"ಧರ್ಮಾವಿರುದ್ಧೋ ಕಾಮೋ 'ಸ್ಮಿ ಅಹಮ್ ( ಭ.ಗೀ. ೭.೧೧ ):" ಧರ್ಮದಿಂದ ಅನುಮೋದಿಸಲ್ಪಟ್ಟ ಲೈಂಗಿಕ ಬಯಕೆ, ಅದು ನಾನೇ. ಅದೇ ಕೃಷ್ಣ. ಲೈಂಗಿಕ ಕಾಮನೆಗಳನ್ನು ಪೂರೈಸುವುದು - ಅದರರ್ಥ ಬೆಕ್ಕುಗಳ ತರಹ ಅಲ್ಲ, ನಾವು ಸ್ವತಂತ್ರರು. ಈ ಸ್ವಾತಂತ್ರ್ಯ ಯಾವುದು? ಆ ಸ್ವಾತಂತ್ರ್ಯ ಬೆಕ್ಕುಗಳು ಮತ್ತು ನಾಯಿಗಳಿಗೂ ಇದೆ. ಅವರು ಎಷ್ಟು ಮುಕ್ತರೆಂದರೆ, ರಸ್ತೆಯಲ್ಲಿ ಅವರು ಲೈಂಗಿಕವಾಗಿ ಸಂಭೋಗಿಸುತ್ತಾರೆ. ನಿಮಗೆ ಅಷ್ಟೊಂದು ಸ್ವಾತಂತ್ರ್ಯವಿಲ್ಲ. ನೀವು ಪಾರ್ಲರ್, ಅಂದರೆ, ಅಪಾರ್ಟ್ಮೆಂಟ್ ಅನ್ನು ಹುಡುಕಬೇಕು. ಆದ್ದರಿಂದ ನೀವು ಆ ಸ್ವಾತಂತ್ರ್ಯವನ್ನು ಬಯಸುತ್ತೀರಾ? ಇದು ಸ್ವಾತಂತ್ರ್ಯವಲ್ಲ. ಇದು ನರಕಕ್ಕೆ ಹೋಗುವುದು ಎಂದು ನಾನು ಹೇಳುತ್ತೇನೆ. ಇದು ಸ್ವಾತಂತ್ರ್ಯವಲ್ಲ. ಆದ್ದರಿಂದ ನೀವು ಲೈಂಗಿಕ ಜೀವನವನ್ನು ಬಯಸಿದರೆ ನೀವು ಗ್ರಹಸ್ಥರಾಗಿರಿ ಎಂದು ವೈದಿಕ ಸಾಹಿತ್ಯಗಳು ಆದೇಶಿಸುತ್ತವೇ. ನೀವು ಒಳ್ಳೆಯ ಹುಡುಗಿಯನ್ನು ಮದುವೆಯಾಗಿರಿ, ತದನಂತರ ನಿಮಗೆ ತುಂಬಾ ಉತ್ತಮ ಜವಾಬ್ದಾರಿ ಸಿಗುವುದು. ಇದು, ಈ ರಿಯಾಯಿತಿ, ಲೈಂಗಿಕ ಜೀವನವನ್ನು, ಅನುಮತಿಸಲಾಗಿದೆ ಇದರಿಂದ ನೀವು ಇತರರೆಲ್ಲರ ಸೇವೆ ಮಾಡಬೇಕಾಗುತ್ತದೆ. ಅದು ಜವಾಬ್ದಾರಿ. "
|