ನೀವು ಎಲ್ಲವನ್ನು ಪಡೆದಿರುವಿರಿ ಆದರೆ 'ಕೃಷ್ಣ ಗುರು ನಹೀ ಮಿಲೆ ಭಜ ಹರಿ ಎಯಿ', ಆದರೆ ನೀವು ಕೃಷ್ಣ ಮತ್ತು ಆಧ್ಯಾತ್ಮಿಕ ಗುರುವನ್ನು ಪಡೆಯಲು ಸಾಧ್ಯವಿಲ್ಲ. ನೀವು ಈ ದೈಹಿಕ ಸುಖಕ್ಕಾಗಿ ಎಲ್ಲಾ ಸೌಲಭ್ಯಗಳನ್ನು ಹೊಂದಬಹುದು - ತಿನ್ನುವ, ನಿದ್ರಿಸುವ, ಸಂಯೋಗಿಸುವ, ರಕ್ಷಿಸುವ - ಯಾವುದೇ ಜೀವನದಲ್ಲಿ, ಆದರೆ ಕೃಷ್ಣನನ್ನ ಮತ್ತು ಆಧ್ಯಾತ್ಮಿಕ ಗುರುವನ್ನು ಈ ಜೀವನದಲ್ಲಿ ಮಾತ್ರ ಹೊಂದಬಹುದು, ಮಾನವ ರೂಪ, ಕೃಷ್ಣ ಗುರು ನಹಿ ಮಿಲೆ. ಜನಮೆ ಜನಮೆ ಸಬೆ ಪಿತಾ ಮಾತಾ ಪಾಯ (ಪ್ರೇಮಾ-ವಿವರ್ತಾ). ತುಂಬಾ ಸರಳ: ಯಾವುದೇ ಜನ್ಮದಲ್ಲಿ ನೀವು ತಂದೆ ಮತ್ತು ತಾಯಿಯನ್ನು ಪಡೆಯುತ್ತೀರಿ, ಏಕೆಂದರೆ ತಂದೆ ಮತ್ತು ತಾಯಿ ಇಲ್ಲದೆ, ಹುಟ್ಟಿನ ಪ್ರಶ್ನೆ ಎಲ್ಲಿದೆ? ಜನಮೆ ಜನಮೆ ಸಬೆ ಪಿತಾ ಮಾತಾ ಪಾಯ. ಪ್ರತಿ ಜನ್ಮದಲ್ಲಿ ನೀವು ತಂದೆ ಮತ್ತು ತಾಯಿಯನ್ನು ಪಡೆಯಬಹುದು. ಆದರೆ ಕೃಷ್ಣ ಗುರು ನಹೀ ಮಿಲೆ ಭಜ ಹರಿ ಎಯಿ: ಆದರೆ ಪ್ರತಿ ಜನ್ಮದಲ್ಲಿ ಕೃಷ್ಣ ಮತ್ತು ಆಧ್ಯಾತ್ಮಿಕ ಗುರುವನ್ನು ಹೊಂದಲು ಸಾಧ್ಯವಿಲ್ಲ ಎಂಬುದನ್ನು ನೀವು ಯಾವಾಗಲೂ ನೆನಪಿನಲ್ಲಿಡಬೇಕು. ಆದ್ದರಿಂದ ಅದನ್ನು ಪಡೆಯಲು ಕಾತರವಿರಬೇಕು: ಕೃಷ್ಣ ಎಲ್ಲಿ? ಆಧ್ಯಾತ್ಮಿಕ ಗುರುಗಳೆಲ್ಲಿ ? ಅದು ಜೀವನದ ಪರಿಪೂರ್ಣತೆ. "
|