"ಆತ್ಮವು ಶಾಶ್ವತವಾದದ್ದು, "ನ ಹನ್ಯತೇ ಹನ್ಯಮಾನೆ ಶರೀರೆ: (ಭ.ಗೀ-೨.೨೦) 'ಈ ದೇಹ ನಾಶವಾದ ನಂತರವೂ, ಪ್ರಜ್ಞೆಯು ನಾಶವಾಗುವುದಿಲ್ಲ'. ಅದು ಮುಂದುವರಿಯುತ್ತದೆ. ಬದಲಿಗೆ, ಪ್ರಜ್ಞೆಯು ಮತ್ತೊಂದು ರೀತಿಯ ದೇಹಕ್ಕೆ ವರ್ಗಾವಣೆಯಾದಾಗ ಜೀವನದ ಭೌತಿಕ ಪರಿಕಲ್ಪನೆಗೆ ನನ್ನನ್ನು ಮತ್ತೆ ಜೀವಂತಗೊಳಿಸುತ್ತದೆ. ಅದನ್ನು ಕೂಡ ಭಗವದ್ಗೀತೆಯಲ್ಲಿ ವಿವರಿಸಲಾಗಿದೆ, ಯಂ ಯಂ ವಾಪಿ ಸ್ಮರನ್ ಭಾವಂ ತ್ಯಜತಿ ಅಂತೆ ಕಲೇವರಂ (ಭ.ಗೀ-೮.೬). ಸಾವಿನ ಸಮಯದಲ್ಲಿ, ನಮ್ಮ ಪ್ರಜ್ಞೆಯು ಶುದ್ಧವಾಗಿದ್ದರೆ, ಮುಂದಿನ ಜೀವನವು ಭೌತಿಕವಲ್ಲ, ಮುಂದಿನ ಜೀವನವು ಶುದ್ಧ ಆಧ್ಯಾತ್ಮಿಕ ಜೀವನ. ಆದರೆ ಸಾವಿನ ಅಂಚಿನಲ್ಲಿ ನಮ್ಮ ಪ್ರಜ್ಞೆಯು ಶುದ್ಧವಾಗಿಲ್ಲದಿದ್ದರೆ, ಸುಮ್ಮನೆ ಈ ದೇಹವನ್ನು ಬಿಡುವುದರಿಂದ, ನಾವು ಆಗ ಈ ಭೌತಿಕ ದೇಹವನ್ನು ಮತ್ತೊಮ್ಮೆ ಪಡೆದುಕೊಳ್ಳಬೇಕಾಗುತ್ತದೆ. ಅದು ಪ್ರಕೃತಿಯ ನಿಯಮದಿಂದ ನಡೆಯುತ್ತಿರುವ ಪ್ರಕ್ರಿಯೆ."
|