“ಆದ್ದರಿಂದ ಪರಮ ಪ್ರಭು, ದೇವೋತ್ತಮ ಪರಮ ಪುರುಷ ಎಲ್ಲರಿಗಿಂತ ಹಿರಿಯವನು, ಆದರೆ ನೀವು ಯಾವಾಗ ನೋಡಿದರು ಅವನು ಯುವಕನಂತೆ ಕಾಣುತ್ತಾನೆ. ಆದ್ಯಂ ಪುರಾಣ ಪುರುಷಂ ನವ-ಯೌವನಂ (ಬ್ರ.ಸ 5.33). ನವ-ಯೌವನಂ ಅಂದರೆ ನವ ಯುವಕ. ಆದ್ದರಿಂದ ಅದನ್ನು ವಿವರಿಸಲಾಗುತ್ತಿದೆ, ಚೈತನ್ಯ ಮಹಾಪ್ರಭುಗಳಿಂದ ವಿವರಿಸಲಾಗುತ್ತಿದೆ, ವಯಸ್ಸು... ಇದು ದೇವರ ಮತ್ತೊಂದು ಗುಣಲಕ್ಷಣ. ಕಿಶೋರ-ಶೇಖರ-ಧರ್ಮೀ ವ್ರಜೇಂದ್ರ-ನಂದನ. ಕಿಶೋರ-ಶೇಖರ. ಕಿಶೋರ. ಕಿಶೋರ ಅಂದರೆ… ಹನ್ನೊಂದು ವರ್ಷದಿಂದ ಹದಿನಾರು ವರ್ಷಗಳ ಹುಡುಗರನ್ನು ಕಿಶೋರ ಎಂದು ಕರೆಯಲಾಗುತ್ತದೆ. ಈ ಅವಧಿಯನ್ನು ಇಂಗ್ಲಿಷ್ನಲ್ಲಿ ಏನೆಂದು ಕರೆಯುತ್ತಾರೆ? ತರುಣಾವಸ್ಥೆ? ಹೌದು. ಈ ವಯಸ್ಸು... ಕೃಷ್ಣ ತನ್ನನು ತಾನೇ ಹನ್ನೊಂದರಿಂದ ಹದಿನಾರು ವರ್ಷದ ಹುಡುಗನಂತೆ ತೋರಿಸಿಕೊಳ್ಳುತ್ತಾನೆ. ಅದಕ್ಕಿಂತ ಹೆಚ್ಚಿಲ್ಲ. ಕುರುಕ್ಷೇತ್ರ ಕದನದಲ್ಲಿ, ಅವನು ಮುತ್ತಜ್ಜನಾಗಿದ್ದಾಗ, ಆಗಲೂ ಅವನ ವೈಶಿಷ್ಟ್ಯವು ಚಿಕ್ಕ ಹುಡುಗನಂತೆಯೇ ಇತ್ತು.”
|