"ಆದ್ದರಿಂದ ಅಮೂಲ್ಯವಾದ ಆಸ್ತಿಯಾದ ಮಾನವ ಜೀವನವು ನಾಯಿಗಳು ಮತ್ತು ಹಂದಿಗಳ ರೀತಿಯಲ್ಲಿ ವ್ಯರ್ಥ ಮಾಡುವುದಕ್ಕಾಗಿ ಅಲ್ಲ. ನಮಗೆ ಜವಾಬ್ದಾರಿ ಸಿಕ್ಕಿದೆ. ಆತ್ಮವು ಒಂದು ರೂಪದಿಂದ ಮತ್ತೊಂದು ದೇಹಕ್ಕೆ ವರ್ಗಾವಣೆಯಾಗುತ್ತಿದೆ, ಮತ್ತು ಮಾನವ ರೂಪದ ಈ ದೇಹವು, ನೀವು ರಾಧಾ-ಕ್ರಷ್ಣರ ಆನಂದದ ಅತೀಂದ್ರಿಯ ವೇದಿಕೆಯಲ್ಲಿ, ನೀವು ಹೇಗೆ ಪ್ರವೇಶಿಸಬಹುದು ಎಂದು ಸಜ್ಜಾಗಲು ಸೂಕ್ತವಾಗಿದೆ .ನೀವು ಆನಂದವನ್ನು ಬಯಸುತ್ತಿರುವಿರಿ, ಆದರೆ ಆ ಆನಂದವನ್ನು ಹೇಗೆ ಸಾಧಿಸುವುದು ಎಂದು ನಿಮಗೆ ತಿಳಿದಿಲ್ಲ. ಆ ಆನಂದವನ್ನು ಸಾಧಿಸಲು, ಆದೇಶ ಇಲ್ಲಿದೆ: ತಪೋ ದಿವ್ಯಮ್. ನನ್ನ ಪ್ರೀತಿಯ ಪುತ್ರರೇ, ದಿವ್ಯಮ್, 'ಪರಮ ಸತ್ಯದ ಸಹಯೋಗದಲ್ಲಿ ಅತೀಂದ್ರಿಯ ಆನಂದವನ್ನು ಸಾಧಿಸಿವುದಕ್ಕೆ' ನೀವು ಕೆಲವು ಸಂಯಮದ ತತ್ವಗಳಿಗೆ ಒಳಗಾಗಬೇಕು.
|