"ಆದ್ದರಿಂದ ಈ ಸಂಪೂರ್ಣ ಸೃಷ್ಟಿ, ನಾವು ಹೊಂದಿರುವ ಯಾವುದೇ ಐಹಿಕ ಸೃಷ್ಟಿ, ಅವು ಈ ಇಪ್ಪತ್ನಾಲ್ಕು ಅಂಶದಿಂದ ಮಾಡಲ್ಪಟ್ಟಿದೆ ... ಬಣ್ಣಗಳಂತೆಯೇ. ಬಣ್ಣಗಳ ವೈವಿಧ್ಯದ ಎಂದರೆ ಮೂರು ಬಣ್ಣ: ಹಳದಿ, ಕೆಂಪು ಮತ್ತು ನೀಲಿ. ಯಾರು ಬಣ್ಣಗಳ ಮಿಶ್ರಣದಲ್ಲಿ ಪರಿಣಿತರೋ, ಅವರು ಈ ಮೂರು ಬಣ್ಣಗಳನ್ನು ಎಂಭತ್ತೊಂದು ಬಣ್ಣಗಳಾಗಿ ಬೆರೆಸುತ್ತಾರೆ. ಮೂರರಿಂದ ಮೂರಕ್ಕೆ ಒಂಬತ್ತು; ಒಂಬತ್ತರಿಂದ ಒಂಬತ್ತಕ್ಕೆ ಎಂಭತ್ತೊಂದು. ಆದ್ದರಿಂದ ಪರಿಣಿತ ಬಣ್ಣಗಾರರು, ಅವರು ಈ ಮೂರು ಬಣ್ಣಗಳನ್ನು ಎಂಭತ್ತೊಂದು ಬಣ್ಣಗಳಲ್ಲಿ ಪ್ರದರ್ಶಿಸಬಹುದು. ಅದೇ ರೀತಿ, ಐಹಿಕ ಸ್ವರೂಪ ... ಸಹಜವಾಗಿ, ಇದು ಒಂದು, ಒಂದು ಶಕ್ತಿ. ಆದರೆ ಈ ಶಕ್ತಿಯೊಳಗೆ ಮೂರು ಗುಣಗಳಿವೆ: ಸತ್ವ- ಗುಣ, ರಜೋ- ಗುಣ, ತಮೋ- ಗುಣ. ಈ ಮೂರು ಗುಣಗಳ ಪರಸ್ಪರ ಕ್ರಿಯೆಯ ಮೂಲಕ, ಮನಸ್ಸು, ಬುದ್ಧಿ, ಅಹಂಕಾರ -ಎನ್ನುವ ಸೂಕ್ಷ್ಮ ಅಂಶಗಳು- ಉತ್ಪನ್ನವಾಗುತ್ತವೆ, ತದನಂತರ ಸೂಕ್ಷ್ಮ ಅಂಶಗಳಿಂದ, ಸ್ಥೂಲ ಅಂಶಗಳು ಉತ್ಪನ್ನವಾಗುತ್ತವೆ."
|