"ಚಿನ್ನದ ಪಂಜರದಲ್ಲಿ, ಒಂದು ಪಕ್ಷಿ ಇದೆ. ನೀವು ಪಕ್ಷಿಗೆ ಯಾವುದೇ ಆಹಾರವನ್ನು ನೀಡದಿದ್ದರೆ ಮತ್ತು ಪಂಜರವನ್ನು ಸುಮ್ಮನೆ ಬಹಳ ಚೆನ್ನಾಗಿ ತೊಳೆ್ದರೆ, ಓಹ್, ಅಲ್ಲಿ ಯಾವಾಗಲೂ, (ಪಕ್ಷಿಯನ್ನು ಅನುಕರಿಸುತ್ತಾ) 'ಚಿ ಚಿ ಚಿ ಚಿ'. ಏಕೆ ? ನಿಜವಾದ ಪಕ್ಷಿಯನ್ನು ನಿರ್ಲಕ್ಷಿಸಲಾಗಿದೆ. ಪಂಜರವು ಸುಮ್ಮನೆ ಹೊರಗಿನ ಹೊದಿಕೆ. ಅದೇ ರೀತಿ, ನಾನು ಜೀವಾತ್ಮ. ಅದನ್ನು ನಾನು ಮರೆತಿದ್ದೇನೆ. ಅಹಂ ಬ್ರಹ್ಮಾಸ್ಮಿ, ನಾನು ಬ್ರಹ್ಮನ್. ನಾನು ಈ ದೇಹವಲ್ಲ, ಮನಸ್ಸಲ್ಲ. ಮೊದಲನೆಯದಾಗಿ ಅವರು ದೇಹವನ್ನು ಸುಂದರವಾಗಿ ಇಡಲು ಪ್ರಯತ್ನಿಸುತ್ತಾರೆ.ಇದು ವಸ್ತು ನಾಗರಿಕತೆ. ಬಹಳ ಸುಂದರವಾದ ಬಟ್ಟೆ, ತುಂಬಾ ಸುಂದರವಾದ ಆಹಾರ, ಬಹಳ ಸುಂದರವಾದ ಮನೆ, ಬಹಳ ಸುಂದರವಾದ ಕಾರು ಅಥವಾ ಬಹಳ ಸುಂದರವಾದ ಇಂದ್ರಿಯ ಭೋಗ-ಎಲ್ಲವೂ ತುಂಬಾ ಚೆನ್ನಾಗಿದೆ. ಆದರೆ ಅವೆಲ್ಲ ಈ ದೇಹಕ್ಕೆ. ಮತ್ತು ಒಬ್ಬನು ಯಾವಾಗ ಈ ಸುಂದರವಾದ ವ್ಯವಸ್ಥೆಗಳಿಂದ ನಿರಾಶೆಗೊಳ್ಳುತ್ತಾನೋ, ಆಗ ಅವನು ಮನಸ್ಸಿನ ಶಾಂತಿಯನ್ನು ಹುಡುಕುತ್ತಾನೆ : ಕವನ, ಮಾನಸಿಕ ಊಹಾಪೋಹ, ಎಲ್ಎಸ್ಡಿ, ಗಾಂಜಾ, ಕುಡಿಯುವುದು ಮತ್ತು ಅನೇಕ ವಿಷಯಗಳು. ಇವೆಲ್ಲವೂ ಮಾನಸಿಕವಾಗಿವೆ. ವಾಸ್ತವವಾಗಿ, ಸಂತೋಷವು ದೇಹದ್ಲಲೂ ಇಲ್ಲ, ಅಥವಾ ಮನಸ್ಸಿನಲ್ಲೂ ಇಲ್ಲ. ನಿಜವಾದ ಸಂತೋಷವು ಆತ್ಮದಲ್ಲಿದೆ.
|