KN/690109 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಹೊರಗಿನವರು ಅವರು ಹೇಳುತ್ತಾರೆ," ಈ ಕೃಷ್ಣ ಪ್ರಜ್ಞೆ ಏನು? ಅವರು ಒಳ್ಳೆಯ ಮನೆಯಲ್ಲಿ ವಾಸಿಸುತ್ತಿದ್ದಾರೆ ಮತ್ತು ಅವರು ತುಂಬಾ ಚೆನ್ನಾಗಿ ತಿನ್ನುತ್ತಿದ್ದಾರೆ, ನೃತ್ಯ ಮಾಡುತ್ತಿದ್ದಾರೆ, ಹಾಡುತ್ತಿದ್ದಾರೆ. ವ್ಯತ್ಯಾಸವೇನು? ನಾವೂ ಅದನ್ನು ಮಾಡುತ್ತೇವೆ. ನಾವು ಕ್ಲಬ್‌ಗೆ ಹೋಗಿ ತುಂಬಾ ಚೆನ್ನಾಗಿ ತಿನ್ನುತ್ತೇವೆ ಮತ್ತು ನೃತ್ಯ ಕೂಡ ಮಾಡುತ್ತೇವೆ. ವ್ಯತ್ಯಾಸವೇನು? "ವ್ಯತ್ಯಾಸವಿದೆ. ಆ ವ್ಯತ್ಯಾಸವೇನು? ಹಾಲಿನ ಒಂದು ತಯಾರಿಕೆಯು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ, ಹಾಲಿನ ಮತ್ತೊಂದು ತಯಾರಿಕೆಯು ಗುಣಪಡಿಸುತ್ತದೆ. ಇದು ಪ್ರಾಯೋಗಿಕವಾಗಿದೆ. ಹಾಲಿನ ಮತ್ತೊಂದು ತಯಾರಿಕೆಯು ನಿಮ್ಮನ್ನು ಗುಣಪಡಿಸುತ್ತದೆ. ನೀವು ಕ್ಲಬ್‌ನಲ್ಲಿ ನೃತ್ಯ ಮಾಡುತ್ತಾ ಕ್ಲಬ್‌ನಲ್ಲಿ ತಿನ್ನುತ್ತಾ ಹೋದರೆ ಕ್ರಮೇಣವಾಗಿ ನೀವು ಭೌತಿಕವಾಗಿ ರೋಗಪೀಡಿತರಾಗುತ್ತೀರಿ.ಮತ್ತು ಹಾಗೆ ನೃತ್ಯ ಮತ್ತು ಹಾಗೆ ತಿನ್ನುವುದರಿಂದ ನೀವು ಆಧ್ಯಾತ್ಮಿಕವಾಗಿ ಪ್ರಗತಿ ಹೊಂದುವಿರಿ. ಯಾವುದನ್ನೂ ನಿಲ್ಲಿಸಬೇಕಾಗಿಲ್ಲ. ಸುಮ್ಮನೆ ಇದನ್ನು ತಜ್ಞ ವೈದ್ಯರ ನಿರ್ದೇಶನದ ಮೂಲಕ ಬದಲಾಯಿಸಬೇಕಾಗಿದೆ. ಅಷ್ಟೆ. ತಜ್ಞ ವೈದ್ಯರು ನಿಮಗೆ ಮೊಸರನ್ನು ಕೆಲವು ಔಷಧದ ಮಿಶ್ರಣದೊಂದಿಗೆ ನೀಡುತ್ತಾರೆ. ನಿಜವಾಗಿ ಔಷಧಿಯು ರೋಗಿಯನ್ನು ವಂಚಿಸುವುದು. ವಾಸ್ತವವಾಗಿ ಮೊಸರು ಕಾರ್ಯನಿರ್ವಹಿಸುತ್ತದೆ. ಆದ್ದರಿಂದ ಅದೇ ರೀತಿ ನಾವು ಎಲ್ಲವನ್ನೂ ಮಾಡಬೇಕಾಗಿದೆ ಆದರೆ ಅದು ಕೃಷ್ಣ ಪ್ರಜ್ಞೆಯ ಔಷಧದೊಂದಿಗೆ ಬೆರೆತಿರುವುದರಿಂದ ಅದು ನಿಮ್ಮ ಭೌತಿಕ ರೋಗವನ್ನು ಗುಣಪಡಿಸುತ್ತದೆ. ಅದೇ ಪ್ರಕ್ರಿಯೆ. "
690109 - ಉಪನ್ಯಾಸ ಭ. ಗೀತಾ ೪.೧೯-೨೫ - ಲಾಸ್ ಎಂಜಲೀಸ್