KN/670416 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸ್ಯಾನ್ ಫ್ರಾನ್ಸಿಸ್ಕೋ

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಮ್ಮ ಗಾಂಧಿಯಂತೆಯೇ: ಅವರು ಭಗವದ್ಗೀತೆಯಿಂದ ಅಹಿಂಸೆಯನ್ನು ಸಿದ್ಧ ಪಡಿಸಲು ಬಯಸಿದ್ದರು. ಯುದ್ಧಭೂಮಿಯಲ್ಲಿ ಭಗವದ್ಗೀತೆಯನ್ನು ಬೋಧಿಸಲಾಗುತ್ತಿದೆ ಮತ್ತು ಅದು ಸಂಪೂರ್ಣವಾಗಿ ಹಿಂಸೆಯಾಗಿದೆ. ಅವರು ಹೇಗೆ ಸಿದ್ಧ ಪಡಿಸಬಹುದು? ಆದ್ದರಿಂದ ಅವರು ತಮ್ಮದೇ ಆದ ಅರ್ಥವನ್ನು ಎಳೆಯುತ್ತಿದ್ದಾರೆ. ಮಿಶ್ರ ... ಇದು ತುಂಬಾ ತೊಂದರೆದಾಯಕವಾಗಿದೆ, ಮತ್ತು ಅಂತಹ ವ್ಯಾಖ್ಯಾನವನ್ನು ಓದುವ ಯಾರಾದರೂ ಅವನತಿ ಹೊಂದುತ್ತಾರೆ. ಅವನತಿ ಏಕೆ ಹೊಂದುತ್ತಾರೆ ಎಂದರೆ ಭಗವದ್ಗೀತೆಯು ನಿಮ್ಮ ಕೃಷ್ಣ ಪ್ರಜ್ಞೆಯನ್ನು ಜಾಗೃತಗೊಳಿಸಲು ಉದ್ದೇಶಿಸಲಾಗಿದೆ. ಅದು ಎಚ್ಚರಗೊಳ್ಳದಿದ್ದರೆ, ಅದು ವ್ಯರ್ಥ, ಸಮಯದ ವ್ಯರ್ಥ. ಚೈತನ್ಯ ಮಹಾಪ್ರಭುಗಳು ಅನಕ್ಷರಸ್ಥನಾಗಿದ್ದ ಬ್ರಾಹ್ಮಣನನ್ನು ಅಪ್ಪಿಕೊಂಡಂತೆ, ಆದರೆ ಆ ಬ್ರಾಹ್ಮಣನು ಭಗವದ್ಗೀತೆಯ ಸಾರವಾದ ಭಗವಂತ ಮತ್ತು ಭಕ್ತನ ನಡುವಿನ ಸಂಬಂಧವನ್ನು ತೆಗೆದುಕೊಂಡರು. ಆದ್ದರಿಂದ, ನಾವು ಯಾವುದೇ ಸಾಹಿತ್ಯದ ನೈಜತೆಯನ್ನು ತೆಗೆದುಕೊಳ್ಳದ ಹೊರತು, ನಾನು ಹೇಳುವುದೆನೆಂದರೆ, ಯಾವುದಾದರೂ ಸಾಹಿತ್ಯದ ಸಾರವನ್ನು, ಅದು ಸುಮ್ಮನೆ ಸಮಯ ವ್ಯರ್ಥ."
670416 - ಉಪನ್ಯಾಸ ಚೈ ಚ ಆದಿ ೦೭.೧೦೯-೧೧೪ - ನ್ಯೂ ಯಾರ್ಕ್