KN/Prabhupada 0196 - ಕೇವಲ ಆಧ್ಯಾತ್ಮಿಕ ವಿಷಯಗಳಿಗಾಗಿ ಹಂಬಲಿಸು



Lecture on BG 2.58-59 -- New York, April 27, 1966

ಆದ್ದರಿಂದ, ಆಧ್ಯಾತ್ಮಿಕ ಜೀವನದ ಸೌಂದರ್ಯವನ್ನು ಹೇಗೆ ಕಾಣಬೇಕು ಎಂಬ ವಿಷಯವನ್ನು ನಾವು ಕಲಿಯಬೇಕು. ಆಗ, ಸ್ವಾಭಾವಿಕವಾಗಿ, ನಾವು ಭೌತಿಕ ಚಟುವಟಿಕೆಗಳಿಂದ ದೂರವಿರುತ್ತೇವೆ. ಒಂದು ಮಗುವಿನಂತೆ, ಒಬ್ಬ ಹುಡುಗ. ದಿನಪೂರ್ತಿ ಕಿಡಿಗೇಡಿತನ ಮಾಡುತ್ತಾ ಆಟವಾಡುತ್ತಾ ಇರುತ್ತಾನೆ, ಆದರೆ ಒಂದಿಷ್ಟು ಗಮನಸೆಳೆವ ಕೆಲಸ ಕೊಟ್ಟರೆ... ಶಿಕ್ಷಣ ಇಲಾಖೆಯ ಶಿಶುವಿಹಾರ ವ್ಯವಸ್ಥೆ ಅಥವಾ ಇತರ ಹಲವಾರು ಸಾಧನಗಳಿವೆ. ಆ ಮಗುವನ್ನು, "'ಎ' ಅನ್ನು ಬರಿ, 'ಬಿ' ಅನ್ನು ಬರಿ ಎಂದು ತೊಡಗಿಸಬೇಕು. ಆಗ ಅವನು ಎ.ಬಿ.ಸಿ ಕಲಿಯುತ್ತಾನೆ ಮತ್ತು ಅದೇ ಸಮಯದಲ್ಲಿ ತನ್ನ ಚೇಷ್ಟೆಗಳಿಂದ ದೂರವಿರುತ್ತಾನೆ. ಅಂತೆಯೇ, ಆಧ್ಯಾತ್ಮಿಕ ಜೀವನದ ಶಿಶುವಿಹಾರ ವ್ಯವಸ್ಥೆ ವಿಷಯಗಳಿವೆ. ಆ ಆಧ್ಯಾತ್ಮಿಕ ಕಾರ್ಯಗಳಲ್ಲಿ ನಾವು ನಮ್ಮ ಚಟುವಟಿಕೆಯನ್ನು ತೊಡಗಿಸಿಕೊಂಡರೆ ಮಾತ್ರ ಈ ಭೌತಿಕ ಚಟುವಟಿಕೆಗಳಿಂದ ದೂರವಿರಲು ಸಾಧ್ಯ. ಚಟುವಟಿಕೆಗಳನ್ನು ನಿಲ್ಲಿಸಲಾಗುವುದಿಲ್ಲ. ಚಟುವಟಿಕೆಗಳನ್ನು ನಿಲ್ಲಿಸಲಾಗುವುದಿಲ್ಲ. ಉದಾಹರಣೆಗೆ, ಅರ್ಜುನ... ಭಗವದ್ಗೀತೆಯನ್ನು ಕೇಳುವ ಮೊದಲು ಯುದ್ಧಮಾಡಲು ನಿರುತ್ಸಾಹಿ ಆದನು. ಆದರೆ ಭಗವದ್ಗೀತೆಯನ್ನು ಕೇಳಿದ ನಂತರ ಅವನು ಹೆಚ್ಚು ಉತ್ಸಾಹಿ ಆದನು, ಅತೀಂದ್ರಿಯವಾಗಿ ಕ್ರಿಯಾಶೀಲನಾದನು. ಆದ್ದರಿಂದ, ಆಧ್ಯಾತ್ಮಿಕ ಜೀವನ, ಅಥವಾ ಅತೀಂದ್ರಿಯ ಜೀವನವೆಂದರೆ ನಾವು ಚಟುವಟಿಕೆಯಿಂದ ಮುಕ್ತರಾಗಿದ್ದೇವೆ ಎಂದು ಅರ್ಥವಲ್ಲ. ಕೇವಲ ಕೃತಕವಾಗಿ, ನಾವು ಕುಳಿತುಕೊಂಡರೆ, "ಓಹ್, ಇನ್ನು ಮುಂದೆ ನಾನು ಯಾವುದೇ ಭೌತಿಕ ಕಾರ್ಯವನ್ನು ಮಾಡುವುದಿಲ್ಲ. ನಾನು ಕೇವಲ ಧ್ಯಾನ ಮಾಡುತ್ತೇನೆ." ಓಹ್, ನೀವು ಏನು ಧ್ಯಾನ ಮಾಡುವಿರಿ? ವಿಶ್ವಾಮಿತ್ರ ಮುನಿಯು ತನ್ನ ಧ್ಯಾನವನ್ನು ಮುಂದುವರಿಸಲು ಸಾಧ್ಯವಾಗದಂತೆಯೇ ನಿಮ್ಮ ಧ್ಯಾನವು ಸಹ ಒಂದು ಕ್ಷಣದಲ್ಲಿ ಭಂಗವಾಗುತ್ತದೆ. ನಾವು ಯಾವಾಗಲೂ, ಶೇಕಡಾ ನೂರಕ್ಕೆ ನೂರು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿರಬೇಕು. ಅದು ನಮ್ಮ ಜೀವನದ ಕಾರ್ಯಕ್ರಮವಾಗಬೇಕು. ಬದಲಾಗಿ, ಆಧ್ಯಾತ್ಮಿಕ ಜೀವನದಲ್ಲಿ ನೀವು ಅದರಿಂದ ಹೊರಬರಲು ಸಮಯವೇ ಸಿಗುವುದಿಲ್ಲ. ನಿಮಗೆ ತುಂಬಾ ಕೆಲಸಗಳಿವೆ. ರಸ-ವರ್ಜಮ್. ಆದರೆ ನೀವು ಅದರಲ್ಲಿ ಸ್ವಲ್ಪ ಅತೀಂದ್ರಿಯ ಆನಂದವನ್ನು ಕಂಡುಕೊಂಡರೆ ಮಾತ್ರ ಆ ಕಾರ್ಯವನ್ನು ಮಾಡಲು ಸಾಧ್ಯ.

ಆದ್ದರಿಂದ, ಅದನ್ನು ಮಾಡಲು ಸಾಧ್ಯ. ಅದನ್ನು ಮಾಡಲಾಗುವುದು. ಆದೌ ಶ್ರದ್ಧಾ ತತಃ ಸಾಧು-ಸಂಘಃ (ಚೈ.ಚ ಮಧ್ಯ 23.14-15). ಮೊದಲನೆಯದಾಗಿ ಆಧ್ಯಾತ್ಮಿಕ ಜೀವನವು ಪ್ರಾರಂಭವಾಗುವುದು ಶ್ರದ್ಧಯಿಂದ, ಸ್ವಲ್ಪ ನಂಬಿಕೆ. ಉದಾಹರಣೆಗೆ, ನೀವು ನನ್ನ ಮಾತು ಕೇಳಲು ಇಲ್ಲಿಗೆ ಬರುತ್ತಿರುವಂತೆ. ನಿಮಗೆ ಸ್ವಲ್ಪ ನಂಬಿಕೆ ಇದೆ. ಇದು ಆರಂಭ. ನಂಬಿಕೆಯಿಲ್ಲದೆ ನೀವು ಇಲ್ಲಿ ನಿಮ್ಮ ಸಮಯವನ್ನು ಕಳೆಯಲು ಸಾಧ್ಯವಿಲ್ಲ ಏಕೆಂದರೆ ಇಲ್ಲಿ ಯಾವುದೇ ಸಿನಿಮಾ ಪ್ರದರ್ಶನವಿಲ್ಲ, ಯಾವುದೇ ರಾಜಕೀಯ ಮಾತುಕತೆಗಳಿಲ್ಲ, ಯಾವುದೂ ಇಲ್ಲ… ಕೆಲವರಿಗೆ ಇದು ತುಂಬಾ ಶುಷ್ಕ ವಿಷಯವಾಗಿದೆ. ತುಂಬಾ ಒಣ ವಿಷಯ. (ನಗು) ಆದರೂ ನೀವು ಬರುತ್ತೀರಿ. ಏಕೆ? ನೀಮಲ್ಲಿ ಸ್ವಲ್ಪ ನಂಬಿಕೆಯಿರುವುದರಿಂದ, "ಓಹ್, ಇಲ್ಲಿದೆ ಭಗವದ್ಗೀತೆ. ನಾವು ಅದನ್ನು ಕೇಳೋಣ." ಆದ್ದರಿಂದ, ನಂಬಿಕೆಯೇ ಆರಂಭ. ನಂಬಿಕೆಯಿಲ್ಲದವರು ಆಧ್ಯಾತ್ಮಿಕ ಜೀವನವನ್ನು ನಡೆಸಲು ಸಾಧ್ಯವಿಲ್ಲ. ನಂಬಿಕೆಯೇ ಆರಂಭ. ಆದೌ ಶ್ರದ್ಧಾ. ಶ್ರದ್ಧಾ. ಮತ್ತು ಈ ನಂಬಿಕೆ, ನಿಷ್ಠೆ, ಅದನ್ನು ಎಷ್ಟು ತೀವ್ರಗೊಳಿಸುತ್ತೀರೋ, ನೀವು ನಿಮ್ಮ ಪ್ರಗತಿಯನ್ನು ಸಾಧಿಸುತ್ತೀರಿ. ಹಾಗಾಗಿ ಈ ನಂಬಿಕೆಯನ್ನು ಇನ್ನಷ್ಟು ಬಲಗೊಳಿಸಬೇಕು. ನಂಬಿಕೆಯೇ ಆರಂಭ. ಮತ್ತು ಈಗ, ನೀವು ನಿಮ್ಮ ನಂಬಿಕೆಯನ್ನು ತೀವ್ರಗೊಳಿಸಿದಂತೆ, ನೀವು ಆಧ್ಯಾತ್ಮಿಕ ಮಾರ್ಗದಲ್ಲಿ ಮುಂದುವರೆಯುತ್ತೀರಿ. ಆದೌ ಶ್ರದ್ಧಾ ತತಃ ಸಾಧು-ಸಂಗಃ (ಚೈ.ಚ ಮಧ್ಯ 23.14-15). ನೀಮಲ್ಲಿ ಸ್ವಲ್ಪ ನಂಬಿಕೆಯಿದ್ದರೆ ನಿಮಗೆ ಒಬ್ಬ ಸಾಧು, ಸಾಧು ಅಥವಾ ಸಂತ, ಒಬ್ಬ ಋಷಿ, ನಿಮಗೆ ಆಧ್ಯಾತ್ಮಿಕ ಜ್ಞಾನವನ್ನು ನೀಡಬಲ್ಲವನ್ನು ಸಿಗುತ್ತಾನೆ. ಅದನ್ನು ಸಾಧು-ಸಂಗ (ಚೈ.ಚ ಮಧ್ಯ 22.83) ಎನ್ನಲಾಗುತ್ತದೆ. ಅದೌ ಶ್ರದ್ಧಾ. ಮೂಲ ತತ್ವವೆಂದರೆ ಶ್ರದ್ಧಾ, ಮತ್ತು ಮುಂದಿನ ಹಂತವೆಂದರೆ ಸಾಧು-ಸಂಗ, ಆತ್ಮಸಾಕ್ಷಾತ್ಕಾರಗೊಂಡ ವ್ಯಕ್ತಿಗಳ ಸಹವಾಸ. ಅವರನ್ನು ಸಾಧು ಎಂದು ಕರೆಯಲಾಗುತ್ತದೆ... ಆದೌ ಶ್ರದ್ಧಾ ತತಃ ಸಾಧು-ಸಂಗೋ 'ಥಾ ಭಜನ-ಕ್ರಿಯಾ. ಮತ್ತು ನಿಜವಾದ ಆತ್ಮಸಾಕ್ಷಾತ್ಕಾರಗೊಂಡ ವ್ಯಕ್ತಿಗಳ ಸಹವಾಸವಿದ್ದರೆ, ಅವರು ನಿಮಗೆ ಆಧ್ಯಾತ್ಮಿಕ ಚಟುವಟಿಕೆಗಳ ಕೆಲವು ಪ್ರಕ್ರಿಯೆಯನ್ನು ನೀಡುತ್ತಾರೆ. ಅದನ್ನೇ ಭಜನ-ಕ್ರಿಯಾ ಎನ್ನುತ್ತಾರೆ. ಅದೌ ಶ್ರದ್ಧಾ ತತಃ ಸಾಧು-ಸಂಘಃ ಅಥ ಭಜನ-ಕ್ರಿಯಾ ತತಃ ಅನರ್ಥ-ನಿವೃತ್ತಿಃ ಸ್ಯಾತ್. ಮತ್ತು