಸ್ತಕಗಳನ್ನು ಬಹಳವಾಗಿ ಬಯಸುತ್ತಾರೆ. ಮತ್ತು ಅವರು ನನಗೆ ವೈಯಕ್ತಿಕವಾಗಿ ಅದನ್ನು ಹೇಳಿದರು "ನೀನು ಸ್ವಲ್ಪ ಹಣ ಪಡೆದರೆ ಪಡೆದರೆ, ಪುಸ್ತಕಗಳನ್ನು ಮುದ್ರಿಸು." ಆದ್ದರಿಂದ ನಾನು ಈ ವಿಷಯವನ್ನು ಒತ್ತಿಹೇಳುತ್ತಿದ್ದೇನೆ:"ಪುಸ್ತಕ ಎಲ್ಲಿ? ಪುಸ್ತಕ ಎಲ್ಲಿ? ಪುಸ್ತಕ ಎಲ್ಲಿ?" ಆದ್ದರಿಂದ ದಯವಿಟ್ಟು ನನಗೆ ಸಹಾಯ ಮಾಡಿ. ಇದು ನನ್ನ ಕೋರಿಕೆ ಏಷ್ಟು ಭಾಷೆಗಳಲ್ಲಿ ಏಷ್ಟು ಪುಸ್ತಕಗಳು ಸಾಧ್ಯವೊ ಮುದ್ರಿಸಿ, ಮತ್ತು ಪ್ರಪಂಚದಾದ್ಯಂತ ವಿತರಿಸಿ. ನಂತರ ಕೃಷ್ಣ ಪ್ರಜ್ನೆಯ ಆಂದೋಲನ ತಾನಾಗಿಯೆ ಬೆಳೆಯುವುದು. ಈಗ ವಿಧ್ಯಾವಂತ, ಪಾಂಡಿತ್ಯಪೂರ್ಣ ಪಂಡಿತರು, ಅವರು ನಮ್ಮ ಆಂದೋಲನವನ್ನು ಶ್ಲಾಘಿಸುತ್ತಿದ್ದಾರೆ, ಪುಸ್ತಕಗಳನ್ನು ಓದುವ ಮೂಲಕ, ಕಾರ್ಯರೂಪ ಫಲಿತಾಂಶ ಪಡೆಯುವ ಮೂಲಕ. ಡಾ|| ಸ್ಟಿಲ್ಸನ್ ಜುಡಾಹ್, ಅವರು ಒಂದು ಪುಸ್ತಕವನ್ನು ಬರೆದಿದ್ದಾರೆ, ಬಹುಶಃ ನಿಮಗೆ ಗೊತ್ತು, ಕೃಷ್ಣ ಪ್ರಜ್ನೆ... ಹರೇ ಕೃಷ್ಣ ಮತ್ತು ವಿರೋಧಸಂಸ್ಕೃತಿ, ನಮ್ಮ ಆಂದೋಲನದ ಬಗ್ಗೆ ಒಂದು ಒಳ್ಳೆಯ ಪುಸ್ತಕ, ಮತ್ತು ಅವರು ಪ್ರಾಮುಖ್ಯತೆಯನ್ನು ಕೊಡುತ್ತಿದ್ದಾರೆ. ಅವರು ಅದನ್ನು ಅಂಗೀಕರಿಸಿದ್ದಾರೆ "ಸ್ವಾಮಿಜಿ, ನೀವು ಅದ್ಭುತವನ್ನು ಮಾಡಿದ್ದೀರಿ ಏಕೆಂದೆರೆ ನೀವು ಮಾದಕ ವಸ್ತು ವ್ಯಸನಿಯಾಗಿದ್ದ ಹಿಪ್ಪೀಸ್ ರನ್ನು ಕೃಷ್ಣನ ಭಕ್ತರನ್ನಾಗಿ ಮಾರ್ಪಡಿಸಿದ್ದೀರಿ. ಮತ್ತು ಅವರು ಮಾನವೀಯ ಸೇವೆಗೆ ತಯಾರಾರಿದ್ದಾರೆ."