KN/660720 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಭಗವಾನ್ ಬುದ್ಧನನ್ನು ಶ್ರೀಮದ್ ಭಾಗವತಂನಲ್ಲಿ ಕೃಷ್ಣನ ಅವತಾರವೆಂದು ಸ್ವೀಕರಿಸಲಾಗಿದೆ. ಆದ್ದರಿಂದ ನಾವೂ ಕೂಡ, ಹಿಂದೂಗಳು, ನಾವು ಭಗವಾನ್ ಬುದ್ಧನನ್ನು ದೇವರ ಅವತಾರವೆಂದು ಪೂಜಿಸುತ್ತೇವೆ. ಒಬ್ಬ ಮಹಾನ್ ವೈಷ್ಣವ ಕವಿ ಪಠಿಸಿದ ಬಹಳ ಸುಂದರವಾದ ಪದ್ಯವಿದೆ. ನೀವು ಕೇಳಿ ಸಂತೋಷಪಡುತ್ತೀರಿ. ನಾನು ಅದನ್ನು ಪಠಿಸುತ್ತೇನೆ.
ನಿಂದಸಿ ಯಜ್ಞ-ವಿಧೇರ್ ಅಹಹ ಶೃತಿ-ಜಾತಂ
ಸದಯ-ಹೃದಯ ದರ್ಶಿತ-ಪಶು-ಘಾತಂ
ಕೇಶವ ಧೃತ-ಬುದ್ಧ-ಶರೀರ
ಜಯ ಜಗದೀಶ ಹರೇ ಜಯ ಜಗದೀಶ ಹರೇ
ಈ ಪದ್ಯದ ಭಾವಾರ್ಥ, ‘ಓ ಕೃಷ್ಣ ಭಗವಾನ್, ನೀನು ಬಡ ಪ್ರಾಣಿಗಳ ಮೇಲೆ ಸಹಾನುಭೂತಿಯಿಂದ ಬುದ್ಧನ ರೂಪವನ್ನು ತಾಳಿರುವೆ'. ಏಕೆಂದರೆ ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸುವುದೆ ಭಗವಾನ್ ಬುದ್ಧನ ಉಪದೇಶವು. ಅಹಿಂಸಾ, ಅಹಿಂಸೆ. ಪ್ರಾಣಿಗಳ ಹತ್ಯೆಯನ್ನು ನಿಲ್ಲಿಸುವುದು ಅವರ ಮುಖ್ಯ ಉದ್ದೇಶವಾಗಿತ್ತು."
660720 - ಉಪನ್ಯಾಸ BG 04.06-8 - ನ್ಯೂ ಯಾರ್ಕ್