"ಯಾರು ಹೆಚ್ಚು ರಜೋಗುಣದಲ್ಲಿರುವರೋ, ಅವರು ಈ ಗ್ರಹದಲ್ಲೆ ವಾಸಿಸುವರು. ಈ ಗ್ರಹಗಳ ವ್ಯವಸ್ಥೆ, ಸ್ಥಾನಮಾನ. ಈ ಪ್ರಪಂಚದಂತೆಯೇ ಇನ್ನೂ ಅನೇಕ ಗ್ರಹಗಳಿವೆ. ಆದ್ದರಿಂದ ಅವರಿಗೆ ಇಲ್ಲಿ ವಾಸಿಸಲು ಅವಕಾಶವಿದೆ. ಇಲ್ಲಿ ಎಲ್ಲಾ ಜೀವಿಗಳು, ಅವರು ಹೆಚ್ಚು ರಜೋಗುಣದಲ್ಲಿ ಇರುವವರು. ಮತ್ತು ಅಧೋ ಗಚ್ಛನ್ತಿ ತಾಮಸಾಹ್ (ಭ.ಗೀತಾ ೧೪.೧೮). ಮತ್ತು ಈ ಭೂ ಗ್ರಹದ ಕೆಳಗೆ ಅಲ್ಲಿ ಇತರ ಗ್ರಹಗಳಿವೆ, ಅವು ಕತ್ತಲಿಂದಿವೆ, ಕತ್ತಲ ಗ್ರಹಗಳು. ಮತ್ತು ಪ್ರಾಣಿಗಳು ಅಂಧಕಾರದಲ್ಲಿವೆ. ಅವುಗಳು ಈ ಉದ್ಯಾನವನದಲ್ಲಿದ್ದಾರಾದರೂ, ಆದರೆ ಅವುಗಳಿಗೆ ತಾವು ಎಲ್ಲಿದ್ದೇವೆ ಎಂದು ಅವುಗಳಿಗೆ ತಿಳಿದಿಲ್ಲ, ಅಂಧಕಾರ. ಅವರ ಜ್ಞಾನ ಅಭಿವೃದ್ಧಿಯಾಗಿಲ್ಲ. ಇದು ತಮೋಗುಣದ ಪರಿಣಾಮವಾಗಿದೆ. ಮತ್ತು ಯಾರು ಕೃಷ್ಣ ಪ್ರಜ್ಞೆಯಲ್ಲಿರುವರೋ ಅವರು ತಮೋಗುಣದಲ್ಲೂ ಅಥವಾ ರಜೋಗುಣದಲ್ಲೂ, ಅಥವಾ ಸಾತ್ವಿಕ ಗುಣದಲ್ಲೂ ಇರುವುದಿಲ್ಲ. ಅವರು ಆಧ್ಯಾತ್ಮಿಕ ಸ್ಥಿತಿಯಲ್ಲಿ ಇರುತ್ತಾರೆ. ಆದ್ದರಿಂದ ಒಬ್ಬನು ಕೃಷ್ಣ ಪ್ರಜ್ಞೆಯನ್ನು ಚೆನ್ನಾಗಿ ಬೆಳೆಸಿಕೊಂಡರೆ, ಅವನು ಒಮ್ಮೆಲೇ ಕೃಷ್ಣ ಲೋಕಕ್ಕೆ ಉನ್ನತಿಯನ್ನು ಹೊಂದುತ್ತಾನೆ. ಅದು ಬೇಕಾಗುತ್ತದೆ. "
|