KN/680930 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಸಿಯಾಟಲ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ನಮ್ಮ ಕಾರ್ಯಕ್ರಮವೆಂದರೆ ಮೂಲ ಪುರುಷನಾದ ಗೋವಿಂದನನ್ನು ಪ್ರೀತಿ ಮತ್ತು ಭಕ್ತಿಯಿಂದ ಪೂಜಿಸುವುದು. ಗೋವಿಂದಂ ಆದಿ ಪುರುಷಂ. ಇದು ಕೃಷ್ಣ ಪ್ರಜ್ಞೆ. ನಾವು ಕೃಷ್ಣನನ್ನು ಪ್ರೀತಿಸಲು ಜನರಿಗೆ ಭೋದಿಸುತ್ತಿದ್ದೇವೆ ಅಷ್ಟೇ. ಪ್ರೀತಿಸುವುದು ನಮ್ಮ ಕಾರ್ಯಕ್ರಮ, ನಿಮ್ಮ ಪ್ರೀತಿಯನ್ನು ಸರಿಯಾದ ದಿಕ್ಕಿಗೆ ನಿರ್ದೇಶಿಸುವುದು. ನಮ್ಮ ಕಾರ್ಯಕ್ರಮ. ಪ್ರತಿಯೊಬ್ಬರೂ ಪ್ರೀತಿಸಲು ಬಯಸುತ್ತಾರೆ, ಆದರೆ ಅವರ ಪ್ರೀತಿ ತಪ್ಪಾಗಿರುವುದರಿಂದ ಅವರು ನಿರಾಶರಾಗುತ್ತಿದ್ದಾರೆ. ಜನರಿಗೆ ಅದು ಅರ್ಥವಾಗುತ್ತಿಲ್ಲ. ಅವರಿಗೆ ಕಲಿಸಲಾಗುತ್ತಿದೆ, 'ಮೊದಲನೆಯದಾಗಿ, ನೀವು ನಿಮ್ಮ ದೇಹವನ್ನು ಪ್ರೀತಿಸಿ'. ನಂತರ ಸ್ವಲ್ಪ ವಿಸ್ತರಿಸಿ, 'ನೀವು ನಿಮ್ಮ ತಂದೆ ಮತ್ತು ತಾಯಿಯನ್ನು ಪ್ರೀತಿಸಿ'. ನಂತರ 'ನಿಮ್ಮ ಸಹೋದರ ಮತ್ತು ಸಹೋದರಿಯನ್ನು ಪ್ರೀತಿಸಿ'. ನಂತರ 'ನಿಮ್ಮ ಸಮಾಜವನ್ನು ಪ್ರೀತಿಸಿ, ನಿಮ್ಮ ದೇಶವನ್ನು ಪ್ರೀತಿಸಿ, ಇಡೀ ಮಾನವ ಸಮಾಜವನ್ನು, ಮಾನವೀಯತೆಯನ್ನು ಪ್ರೀತಿಸಿ'. ಆದರೆ ಈ ವಿಸ್ತೃತ ಪ್ರೀತಿ, ಕೃಷ್ಣನನ್ನು ಪ್ರೀತಿಸುವ ಹಂತಕ್ಕೆ ತಲುಪದ ಹೊರತು ನಿಮಗೆ, ಪ್ರೀತಿ ಎಂದು ಏನನ್ನು ಕರೆಯಲ್ಪಡುತ್ತದೋ, ಅದು ತೃಪ್ತಿಯನ್ನು ನೀಡುವುದಿಲ್ಲ. ನಂತರ ನೀವು ತೃಪ್ತರಾಗುತ್ತೀರಿ. "
680930 - ಉಪನ್ಯಾಸ - ಸಿಯಾಟಲ್