"ಕೃಷ್ಣ ಪ್ರಜ್ಞೆ ಇರುವೊಬ್ಬ ವ್ಯಕ್ತಿಯು ಮೂರ್ಖನಾಗಬಾರದು. ಈ ವಿಶ್ವವ್ಯಾಪಿ ಗ್ರಹಗಳು ಹೇಗೆ ತೇಲುತ್ತವೆ, ಈ ಮಾನವ ದೇಹವು ಹೇಗೆ ತಿರುಗುತ್ತಿದೆ, ಎಷ್ಟು ಜಾತಿಯ ಜೀವಗಳು, ಅವು ಹೇಗೆ ವಿಕಸನಗೊಳ್ಳುತ್ತಿವೆ ಎಂಬುದನ್ನು ವಿವರಿಸಬೇಕಾದರೆ ... ಇವೆಲ್ಲವೂ ವೈಜ್ಞಾನಿಕ ಜ್ಞಾನ- ಭೌತಶಾಸ್ತ್ರ, ಸಸ್ಯವಿಜ್ಞಾನ, ರಸಾಯನಶಾಸ್ತ್ರ, ಖಗೋಳವಿಜ್ಞಾನ, ಎಲ್ಲವೂ. ಆದ್ದರಿಂದ ಕೃಷ್ಣನು ಹೇಳುತ್ತಾನೆ, ಯಜ್ ಜ್ಞಾತ್ವಾ : ನೀವು ಈ ಜ್ಞಾನವನ್ನು ಅರ್ಥಮಾಡಿಕೊಂಡರೆ, ಕೃಷ್ಣ ಪ್ರಜ್ಞೆ, ಆಗ ನೀವು ತಿಳಿದುಕೊಳ್ಳ ಬೇಕಾಗಿರುವುದು ಏನೂ ಇರುವುದಿಲ್ಲ. ಇದರರ್ಥ ನಿಮಗೆ ಸಂಪೂರ್ಣ ಜ್ಞಾನವಿರುತ್ತದೆ. ನಾವು ಜ್ಞಾನದ ಹಿಂದೆ ಹಾತೊರೆಯುತ್ತಿದ್ದೇವೆ, ಆದರೆ ನಾವು ಕೃಷ್ಣ ಪ್ರಜ್ಞೆಯ ಜ್ಞಾನದಲ್ಲಿದ್ದರೆ, ಮತ್ತು ನಾವು ಕೃಷ್ಣನನ್ನು ತಿಳಿದಿದ್ದರೆ, ಆಗ ಎಲ್ಲಾ ಜ್ಞಾನವೂ ಒಳಗೊಂಡಿರುತ್ತವೆ. "
|