KN/680817c ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಮಾಂಟ್ರಿಯಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಮುಂದೆ ನಿಮ್ಮಲ್ಲಿ ಪ್ರತಿಯೊಬ್ಬರೂ ಆಧ್ಯಾತ್ಮಿಕ ಗುರುಗಳಾಗಬೇಕು. ಮತ್ತು ಆ ಕರ್ತವ್ಯವೇನು? ನೀವು ನನ್ನಿಂದ ಏನನ್ನು ಕೇಳುತ್ತಿದ್ದೀರೋ, ನೀವು ನನ್ನಿಂದ ಏನನ್ನು ಕಲಿಯುತ್ತಿದ್ದೀರೋ, ನೀವು ಯಾವುದೇ ಸಂಕಲನ ಅಥವಾ ಬದಲಾವಣೆಗಳಿಲ್ಲದೆ ಹಾಗೆಯೇ ಅದನ್ನು ಸಂಪೂರ್ಣವಾಗಿ ವಿತರಿಸಬೇಕು. ಆಗ ನೀವೆಲ್ಲರೂ ಆಧ್ಯಾತ್ಮಿಕ ಗುರುಗಳಾಗುವಿರಿ. ಅದು ಆಧ್ಯಾತ್ಮಿಕ ಗುರುಗಳಾಗುವ ವಿಜ್ಞಾನ. ಆಧ್ಯಾತ್ಮಿಕ ಗುರುಗಳು ತುಂಬಾ ಅಲ್ಲ ... ಆಧ್ಯಾತ್ಮಿಕ ಗುರುಗಳಾಗುವುದು ಬಹಳ ಅದ್ಭುತವಾದ ವಿಷಯವಲ್ಲ. ಸುಮ್ಮನೆ ಒಬ್ಬರು ಪ್ರಾಮಾಣಿಕ ಜೀವಿಯಾಗಿರಬೇಕು. ಅಷ್ಟೇ. ಏವಂ ಪರಂಪರಾ -ಪ್ರಾಪ್ತಮ್ ಇಮಂ ರಾಜರ್ಷಯೋ ವಿದುಃ (ಭ. ಗೀತಾ ೪.೨).ಭಗವದ್ಗೀತೆಯಲ್ಲಿ "ಗುರು ಪರಂಪರೆಯಿಂದ ಭಗವದ್ಗೀತೆಯ ಈ ಯೋಗ ಪ್ರಕ್ರಿಯೆಯನ್ನು ಶಿಷ್ಯನಿಂದ ಶಿಷ್ಯನಿಗೆ ಹಸ್ತಾಂತರಿಸಲಾಯಿತು" ಎಂದು ಹೇಳಲಾಗಿದೆ.
680817 - ಉಪನ್ಯಾಸ ಹಬ್ಬ ಆವಿರ್ಭಾವ, ಶ್ರೀ ವ್ಯಾಸ-ಪೂಜೆ - ಮಾಂಟ್ರಿಯಲ್