"ಕಲಿ-ಸಂತರಣ ಉಪನಿಷತ್‌ನಲ್ಲಿಯೂ ಸಹ, ಈ ಕಲಿ ಯುಗದಲ್ಲಿ ಎಲ್ಲಾ ನಿಯಮಾಧೀನ ಆತ್ಮಗಳನ್ನು ಮಾಯೆಯ ಹಿಡಿತದಿಂದ ಈ 16 ಪದಗಳು ಮಾತ್ರ ಬಿಡಿಸಬಲ್ಲವು ಎಂದು ಹೇಳಲಾಗಿದೆ. ಮತ್ತು ಇದರಲ್ಲಿ ವಿಮೋಚನೆಗೊಳ್ಳಲು ಈ ಯುಗದಲ್ಲಿ ಇದಕ್ಕಿಂತ ಉತ್ತಮವಾದ ಮಾರ್ಗಗಳಿಲ್ಲ ಎಂದು ಸಹ ಇಲ್ಲಿ ಉಲ್ಲೇಖಿಸಲಾಗಿದೆ. ಅದು ಎಲ್ಲಾ ವೇದಗಳ ನಿರೂಪಣೆಯೂ ಇದೇ ಆಗಿದೆ. ಅದೇ ರೀತಿ ಮಾಧ್ವಾಚಾರ್ಯರು, ಮುಂಡಕ ಉಪನಿಷತ್ತಿನ ತಮ್ಮ ವ್ಯಾಖ್ಯಾನದಲ್ಲಿ ದ್ವಾಪರ ಯುಗದಲ್ಲಿ ಭಗವಾನ್ ವಿಷ್ಣುವನ್ನು ಪಂಚರಾತ್ರ ವಿಧಾನದಿಂದ ಪೂಜಿಸಬಹುದು ಎಂದು ಉಲ್ಲೇಖಿಸಿದ್ದಾರೆ. ಹಾಗೆಯೇ ಕಲಿ ಯುಗದಲ್ಲಿ ಭಗವಂತನ ಪವಿತ್ರ ನಾಮವನ್ನು ಸರಳವಾಗಿ ಜಪಿಸುವುದರ ಮೂಲಕ ಅವನನ್ನು ಪೂಜಿಸಬಹುದು."
|