KN/690107b ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಗೋವಿಂದ ದಾಸ ಠಾಕೂರ, ಅವರು ತಮ್ಮ ಮನಸ್ಸನ್ನು ಕೇಳುತ್ತಿದ್ದಾರೆ: 'ನನ್ನ ಪ್ರಿಯ ಮನಸ್ಸೇ, ನೀನು ನಿನ್ನನ್ನು ಅಭಯ-ಚರಣಾರವಿಂದರ ಪಾದ ಪದ್ಮಗಳಿಗೆ ತೊಡಗಿಸಿಕೊ'. ಅದು ಕೃಷ್ಣನ ಪಾದ ಕಮಲಗಳ ಹೆಸರು. ಅಭಯ ಎಂದರೆ ನಿರ್ಭಯ. ನೀವು ಕೃಷ್ಣನ ಪಾದ ಕಮಲಗಳ ಆಶ್ರಯ ಪಡೆದರೆ ಆಗ ನೀವು ತಕ್ಷಣ ನಿರ್ಭಯರಾಗುತ್ತೀರಿ. ಆದ್ದರಿಂದ ಅವರು 'ನನ್ನ ಪ್ರಿಯ ಮನಸ್ಸೇ, ನೀನು ಗೋವಿಂದನ ಪಾದ ಕಮಲದ ಸೇವೆಯಲ್ಲಿ ತೊಡಗಿಸಿಕೊ' ಎಂದು ಸಲಹೆ ನೀಡುತ್ತಾರೆ. ಭಜಹು ರೆ ಮನ ಶ್ರೀ - ನಂದ-ನಂದನ. ಅವರು ಗೋವಿಂದ ಎಂದು ಹೇಳುವುದಿಲ್ಲ. ಅವರು ಕೃಷ್ಣನನ್ನು 'ನಂದ ಮಹಾರಾಜರ ಮಗ' ಎಂದು ಸಂಬೋಧಿಸುತ್ತಾರೆ. ಆ ಪಾದ ಕಮಲಗಳು ನಿರ್ಭಯವಾಗಿರುವುದರಿಂದ, ಮಾಯೆಯ ದಾಳಿಯಿಂದ ನಿಮಗೆ ಯಾವುದೇ ಭಯವಿಲ್ಲ."
690107 - ಉಪನ್ಯಾಸ 'ಭಜಹು ರೆ ಮನ' ದ ಭಾವಾರ್ಥ - ಲಾಸ್ ಎಂಜಲೀಸ್