ನೀವು ಹೆಚ್ಚು ಹೆಚ್ಚು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿರುವಂತೆ, ಪ್ರಮಾಣಾನುಗುಣವಾಗಿ, ನಿಮ್ಮ ಭೌತಿಕ ಚಟುವಟಿಕೆಗಳು ಮತ್ತು ಭೌತಿಕ ಚಟುವಟಿಕೆಗಳ ಮೇಲಿನ ಒಲವು ಕಡಿಮೆಯಾಗುತ್ತದೆ. ಪ್ರತಿರೋಧ. ನೀವು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ತೊಡಗಿದಾಗ, ನಿಮ್ಮ ಭೌತಿಕ ಚಟುವಟಿಕೆಗಳು ಕಡಿಮೆಯಾಗುತ್ತವೆ. ಆದರೆ ಅದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಭೌತಿಕ ಚಟುವಟಿಕೆಗಳು ಮತ್ತು ಆಧ್ಯಾತ್ಮಿಕ ಚಟುವಟಿಕೆಗಳು, ವ್ಯತ್ಯಾಸವೆಂದರೆ... ನೀವು ಒಬ್ಬ ವೈದ್ಯನೆಂದು ಭಾವಿಸೋಣ. “ನಾನು ಆಧ್ಯಾತ್ಮಿಕವಾಗಿ ತೊಡಗಿದರೆ, ನಾನು ನನ್ನ ವೃತ್ತಿಯನ್ನು ತ್ಯಜಿಸಬೇಕು”, ಎಂದು ನೀವು ಯೋಚಿಸಬಾರದು. ಇಲ್ಲ ಇಲ್ಲ. ಅದಲ್ಲ. ನಿಮ್ಮ ವೃತ್ತಿಯನ್ನು ನೀವು ಆಧ್ಯಾತ್ಮಿಕಗೊಳಿಸಬೇಕು. ಅರ್ಜುನನಂತೆ. ಅವನು ಸೈನಿಕನಾಗಿದ್ದನು, ಆದರೆ ಅವನು ಆಧ್ಯಾತ್ಮಿಕವಾದಿಯಾದನು. ಅಂದರೆ ಅವನು ತನ್ನ ಸೈನಿಕ ಚಟುವಟಿಕೆಯನ್ನು ಆಧ್ಯಾತ್ಮಿಕಗೊಳಿಸಿದನು.

ಆದ್ದರಿಂದ, ಇವು ತಂತ್ರಗಳು. ಆದೌ ಶ್ರದ್ಧಾ ತತಃ ಸಾಧು-ಸಂಘಃ ಅಥ ಭಜನಾ-ಕ್ರಿಯಾ ತತಃ ಅನರ್ಥ-ನಿವೃತ್ತಿಃ ಸ್ಯಾತ್ (ಚೈ.ಚ ಮಧ್ಯ 23.14-15). ಅನರ್ಥ ಎಂದರೆ... ಅನರ್ಥ ಎಂದರೆ ಅದು ನನಗೆ ಸಂಕಟಗಳನ್ನು ಸೃಷ್ಟಿಸುತ್ತದೆ. ಭೌತಿಕ ಚಟುವಟಿಕೆಗಳು ನನ್ನ ದುಃಖವನ್ನು ಹೆಚ್ಚಿಸುತ್ತಲೇ ಇರುತ್ತವೆ. ಮತ್ತು ನೀವು ಆಧ್ಯಾತ್ಮಿಕ ಜೀವನವನ್ನು ಅಳವಡಿಸಿಕೊಂಡರೆ, ನಿಮ್ಮ ಭೌತಿಕ ದುಃಖಗಳು ಕ್ರಮೇಣ ಕಡಿಮೆಯಾಗುತ್ತವೆ ಮತ್ತು ಪ್ರಾಯೋಗಿಕವಾಗಿ ಅದು