KN/670322 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
ಈಗ ನೀವು ನಿಮ್ಮ ಕೆಲಸದಿಂದ ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದೀರಿ. ಪ್ರತಿಯೊಬ್ಬರೂ ತಮ್ಮ ಕೆಲಸದಿಂದ ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದಾರೆ. ಒಬ್ಬ ಮನುಷ್ಯ, ಸಾಮಾನ್ಯ ಕೆಲಸಗಾರ, ಅವನು ಕೂಡ ದುಡಿಮೆಯಿಂದ ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದಾನೆ ಮತ್ತು ದೊಡ್ಡ ಬಂಡವಾಳಗಾರ, ಅವನು ಕೂಡ ತನ್ನ ದುಡಿಮೆಯಿಂದ ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದಾನೆ. ಆದರೆ ಭಗವದ್ಗೀತೆ ಹೇಳುತ್ತದೆ ಅವರು ಯಾವ ಅರ್ಥದಲ್ಲಿ ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದಾರೆ? ಅವರು ದೇಹದಿಂದ ಅಥವಾ ಇಂದ್ರಿಯ ತೃಪ್ತಿಯಿಂದ ಸಂತೋಷವಾಗಿರಲು ಪ್ರಯತ್ನಿಸುತ್ತಿದ್ದಾರೆ, ಆದರೆ ನಿಮ್ಮ ಇಂದ್ರಿಯಗಳನ್ನು ಎಷ್ಟು ಕಾಲದವರೆಗೆ ತೃಪ್ತಿಪಡಿಸಲು ಸಾಧ್ಯವಾಗುತ್ತದೆ? ನಿಮ್ಮ ಆಸಕ್ತಿಯು ವಿಭಿನ್ನವಾಗಿದೆ. : ಇಂದ್ರಿಯ ತೃಪ್ತಿ ಅಲ್ಲ, ನಿಮ್ಮ ಆಸಕ್ತಿಯು ನೀವು ಏನು ಎಂದು ಕಂಡು ಕೊಳ್ಳಬೇಕು. ಆದ್ದರಿಂದ ನೀವು ಈ ಚೇತನ ಎಂದು ಭಗವದ್ಗೀತೆಯಲ್ಲಿ ಬಹಳ ಸೊಗಸಾಗಿ ವಿವರಿಸಲಾಗಿದೆ.
670322 - ಉಪನ್ಯಾಸ ಶ್ರೀಮ ಭಾ ೦೭-೦೭-೪೬ - ಸ್ಯಾನ್ ಫ್ರಾನ್ಸಿಸ್ಕೋ