KN/680508c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಆದ್ದರಿಂದ ಕೃಷ್ಣ ಪ್ರಜ್ಞೆಯು ಒಂದು ಆಂದೋಲನ. ಇದು ಹೊಸ ಆಂದೋಲನವಲ್ಲ. ಈ ಆಂದೋಲನವು ಕನಿಷ್ಠ ಐನೂರು ವರ್ಷಗಳ ಹಿಂದಿನಿಂದಲೂ ಪ್ರಸ್ತುತವಾಗಿದೆ. ಚೈತನ್ಯ ಮಹಾಪ್ರಭು, ಅವರು ಈ ಆಂದೋಲನವನ್ನು ಹದಿನೈದನೇ ಶತಮಾನದಲ್ಲಿ ಪ್ರಾರಂಭಿಸಿದರು. ಆದ್ದರಿಂದ ಈ ಆಂದೋಲನ ಭಾರತದ ಎಲ್ಲೆಡೆ ಪ್ರಸ್ತುತವಾಗಿದೆ, ಆದರೆ ನಿಮ್ಮ ದೇಶದಲ್ಲಿ, ಇದು ಹೊಸದು. ಆದರೆ ನೀವು ಈ ಆಂದೋಲನವನ್ನು ದಯವಿಟ್ಟು ಸ್ವಲ್ಪ ಗಂಭೀರವಾಗಿ ಪರಿಗಣಿಸಬೇಕು ಎಂಬುದು ನಮ್ಮ ವಿನಂತಿಯಾಗಿದೆ.ನಿಮ್ಮ ತಾಂತ್ರಿಕ ಪ್ರಗತಿಯನ್ನು ನಿಲ್ಲಿಸುವಂತೆ ನಾವು ನಿಮ್ಮನ್ನು ಕೇಳಿಕೊಳ್ಳುವುದಿಲ್ಲ. ನೀವು ಅದನ್ನು ಮಾಡುತ್ತಾಯಿರಿ. ಬಂಗಾಳದಲ್ಲಿ ಒಂದು ಒಳ್ಳೆಯ ಗಾದೆ ಇದೆ, ಮನೆಯ ಕೆಲಸಗಳಲ್ಲಿ ನಿರತಳಾಗಿರುವ ಮಹಿಳೆ ಕೂಡ ..., ಅವಳು ತನ್ನನ್ನು ಚೆನ್ನಾಗಿ ಅಲಂಕರಿಸುವುದನ್ನು ಸಹ ನೋಡಿಕೊಳ್ಳುತ್ತಾಳೆ. ಇದು ಮಹಿಳೆಯರ ಸ್ವಭಾವ. ಅವರು ಹೊರಗೆ ಹೋದಾಗ ಅವರು ತುಂಬಾ ಚೆನ್ನಾಗಿ ಉಡುಗೆ ತೊಡುತ್ತಾರೆ. ಆದ್ದರಿಂದ ಅದೇ ರೀತಿ, ನೀವು ಎಲ್ಲಾ ರೀತಿಯ ತಂತ್ರಜ್ಞಾನದಲ್ಲಿ ನಿರತರಾಗಿರಬಹುದು. ಅದು, ಅದನ್ನು ನಿಷೇಧಿಸಲಾಗಿಲ್ಲ. ಆದರೆ ಅದೇ ಸಮಯದಲ್ಲಿ, ನೀವು ಈ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ, ಆತ್ಮದ ವಿಜ್ಞಾನ."
680508 - ಉಪನ್ಯಾಸ ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಎಂ ಐ ಟಿ - ಬೋಸ್ಟನ್