"ಈ ಕೃಷ್ಣ ಪ್ರಜ್ಞೆಯ ಆಂದೋಲನವು ನಿದ್ರಾವಸ್ಥೆಯಲ್ಲಿರುವ ಜೀವಿಗಳನ್ನು ಜಾಗೃತಗೊಳಿಸುವುದಾಗಿದೆ. ವೈದಿಕ ಸಾಹಿತ್ಯದಲ್ಲಿ, ಉಪನಿಷತ್ತುಗಳಲ್ಲಿ, "ಉತ್ತಿಷ್ಠ ಜಾಗೃತ ಪ್ರಾಪ್ಯ ವರಾನ್ ನಿಬೋಧತ" (ಕಠ ಉಪನಿಷತ್ತು, ೧.೩.೧೪) ಎಂದು ಹೇಳುವ ಈ ಶ್ಲೋಕಗಳನ್ನು ನಾವು ಕಾಣುತ್ತೇವೆ. ವೈದಿಕ ಧ್ವನಿ, ಅರಿವಿಗೆ ಮೀರಿದ ಧ್ವನಿ, "ಓ ಮಾನವ ಕುಲವೇ, ಓ ಜೀವಿಯೇ, ನೀವು ನಿದ್ರಾವಸ್ಥೆಯಲ್ಲಿದ್ದೀರಿ, ದಯವಿಟ್ಟು ಎದ್ದೇಳಿ. "ಉತ್ತಿಷ್ಠತ. ಉತ್ತಿಷ್ಠತ ಎಂದರೆ 'ದಯವಿಟ್ಟು ಎದ್ದೇಳು' ಎಂದರ್ಥ". ಹೇಗೆ ಒಬ್ಬ ಪುರುಷ ಅಥವಾ ಹುಡುಗ ತುಂಬಾ ನಿದ್ರಾವಸ್ಥೆಯಲ್ಲಿದ್ದಾಗ, ಮತ್ತು ಅವನು ಕೆಲವೂ೦ದು ಮುಖ್ಯವಾದ ಕೆಲಸವನ್ನು ಮಾಡಬೇಕಾಗಿದೆ ಎಂದು ತಿಳಿದ ಪೋಷಕರು, 'ನನ್ನ ಪ್ರೀತಿಯ ಹುಡುಗನೇ, ದಯವಿಟ್ಟು ಎದ್ದೇಳು. ಈಗ ಬೆಳಗಿನ ಜಾವ. ನೀನು ಹೋಗಬೇಕು. ನೀನು ನಿನ್ನ ಕೆಲಸಕ್ಕೆ ಹೋಗಬೇಕು. ನೀನು ನಿನ್ನ ಶಾಲೆಗೆ ಹೋಗಬೇಕು".
|