"ಈ ಜಪ ಮತ್ತು ಶ್ರವಣವು ಎಷ್ಟು ಧಾರ್ಮಿಕವಾಗಿದೆ ಎಂದರೆ ಅದು ನಿಮ್ಮ ಹೃದಯವನ್ನು ಕ್ರಮೇಣವಾಗಿ ಶುದ್ಧಗೊಳಿಸುತ್ತದೆ, ಮತ್ತು ದೇವರು ಎಂದರೇನು-ದೇವರು ಎಂದರೇನು, ಅವನೊಂದಿಗಿನ ನಿಮ್ಮ ಸಂಬಂಧ ಏನು, ಅವನ ಕಾರ್ಯವೇನು, ನಿಮ್ಮ ಕಾರ್ಯವೇನು ಎಂಬುದನ್ನು ನೀವು ಅರ್ಥಮಾಡಿಕೊಳ್ಳುವಿರಿ. ಈ ಎಲ್ಲ ವಿಷಯಗಳು ಕ್ರಮೇಣ, ಸ್ವಯಂಚಾಲಿತವಾಗಿ ಬರುತ್ತವೆ. ಇದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ... ಒಂದು ರೋಗವನ್ನು ಗುಣಪಡಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ, ಹೇಗೆ ನೀವು ಔಷದಿಯನ್ನು ನೀಡಿದ ತಕ್ಷಣ ಅವನು ಗುಣಮುಖನಾಗುವುದಿಲ್ಲವೋ. ಕೇಳುವ ಮೂಲಕ ತಕ್ಷಣವೇ ಅವನು ಗುಣಮುಖನಾಗಬಹುದು, ಒಬ್ಬನು ಸರಿಯಾಗಿ ಕೇಳಿಸಿಕೊಂಡರೆ. ಆದರೆ, ಅದು ಸಾಧ್ಯವಿಲ್ಲ, ಏಕೆಂದರೆ ನಾವು ಈ ಐಹಿಕ ಕಲ್ಮಶಗಳೊಂದಿಗೆ ಸಂಬಂಧ ಹೊಂದಿದ್ದೇವೆ.ಇದಕ್ಕೆ ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ ಇದು ಈ ಯುಗದ ಏಕೈಕ ಪ್ರಕ್ರಿಯೆ. ಸುಮ್ಮನೆ ನೀವು ಈ ಜಪವನ್ನು ಕೇಳಿ, ಹರೇ ಕೃಷ್ಣ, ಮತ್ತು ಕೇಳಿ, ಮತ್ತು ನಿಮಗೆ ಸಮಯ ಸಿಕ್ಕರೆ ನೀವು ಪುಸ್ತಕಗಳನ್ನು ಓದಬಹುದು . ಅದು ಸಹ ಕೇಳುವುದೇ ಆಗಿದೆ. "
|