ಶೂನ್ಯವಾಗುತ್ತದೆ. ಮತ್ತು ನಾವು ನಿಜವಾಗಿಯೂ ಭೌತಿಕ ಸಂಬಂಧದಿಂದ ಮುಕ್ತರಾದಾಗ ನಿಮ್ಮ ನಿಜವಾದ ಆಧ್ಯಾತ್ಮಿಕ ಜೀವನವು ಪ್ರಾರಂಭವಾಗುತ್ತದೆ. ಅಥಾಶಕ್ತಿ. ನೀವು ಲಿಪ್ತನಾಗುವಿರಿ. ನೀವು ಇನ್ನು ಮುಂದೆ ತ್ಯಜಿಸಲು ಸಾಧ್ಯವಿಲ್ಲ. ನಿಮ್ಮ ಅನರ್ಥ-ನಿವೃತ್ತಿಯಾದಾಗ, ನಿಮ್ಮ ಭೌತಿಕ ಚಟುವಟಿಕೆಗಳು ಸಂಪೂರ್ಣವಾಗಿ ನಿಂತುಹೋದಾಗ, ನೀವು ತ್ಯಜಿಸಲು ಸಾಧ್ಯವಿಲ್ಲ. ಅಥಾಶಕ್ತಿ. ಅದೌ ಶ್ರದ್ಧಾ ತತಃ ಸಾಧು-ಸಂಗೋ 'ಥಾ ಭಜನ-ಕ್ರಿಯಾ ತತೋ 'ನರ್ಥ-ನಿವೃತ್ತಿಃ ಸ್ಯಾತ್ ತತೋ ನಿಷ್ಠಾ (ಚೈ.ಚ ಮಧ್ಯ 23.14-15). ನಿಷ್ಠ ಎಂದರೆ ನಿಮ್ಮ ನಂಬಿಕೆಯು ಹೆಚ್ಚು ದೃಢವಾಗುತ್ತದೆ, ಸ್ಥಿರವಾಗುತ್ತದೆ, ಸ್ತಿಮಿತವಾಗುತ್ತದೆ. ತತೋ ನಿಷ್ಠಾ ತತೋ ರುಚಿಃ. ರುಚಿ. ರುಚಿ ಎಂದರೆ ನೀವು ಕೇವಲ ಆಧ್ಯಾತ್ಮಿಕ ವಿಷಯಗಳಿಗೆ ಹಾತೊರೆಯುತ್ತೀರಿ. ನೀವು ಆಧ್ಯಾತ್ಮಿಕ ಸಂದೇಶವನ್ನು ಹೊರತುಪಡಿಸಿ ಏನನ್ನೂ ಕೇಳಲು ಇಷ್ಟಪಡುವುದಿಲ್ಲ. ಆಧ್ಯಾತ್ಮಿಕ ಚಟುವಟಿಕೆಗಳನ್ನು ಹೊರತುಪಡಿಸಿ ನೀವು ಏನನ್ನೂ ಮಾಡಲು ಇಷ್ಟಪಡುವುದಿಲ್ಲ. ಆಧ್ಯಾತ್ಮಗೊಳಿಸದ ಯಾವುದನ್ನೂ ತಿನ್ನಲು ನೀವು ಇಷ್ಟಪಡುವುದಿಲ್ಲ. ನಿಮ್ಮ ಜೀವನವು ಬದಲಾಗುತ್ತದೆ. ತತೋ ನಿಷ್ಠಃ ಅಥಾಶಕ್ತಿಃ. ನಂತರ ಬಾಂಧವ್ಯ, ನಂತರ ಭಾವ. ಆಗ ನೀವು ಅತೀಂದ್ರಿಯರಾಗಿರುತ್ತೀರಿ, ಅಂದರೆ, ಭಾವಪರವಶರಾಗುತ್ತೀರಿ. ಒಂದಿಷ್ಟು ಪರವಶವಿರುತ್ತದೆ. ಮತ್ತು ಅದು... ಆಧ್ಯಾತ್ಮಿಕ ಜೀವನದ ಅತ್ಯುನ್ನತ ವೇದಿಕೆಗೆ ಇವು ವಿಭಿನ್ನ ಹಂತಗಳಾಗಿವೆ. ತತೋ ಭಾವಃ. ತತೋ ಭಾವಃ. ಭಾವ, ಆ ಭಾವ ಹಂತವು, ನೀವು ನೇರವಾಗಿ ಪರಮಾತ್ಮನೊಂದಿಗೆ ಮಾತನಾಡಬಹುದಾದ ಸರಿಯಾದ ವೇದಿಕೆಯಾಗಿದೆ.