"ಸ್ವಾರ್ಥ ... ನಾಯಿಯಂತೆಯೇ. ಅದಕ್ಕೆ ಅದರ ದೇಹದ ಬಗ್ಗೆ ಮಾತ್ರಾ ತಿಳಿದಿದೆ. ಅದು ತನ್ನ ಪರಿಮಿತಿಯಲ್ಲಿ ಮತ್ತೊಂದು ನಾಯಿಯನ್ನು ಬರಲು ಅನುಮತಿಸುವುದಿಲ್ಲ. ಅದು ತುಂಬಾ ಕೀಳಾದ ಸ್ವಾರ್ಥ. ನೀವು ಅದನ್ನು ಸ್ವಲ್ಪ ಹೆಚ್ಚು ವಿಸ್ತರಿಸಿ, ಮಾನವ ಸಮಾಜಕ್ಕೆ. ಅಲ್ಲಿ ಕುಟುಂಬದಲ್ಲಿ, ಹೆಂಡತಿ ಮತ್ತು ಮಕ್ಕಳು. ಅದು ಕೂಡ ವಿಸ್ತೃತ ಸ್ವಾರ್ಥವಾಗಿದೆ. ನಂತರ ನೀವು ಅದನ್ನು ಮತ್ತಷ್ಟು ವಿಸ್ತರಿಸಿ : ನಿಮಗೆ ಸಮಾಜ ಅಥವಾ ರಾಷ್ಟ್ರೀಯತೆ, ರಾಷ್ಟ್ರೀಯತೆಯ ಪ್ರಜ್ಞೆ ಇದೆ. ಅದು ಇನ್ನೂ ವಿಸ್ತೃತ ಸ್ವಾರ್ಥವಾಗಿದೆ. ಅದೇ ರೀತಿ, ನೀವು ಒಲವನ್ನು ಮಾನವೀಯತೆಗೆ ಸಹ ವಿಸ್ತರಿಸಿದ್ದೀರಿ. ಏಕೆಂದರೆ ನಾವು .. ಅಲ್ಲಿ ಪುರುಷರ ಒಂದು ವರ್ಗವಿದೆ, ಅವರು ಮಾನವ ಸಮಾಜದ ಸೇವೆ ಮಾಡಲು ತುಂಬಾ ಆಸಕ್ತಿ ಹೊಂದಿದ್ದಾರೆ. ಆದರೆ ಅವರು ಪ್ರಾಣಿ ಸಮಾಜಕ್ಕೆ ಸೇವೆ ಸಲ್ಲಿಸಲು ಆಸಕ್ತಿ ಹೊಂದಿಲ್ಲ. ಮಾನವ ಸಮಾಜದ ತೃಪ್ತಿಗಾಗಿ ಪ್ರಾಣಿ ಸಮಾಜವನ್ನು ಕೊಲ್ಲಬಹುದು. ಆದ್ದರಿಂದ, ನೀವು ಆತ್ಮದ ಅಂಶಕ್ಕೆ ಬರದಿದ್ದರೆ, ವಿಸ್ತೃತ ಸ್ವಾರ್ಥ ಏನೇ ಇರಲಿ, ಅದು ಸ್ವಾರ್ಥ."
|