KN/661207 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ನ್ಯೂ ಯಾರ್ಕ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
“ಯಾವುದೇ ಭೂಮಿ ನಿಮಗೆ ಸೇರಿಲ್ಲ. ಎಲ್ಲವೂ ದೇವರಿಗೆ ಸೇರಿದೆ. ಈಶಾವಾಸ್ಯಂ ಇದಂ ಸರ್ವಮ್ (ಈಉ 1). ಅವನು ಮಾಲೀಕನಾಗಿದ್ದಾನೆ. ಭೋಕ್ತಾರಂ ಯಜ್ಞ-ತಪಸಾಂ ಸರ್ವ ಲೋಕ ಮಹೇಶ್ವರಮ್ (ಭ.ಗೀ 5.29). ಅದು ಅಪಗ್ರಹಿಕೆ… ನಾವು ಅಕ್ರಮವಾಗಿ ಸ್ವಾಧೀನಮಾಡಿ ತಪ್ಪಾಗಿ ಮಾಲಿಕತ್ವವನ್ನು ಸಾಧಿಸುತ್ತಿದ್ದೇವೆ. ಆದ್ದರಿಂದ ಶಾಂತಿ ಇಲ್ಲ. ನೀವು ಶಾಂತಿಯನ್ನು ಹುಡುಕುತ್ತಿದ್ದೀರಿ. ಶಾಂತಿ ಹೇಗೆ ಇರಲು ಸಾಧ್ಯ? ನಿಮಗೆ ಸೇರದ ಒಂದನ್ನು ನಿಮ್ಮದೆಂದು ತಪ್ಪಾಗಿ ಹಕ್ಕು ಸಾಧಿಸುತ್ತಿರುವಿರಿ. ಆದ್ದರಿಂದ ಇಲ್ಲಿ ಇದನ್ನು ಸರ್ವೈಶ್ವರ್ಯ ಪೂರ್ಣ ಎಂದು ಹೇಳಲಾಗಿದೆ. ಆದ್ದರಿಂದ ಪ್ರತಿಯೊಂದು ಸ್ಥಳವೂ ದೇವರಿಗೆ ಸೇರಿದೆ, ಆದರೆ ಆ ಗೋಲೋಕ ವೃಂದಾವನ, ಆ ಸ್ಥಳವು ವಿಶೇಷವಾಗಿ ಅವನ ವಾಸಸ್ಥಾನವಾಗಿದೆ. ನೀವು ಚಿತ್ರವನ್ನು ನೋಡಿದ್ದೀರಿ. ಅದು ಕಮಲದಂತಿದೆ. ಎಲ್ಲಾ ಗ್ರಹಗಳು ದುಂಡಾಗಿವೆ, ಆದರೆ ಆ ಸರ್ವೋಚ್ಚ ಗ್ರಹವು ಕಮಲದಂತಿದೆ. ಅದು ಆಧ್ಯಾತ್ಮಿಕ ಆಕಾಶದಲ್ಲಿದೆ, ಗೋಲೋಕ ವೃಂದಾವನ.”
661207 - ಉಪನ್ಯಾಸ CC Madhya 20.154-157 - ನ್ಯೂ ಯಾರ್ಕ್