"ಆದ್ದರಿಂದ ರಾಜ ಕುಲಶೇಖರ ಹೇಳುತ್ತಾರೆ" ನಾನು ಆ ಸಮಯದವರೆಗೂ ಕಾಯಲು ಸಾಧ್ಯವಿಲ್ಲ ಯಾವಾಗ ಎಲ್ಲವೂ ತಳಮೇಲು ಆಗಿರುವುದೋ. ಈಗ ನನ್ನ ಮನಸ್ಸು ಸದೃಡವಾಗಿದೆ. ನಾನು ತಕ್ಷಣ ನಿಮ್ಮ ಪಾದ ಕಮಲದ ದಂಟಿನಲ್ಲಿ ಪ್ರವೇಶಿಸುವಂತಾಗಲಿ. "ಇದರರ್ಥ ಅವರು ಈ ರೀತಿ ಪ್ರಾರ್ಥಿಸುತ್ತಿದ್ದಾರೆ," ನಾನು ನನ್ನ ಜೀವನದ ಉತ್ತಮ ಸ್ಥಿತಿಯಲ್ಲಿರುವಾಗ ನಾನು ಸಾಯುವಂತಾಗಲಿ ಅದರಿಂದ ನಿಮ್ಮ ಪಾದ ಪದ್ಮಗಳನ್ನು ನೆನಪಿಸಿಕೊಳ್ಳಲು ಸಾಧ್ಯವಾಗುತ್ತದೆ. "ಬೇರೆ ರೀತಿಯಲ್ಲಿ ಹೇಳುವುದಾದರೆ, ಅವರು ನಮಗೆ ಬೋಧನೆಯನ್ನು ನೀಡುತ್ತಿದ್ದಾರೆ, ನಮ್ಮ ಮನಸ್ಸು ಸದೃಡವಾಗಿದ್ದಾಗ ನಮ್ಮ ಮನಸ್ಸನ್ನು ಕೃಷ್ಣನ ಪಾದ ಪದ್ಮಗಳ ಮೇಲೆ ತೊಡಗಿಸಿಕೊಳ್ಳಲು ನಾವು ಅಭ್ಯಾಸ ಮಾಡದಿದ್ದರೆ, ಸಾವಿನ ಸಮಯದಲ್ಲಿ ಅವನ ಬಗ್ಗೆ ಯೋಚಿಸುವುದು ಹೇಗೆ ಸಾಧ್ಯ?
|