"ಆದ್ದರಿಂದ ಆಧ್ಯಾತ್ಮಿಕ ಜೀವನ ನಡೆಸುವವನಿಗೆ ವಿನಾಶವಿಲ್ಲ. ಅವನಿಗೆ ವಿನಾಶವಿಲ್ಲ ಎಂದರೆ ಅವನ ಮುಂದಿನ ಜನ್ಮದಲ್ಲಿ ಅವನು ಮತ್ತೆ ಮನುಷ್ಯನಾಗಿ ಹುಟ್ಟುತ್ತಾನೆ. ಅವನು ಇತರ ಜೀವರಾಶಿಯ ಗೊಂದಲದಲ್ಲಿ ಕಳೆದುಹೋಗುವುದಿಲ್ಲ. ಏಕೆಂದರೆ ಅವನು ಮತ್ತೆ ಪ್ರಾರಂಭಿಸಬೇಕು. ಅವನು ಹತ್ತು ಪ್ರತಿಶತದಷ್ಟು ಕೃಷ್ಣ ಪ್ರಜ್ಞೆಯನ್ನು ಮುಗಿಸಿದ್ದಾನೆಂದು ಭಾವಿಸೋಣ. ಈಗ ಅವನು ಮತ್ತೆ ಶೇಕಡ ಹನ್ನೊಂದರಿಂದ ಪ್ರಾರಂಭಿಸಬೇಕು. ಅದನ್ನು ಪ್ರಾರಂಭಿಸಲು, ಅಂದರೆ, ಕೃಷ್ಣ ಪ್ರಜ್ಞೆಯಲ್ಲಿ ಶೇಕಡ ಹನ್ನೊಂದರಿಂದ, ಅವನು ಮಾನವ ದೇಹವನ್ನು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಯಾರು ಕೃಷ್ಣ ಪ್ರಜ್ಞೆಯನ್ನು ಸ್ವೀಕರಿಸುತ್ತಾನೊ, ಅವನಿಗೆ ಮುಂದಿನ ಜನ್ಮದಲ್ಲಿ ಮಾನವ ದೇಹ ಖಾತರಿಪಡಿಸಲಾಗಿದೆ."
|