"ಜೀವತ್ಮಾನು ಶಾಶ್ವತವಾಗಿ ಕೃಷ್ಣನ ಸೇವಕನಾಗಿದ್ದಾನೆ, ಮತ್ತು ಒಬ್ಬನು ತನ್ನ ಯಜಮಾನನ ಸ್ವರೂಪವನ್ನು ಅರ್ಥಮಾಡಿಕೊಳ್ಳಬೇಕು ಆಗ ಅವನ ಸೇವಾ ಮನೋಭಾವ, ವಾತ್ಸಲ್ಯ ಹೆಚ್ಚು ಆತ್ಮೀಯವಾಗಿರಬಹುದು. ನಾನು ಒಂದು ಕಡೆ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಭಾವಿಸೋಣ. ಯಜಮಾನನ ಸೇವೆಯಲ್ಲಿ ನಿರತನಾಗಿದ್ದೇನೆ, ಆದರೆ ನನ್ನ ಯಜಮಾನ ಎಷ್ಟು ದೊಡ್ಡ ವ್ಯಕ್ತಿ ಎಂದು ನನಗೆ ತಿಳಿದಿಲ್ಲ. ಆದರೆ ನನ್ನ ಯಜಮಾನನ ಪ್ರಭಾವ, ಮತ್ತು ಸಮೃದ್ಧಿ, ಮತ್ತು ಶ್ರೇಷ್ಠತೆಯನ್ನು ನಾನು ಅರ್ಥಮಾಡಿಕೊಂಡಾಗ, ನಾನು ಹೆಚ್ಚು ಶ್ರದ್ಧೆ ಹೊಂದುವೆನು: "ಓಹ್, ನನ್ನ ಯಜಮಾನನು ಬಹಳ ಶ್ರೇಷ್ಠ." ಆದ್ದರಿಂದ ಕೇವಲ, "ದೇವರು ಶ್ರೇಷ್ಠ, ಮತ್ತು ನಾನು ದೇವರೊಂದಿಗೆ ಎನೋ ಸಂಬಂಧವನ್ನು ಹೊಂದಿದ್ದೇನೆ", ಎಂದು ತಿಳಿದುಕೊಂಡರೆ ಸಾಕಾಗುವುದಿಲ್ಲ. ಅವನು ಎಷ್ಟು ಶ್ರೇಷ್ಠನೆಂದು ನೀವು ತಿಳಿದಿರಬೇಕು. ಖಂಡಿತ, ನೀವು ಲೆಕ್ಕ ಹಾಕಲು ಸಾಧ್ಯವಿಲ್ಲ, ಆದರೆ ಸಾಧ್ಯವಾದಷ್ಟು, ಅವನು ಎಷ್ಟು ಶ್ರೇಷ್ಠನೆಂದು ನೀವು ತಿಳಿದುಕೊಳ್ಳಬೇಕು."
|