KN/690507 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಬೋಸ್ಟನ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
""ಪ್ರತಿ ಯುಗದಲ್ಲಿ, ಮೇಧಾವಿ ವರ್ಗದ ಪುರುಷರ ವರ್ಗವಿದೆ. ಆದ್ದರಿಂದ ಈ ಬುದ್ಧಿಜೀವದ ವರ್ಗವನ್ನು ಬ್ರಾಹ್ಮಣ ಎಂದು ಕರೆಯಲಾಗುತ್ತದೆ. ಮತ್ತು ಮುಂದಿನ ವರ್ಗ, ಆಡಳಿತ ವರ್ಗ. ಯಾರು ರಾಜ್ಯ, ಸರ್ಕಾರದ ಆಡಳಿತಕ್ಕಾಗಿ ರಾಜಕೀಯದಲ್ಲಿ ಪಾಲ್ಗೊಳ್ಳುವವರೋ, ಅವರನ್ನು ಕ್ಷತ್ರಿಯರೆಂದು ಕರೆಯುತ್ತಾರೆ. ಕ್ಷತ್ರಿಯ ಎಂದರೆ ' ಯಾರು ಮನುಷ್ಯನನ್ನು ಇತರರಿಂದ ನೋಯಿಸದಂತೆ ರಕ್ಷಿಸುವವನೋ', ಅಂಥವರನ್ನು ಕ್ಷತ್ರಿಯ ಎಂದು ಕರೆಯಲಾಗುತ್ತದೆ. ಅಂದರೆ, ಅದು ಆಡಳಿತಗಾರರ, ಸರ್ಕಾರದ ವ್ಯವಹಾರವಾಗಿದೆ. ಆದ್ದರಿಂದ ಬ್ರಾಹ್ಮಣ, ಕ್ಷತ್ರಿಯ, ನಂತರ ವೈಶ್ಯರು. ವೈಶ್ಯರು ಅಂದರೆ ಉತ್ಪಾದಕ ವರ್ಗ, ಜನರ ಬಳಕೆಗಾಗಿ ವಸ್ತುಗಳನ್ನು ಉತ್ಪಾದಿಸಲು ಆಸಕ್ತಿ ಹೊಂದಿರುವವರು. ವ್ಯಾಪಾರಿ ವರ್ಗ, ಕೈಗಾರಿಕೋದ್ಯಮಿಗಳು, ಅವರನ್ನು ವೈಶ್ಯರು ಎಂದು ಕರೆಯಲಾಗುತ್ತದೆ. ಮತ್ತು ಕೊನೆಯ ವರ್ಗ, ನಾಲ್ಕನೇ ವರ್ಗ, ಅವರನ್ನು ಶೂದ್ರರು ಎಂದು ಕರೆಯಲಾಗುತ್ತದೆ. ಶೂದ್ರರು ಎಂದರೆ ಅವರು ಬುದ್ಧಿಜೀವಿಗಳಲ್ಲ, ಅಥವಾ ಅವರು ಆಡಳಿತಗಾರರಲ್ಲ ಅಥವಾ ಕೈಗಾರಿಕೋದ್ಯಮಿಗಳಲ್ಲ ಅಥವಾ ವ್ಯಾಪಾರಿಗಳಲ್ಲ. ಆದರೆ ಅವರು ಇತರರಿಗೆ ಸೇವೆ ಸಲ್ಲಿಸಬಹುದು. ಅಷ್ಟೇ. ಆದ್ದರಿಂದ ಕಲೌ ಶೂದ್ರ ಸಂಭವ ಎಂದು ಹೇಳಲಾಗುತ್ತದೆ. ಆಧುನಿಕ ಯುಗದಲ್ಲಿ ವಿಶ್ವವಿದ್ಯಾನಿಲಯದಲ್ಲಿ ಜನರನ್ನು ಶೂದ್ರರಾಗಲು ಕಲಿಸಲಾಗುತ್ತಿದೆ.
690507 - ಹಾರ್ವರ್ಡ್ ವಿಶ್ವವಿದ್ಯಾಲಯದ ಡಿವಿನಿಟಿ ಸ್ಕೂಲ್ ಕೇಂಬ್ರಿಡ್ಜ್‌ನಲ್ಲಿ ಉಪನ್ಯಾಸ - ಬೋಸ್ಟನ್