" ಈ ಮಾನವ ರೂಪ ದೇಹ, ಅದು ಬಹಳ ವಿರಳವಾಗಿ ಲಭಿಸುತ್ತದೆ. ಅದನ್ನು ದುರುಪಯೋಗಪಡಿಸಿಕೊಳ್ಳಬಾರದು. ಅದು ಮೊದಲ ಜ್ಞಾನ. ಆದರೆ ಜನರಿಗೆ ಆ ರೀತಿಯಲ್ಲಿ ಶಿಕ್ಷಣವಿಲ್ಲ. ಅವರಿಗೆ ಉತ್ತೇಜಿಸುತ್ತಿದ್ದಾರೆ, ಇಂದ್ರಿಯಗಳನ್ನು ಭೋಗಿಸಿ: 'ಆನಂದಿಸಿ, ಆನಂದಿಸಿ, ಆನಂದಿಸಿ '. ಕೆಲವು ಮೂಢರು ಬರುತ್ತಾರೆ, ಅವನು ಕೂಡ ಹೇಳುತ್ತಾನೆ, 'ಸರಿ, ಮುಂದುವರೆಸಿ, ಆನಂದಿಸಿ. ಸುಮ್ಮನೆ ಹದಿನೈದು ನಿಮಿಷಗಳ ಕಾಲ ಧ್ಯಾನ ಮಾಡಿ'. ಆದರೆ ವಾಸ್ತವವಾಗಿ, ಈ ದೇಹವು ಇಂದ್ರಿಯಗಳ ಆನಂದವನ್ನು ಉಲ್ಬಣಗೊಳಿಸುವುದಕ್ಕಾಗಿ ಅಲ್ಲ. ನಮಗೆ ಇಂದ್ರಿಯಗಳ ಆನಂದ ಬೇಕು ಏಕೆಂದರೆ ಅದು ದೇಹದ ಬೇಡಿಕೆಯಾಗಿದೆ. ನಾವು ದೇಹವನ್ನು ಆರೋಗ್ಯಕರ ಸ್ಥಿತಿಯಲ್ಲಿಡಲು ಬಯಸಿದರೆ, ದೇಹದ ಬೇಡಿಕೆಗಳು-ತಿನ್ನುವುದು, ಮಲಗುವುದು, ಸಂಯೋಗ ಮತ್ತು ರಕ್ಷಿಸುವುದು-ಒದಗಿಸಬೇಕು. ಆದರೆ ಅದನ್ನು ಉಲ್ಬಣಗೊಳಿಸಬಾರದು. ಆದ್ದರಿಂದ ಮಾನವನ ರೂಪದ ಜೀವನದಲ್ಲಿ, ತಪಸ್ಯ. ತಪಸ್ಯ ಎಂದರೆ ಸಂಯಮ, ತಪಸ್ಸು, ಪ್ರತಿಜ್ಞೆ. ಇವು ಎಲ್ಲಾ ಧರ್ಮಗ್ರಂಥಗಳ ಬೋಧನೆಗಳು. "
|