KN/690509 ಉಪನ್ಯಾಸ - ಶ್ರೀಲ ಪ್ರಭು ಪಾದರ ಅಮೃತ ವಾಣಿ ಕೊಲಂಬಸ್

KN/Kannada - ಶ್ರೀಲ ಪ್ರಭು ಪಾದರ ಅಮೃತ ವಾಣಿ
"ಅದ್ವೈತ ಎಂದರೆ ಕೃಷ್ಣನು ತನ್ನನ್ನು ತಾನೇ ವಿಸ್ತರಿಸಿಕೊಳ್ಳುತ್ತಾನೆ. ಕೃಷ್ಣನು ತನ್ನನ್ನು ತಾನೇ ವಿಸ್ತರಿಸಬಲ್ಲನು, ಅದು ದೇವರು. ಹೇಗೆ ನಾನು ಇಲ್ಲಿ ಕುಳಿತಿರುವೆನೋ, ನೀವೂ ಇಲ್ಲಿ ಕುಳಿತಿದ್ದೀರಿ. ನೀವು ನಿಮ್ಮ ಮನೆಯಲ್ಲಿ ಯಾರೋ ಸಂಬಂಧಿಕರಿಗೆ ಬೇಕಾಗಿದ್ದೀರಿ ಎಂದು ಭಾವಿಸೋಣ, ಆದರೆ ಯಾರಾದರೂ ಕೇಳಿದರೆ 'ಶ್ರೀ. ಅಂತಹ- ಮತ್ತು-ಅಂತಹವರು ಮನೆಯಲ್ಲಿದ್ದಾರೆಯೇ ,' ಆದ್ದರಿಂದ ಉತ್ತರವು... 'ಇಲ್ಲ. ಅವನು ಮನೆಯಲ್ಲಿಲ್ಲ'. ಕೃಷ್ಣನು ಹಾಗಲ್ಲ. ಕೃಷ್ಣ, ಗೋಲೋಕ ಏವ ನಿವಾಸತಿ ಅಖಿಲಾತ್ಮ-ಭೂತಃ (ಬ್ರ. ಸಂ ೫.೩೭) . ಅವನು ಎಲ್ಲೆಡೆ ಇದ್ದಾನೆ. ಕುರುಕ್ಷೇತ್ರದ ಯುದ್ಧಭೂಮಿಯಲ್ಲಿ ಕೃಷ್ಣನು ಅರ್ಜುನನೊಂದಿಗೆ ಮಾತನಾಡುತ್ತಿದ್ದನು, ಆದ್ದರಿಂದ ಅವನು ಗೋಲೋಕ ಅಥವಾ ವೈಕುಂಠದಲ್ಲಿ ಇರಲಿಲ್ಲವೆಂದಲ್ಲ, ಗೋಲೋಕ, ವೈಕುಂಠ ಮಾತ್ರವಲ್ಲ, ಎಲ್ಲೆಡೆಯೂ ಇದ್ದನು. ನೀವು ಭಗವದ್ಗೀತೆಯಲ್ಲಿಯೂ ಕಾಣುವಿರಿ, ಶ್ರೀಕೃಷ್ಣನು ಈಗ ಇಲ್ಲಿಯೂ ಇದ್ದಾನೆ. ಈಶ್ವರಃ ಸರ್ವ-ಭೂತಾನಾಂ ಹೃದ್ದೇಶೇ ಅರ್ಜುನ ತಿಷ್ಠತಿ(ಭ.ಗೀ- ೧೮.೬೧). ಕೃಷ್ಣ ಪ್ರತಿಯೊಬ್ಬರ ಹೃದಯದಲ್ಲಿದ್ದಾನೆ,ನಿಮ್ಮ ಹೃದಯದಲ್ಲಿ ಕೃಷ್ಣನಿದ್ದಾನೆ, ನನ್ನ ಹೃದಯದಲ್ಲಿ ಕೃಷ್ಣನಿದ್ದಾನೆ, ಪ್ರತಿಯೊಬ್ಬರ ಹೃದಯದಲ್ಲಿ."
690509 - ಉಪನ್ಯಾಸ ಭ.ಗೀ-೦೪.೦೧-೦೨ - ಕೊಲಂಬಸ್