KN/670327 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಾವು ಗಮನವಿಟ್ಟು ಕೇಳಿದರೆ, ಆಗ ಅಲ್ಲಿ ಧ್ಯಾನ ಇರಬೇಕು. ಮತ್ತು ಪೂಜೆ. ಪೂಜೆ ಎಂದರೆ ಅರ್ಚನೆ. ಈ ಯುಗದಲ್ಲಿ ಪೂಜೆಯ ಸರಳ ಪ್ರಕ್ರಿಯೆಯು ನಾವು ಮಾಡುತ್ತಿರುವ ಈ ಸಾಧನೆಯಾಗಿದೆ - ಜಪ ಮಾಡುವುದು, ಕೇಳುವುದು ಮತ್ತು ಕೆಲವು ಹಣ್ಣುಗಳು, ಹೂವುಗಳನ್ನು ಅರ್ಪಿಸುವುದು ಮತ್ತು ಈ ಮೇಣದಬತ್ತಿಇಂದ ಆರತಿ ಮಾಡುವುದು. ಇದು ಸರಳವಾಗಿದೆ, ಅಷ್ಟೆ. ಅಲ್ಲಿವೆ ... ವೈದಿಕ ಸಾಹಿತ್ಯದ ಪ್ರಕಾರ ಅನೇಕ ಪರಿಕರಗಳಿವೆ ..., ಪೂಜಿಸಲು ಅರವತ್ನಾಲ್ಕು ಪರಿಕರಗಳಿವೆ, ಈ ಯುಗದಲ್ಲಿ ಅದು ಸಾಧ್ಯವಿಲ್ಲ, ಆದ್ದರಿಂದ ಇದೆಲ್ಲವೂ ಸರಿ. ಆದ್ದರಿಂದ ಈ ಪ್ರಕ್ರಿಯೆಯು ನಿಮಗೆ ಸಂಪೂರ್ಣ ಸತ್ಯವನ್ನು ಅರ್ಥಮಾಡಿಕೊಡುತ್ತದೆ. ನೀವು ಈ ತತ್ತ್ವವನ್ನು " ಏಕೇನಾ ಮನಸಾ" ಒಂದೇ ಮನಸ್ಸಿನಿಂದ ಅನುಸರಿಸಿ, ನಿಮ್ಮ ಗಮನವನ್ನು ಬೇರೆ ಯಾವುದೇ ವಿಷಯದ ಕಡೆಗೆ ತಿರುಗಿಸದೆ. ನೀವು ಈ ತತ್ವವನ್ನು ಅನುಸರಿಸಿದರೆ, "ಏಕೇನಾ ಮನಸಾ", ಕೇಳಲು, ಜಪ ಮಾಡಲು, ಯೋಚಿಸಲು ಮತ್ತು ಪೂಜಿಸಲು... ಈ ಸರಳ ಪ್ರಕ್ರಿಯೆ. ಇದು ಶ್ರೀಮದ್-ಭಾಗವತದ ಸೂಚನೆ."
670327 - ಉಪನ್ಯಾಸ ಶ್ರೀ ಮ ಭಾ ೦೧.೦೨.೧೪-೧೬ - ಸ್ಯಾನ್ ಫ್ರಾನ್ಸಿಸ್ಕೋ