KN/690222 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಲಾಸ್ ಎಂಜಲೀಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಜನ್ಮ ಕರ್ಮ ಚ ಮೇ ದಿವ್ಯಮ್
ಯೋ ಜಾನಾತಿ ತತ್ವತಃ
ತ್ಯಕ್ತ್ವಾ ದೇಹಂ ಪುನರ್ ಜನ್ಮ
ನೈತಿ ಮಾಮ್ ಎತಿ ಕೌಂತೆಯ
(ಭ. ಗೀತಾ ೪.೯)

ನಾಲ್ಕನೇ ಅಧ್ಯಾಯದಲ್ಲಿ 'ನನ್ನ ಹುಟ್ಟಿನ, ಕಣ್ಮರೆಯಾಗುವ ಚಟುವಟಿಕೆಗಳೆಲ್ಲವೂ ಅತೀಂದ್ರಿಯವಾಗಿವೆ ಎಂದು ಹೇಳಲಾಗಿದೆ. ಯಾರಾದರೂ ನನ್ನ ಈ ಅತೀಂದ್ರಿಯ ಸ್ವರೂಪದ ಚಟುವಟಿಕೆಗಳಾದ, ಕಾಣಿಸಿಕೊಳ್ಳುವುದನ್ನು, ಕಣ್ಮರೆಯಾಗುವುದನ್ನು, ಅರ್ಥಮಾಡಿಕೊಂಡಲ್ಲಿ, ಇದರ ಫಲಿತಾಂಶವೆಂದರೆ ', ತ್ಯಕ್ತ್ವಾ ದೇಹಮ್,' ಈ ದೇಹವನ್ನು ತೊರೆದ ನಂತರ ', ಪುನರ್ ಜನ್ಮ ನೈತಿ,' ಅವನು ಈ ಭೌತಿಕ ಜಗತ್ತಿನಲ್ಲಿ ಮತ್ತೆ ಜನ್ಮ ತೆಗೆದುಕೊಳ್ಳುವುದಿಲ್ಲ'. ಅದನ್ನು ನಾಲ್ಕನೇ ಅಧ್ಯಾಯದಲ್ಲಿ ಹೇಳಲಾಗಿದೆ. ಅಂದರೆ ತಕ್ಷಣ ವಿಮೋಚನೆ ಸಾಧಿಸಲಾಗಿದೆ. ಇದು ಸತ್ಯ."

690222 - ಉಪನ್ಯಾಸ ಭ. ಗೀತಾ ೦೭.೦೧ - ಲಾಸ್ ಎಂಜಲೀಸ್