KN/690111 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಈ ಮಾನವ ರೂಪದ ಜೀವನವಿರುವುದು ಭಗವಂತನ ನಿಯಮಗಳನ್ನು ತಿಳಿದುಕೊಳ್ಳುವುದಕ್ಕೆ-ವೈಜ್ಞಾನಿಕವಾಗಿ, ಭಗವಂತನ ನಿಯಮಗಳು. ಅಧ್ಯಯನ ಮಾಡಿ, ನಾವು ಅನೇಕ ಉದಾಹರಣೆಗಳನ್ನು ನೀಡಿದಂತೆಯೇ . ನೀವು ಇತರರ ಆಸ್ತಿಗಳನ್ನು ಏಕೆ ಅತಿಕ್ರಮಿಸಬೇಕು? ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ನೀವು ಇತರ ಪ್ರಾಣಿಗಳನ್ನು ಏಕೆ ಕೊಲ್ಲಬೇಕು ? ಇವು ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸುತ್ತಿವೆ. ನೀವು ಅನುಭವಿಸಲೇಬೇಕು. ಆದ್ದರಿಂದ ನೀವು ಈ ವಿಷಯಗಳನ್ನು ತಿಳಿದುಕೊಳ್ಳಬೇಕು, ಏಕೆಂದರೆ ನೀವು ಈ ಸುಂದರವಾದ ದೇಹವನ್ನು ಹೊಂದಿದ್ದೀರಿ. ಸುಮ್ಮನೆ ನೀವು ತುಂಬಾ ಒಳ್ಳೆಯ ಉಡುಗೆಯನ್ನು ಧರಿಸಿ್ದರೆ, ನೀವು ಒಳ್ಳೆಯವರಾಗುವುದಿಲ್ಲ. ಇಲ್ಲ. ದೇವರ ನಿಯಮಗಳನ್ನು ತಿಳಿದಿರಬೇಕು. ಆಗ ನೀವು ಒಳ್ಳೆಯವರಾಗಿರುತ್ತೀರಿ. ಹೌದು. ಆದರೆ ಜನರು ಒಳ್ಳೆಯ ಉಡುಗೆ ತೊಡಲು ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ, ಮತ್ತು ಹೃದಯದಲ್ಲಿ ಪ್ರಾಣಿಗಳಿಗಿಂತ ಕೀಳು. ಈ ರೀತಿಯ ನಾಗರಿಕತೆ ಅವನತಿಸುತ್ತಿರುವ ನಾಗರಿಕತೆ. ಮತ್ತು ಈ ಹರೇ ಕೃಷ್ಣ ಜಪವು ಶುದ್ಧಗೊಳಿಸುತ್ತಿದೆ, ಶುದ್ಧೀಕರಣಗೊಳ್ಳುತ್ತಿದೆ, ಒಳಗೆ ಮತ್ತು ಹೊರಗೆ. ಆದ್ದರಿಂದ ನಿಮ್ಮ ನೈಜ ಜೀವನದ ಮಟ್ಟಕ್ಕೆ ಬರಲು, ನೀವು ಈ ಆಂದೋಲನವನ್ನು ಸ್ವೀಕರಿಸಬೇಕು. ಚೇತೋ- ದರ್ಪಣ -ಮಾರ್ಜನಂ (ಚೈ ಚ ಅಂತ್ಯ ೨೦.೧೨, ಶಿಕ್ಷಾಷ್ಠಕ ೧). ಹೃದಯವನ್ನು ಶುದ್ಧೀಕರಿಸುತ್ತಿದೆ. "

690111 - ಉಪನ್ಯಾಸ ಭ. ಗೀತಾ ೪.೩೧ - ಲಾಸ್ ಎಂಜಲೀಸ್