"ಆದ್ದರಿಂದ ನಾವು ದೇವೋತ್ತಮ ಪರಮ ಪುರುಷೋನೊಂದಿಗೆ ನಮ್ಮ ಸಂಬಂಧವನ್ನು ಹೊಂದಲಿದ್ದೇವೆ. ಹಾಗಾದರೆ ಅದನ್ನು ಹೇಗೆ ಸಾಧಿಸಬಹುದು? ಅದನ್ನು ಈಗ ಚೈತನ್ಯ ಮಹಾಪ್ರಭುಗಳು ವಿವರಿಸುತ್ತಿದ್ದಾರೆ, ಮತ್ತು ಇದನ್ನು ನಾವು ಸೇವೆಯನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆ ಎಂದು ಕರೆಯುತ್ತೇವೆ, ಯಾವುದರಿಂದ ನಾವು ಆ ಬಿಂದುವನ್ನು ಸಾಧಿಸಬಹುದೋ ಅದನ್ನು ಅಭಿಧೇಯ ಎಂದು ಕರೆಯಲಾಗುತ್ತದೆ. ಅಭಿಧೇಯ ಎಂದರೆ ಕರ್ತವ್ಯಗಳನ್ನು ನಿರ್ವಹಿಸುವುದು, ಕರ್ತವ್ಯಗಳನ್ನು ನಿರ್ವಹಿಸುವುದು, ಅಥವಾ ಋಣದಿಂದ ಮುಕ್ತನಾಗುವುದು -ಕರ್ತವ್ಯವಲ್ಲ: ಋಣ. ನೀವು ಕೆಲವೊಮ್ಮೆ ಕರ್ತವ್ಯವನ್ನು ತಪ್ಪಿಸಬಹುದು, ಮತ್ತು ನಿಮ್ಮನ್ನು ಕ್ಷಮಿಸಲೂಬಹುದು, ಆದರೆ ನಾವು ಋಣವನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಋಣ ಎಂದರೆ ನೀವು ಅದರಿಂದ ಮುಕ್ತಿಯಾಗಲೇ ಬೇಕು. ಅದಕ್ಕಾಗಿ ನೀವು ಉದ್ದೇಶಿಸಲ್ಪಟ್ಟಿದ್ದೀರಿ, ನೀವು ಅದರಿಂದ ಮುಕ್ತಿಯಾಗದಿದ್ದರೆ, ನೀವು ಕಷ್ಟದಲ್ಲಿ ಸಿಲಿಕಿಕೊಳ್ಳುತ್ತೀರಿ. "
|